ಬೀದರ – ಈ ಸಲ ಎಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗದಿದ್ದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಮ್ ಇಬ್ರಾಹಿಮ್ ಹೇಳಿದರು.
ಬೀದರನಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಯ ಸಮಾವೇಶದಲ್ಲಿ ಮಾತನಾಡಿದ ಅವರು, ನಾವೇನಾದ್ರು ಎಚ್ಡಿಕೆ ಯನ್ನು ಸಿಎಂ ಮಾಡಿ ಎಂದು ಕಾಂಗ್ರೆಸ್ ಮನೆಗೆ ಹೊಗಿದ್ದೆವಾ. ಮುಂಬೈ ಹೋಟೆಲ್ ನಲ್ಲಿ 14 ಜನರನ್ನು ಮಲಗಿಸಿ ವಿಡಿಯೋ ಸರ್ಕಾರ ಮಾಡಿದ್ರೆ. ಆ ವಿಡಿಯೋ ಇಗಾ ಹೊರಗೆ ಬರಬಹುದು. ಯಾರು ಆ ರವಿ, ಬಹಳ ಮದುವೆಯಾಗಿದ್ದಾನೆ. ಇದು ಯಾವ ಲವ್ ಜಿಹಾದ್ ಬಿಜೆಪಿಗರೆ ಎಂದು ಪ್ರಶ್ನೆ ಹಾಕಿದರು.
ಪಂಚರಥ ಮೋದಿಗೆ, ಸೋನಿಯಾ ಗಾಂಧಿ ಗೆ ಬೈಯೋದಲ್ಲ. ರಾಜ್ಯದಲ್ಲಿ ಅಭಿವೃದ್ಧಿ ತರಲು ಹೊರಟಿದ್ದೇವೆ ಎಂದರು.
ಮೋದಿಯವರನ್ನು ಉದ್ದೇಶಿಸಿ ಮಾತನಾಡಿದ ಇಬ್ರಾಹಿಂ, ಹುಚ್ಚನ ಕೈಯಲ್ಲಿ ಬ್ಲೇಡ್‌ಕೊಟ್ಟಿದ್ದೇವೆ ಎಲ್ಲಿ ಹಾಕುತ್ತಾನೋ ಗೊತ್ತಿಲ್ಲ. ಸಂಸಾರ ಇಲ್ಲದವರ ಕೈಗೆ ಸರ್ಕಾರ ಕೊಡಬಾರದು ಎಂದು ಪರೋಕ್ಷ ವಾಗ್ದಾಳಿ ಮಾಡಿದರು.
ಆ ಯೋಗಿಗೆ ಲವ್ ಜೀಹಾದ್ ಬಗ್ಗೆ ಗೊತ್ತಿದೆಯಾ ? ಯೋಗಿಗೆ ಸಂಸಾರ ಇಲ್ಲ ಅವನಿಗೆ ಏನು ಗೊತ್ತು ಲವ್ ಬಗ್ಗೆ. ಹಿಂದೂ ಮುಸ್ಲಿಂ ಒಂದೇ ತಾಯಿ ಮಕ್ಕಳಂತೆ ಬದುಕ ಬೇಕು. ಮುಸ್ಲಿಂ – ಮುಸ್ಲಿಂ ಎಂದು ನೋಡಬೇಡಿ, ದೇಶವನ್ನು ನೋಡಬೇಕು ಎಂದು ರಹೀಂಖಾನ್ ಗೆ ಟಾಂಗ್ ನೀಡಿದರು.
ವರದಿ: ನಂದಕುಮಾರ ಕರಂಜೆ, ಬೀದರ