ಸಿಂದಗಿ: ಮನುಷ್ಯನಿಗೆ ಮೊದಲು ಗೌರವ ಮತ್ತು ಘನತೆ ಇರಬೇಕು. ಜಾತಿ—ಧರ್ಮ ಯಾವ ಬೇಧ ಭಾವವೂ ಇಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ನಾವು ಎಲ್ಲರೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ತಾಲೂಕು ತಹಶೀಲ್ದಾರ ಕರೆಪ್ಪ ಬೆಳ್ಳಿ ಹೇಳಿದರು.
ನಗರದ ಸಂಗಮ ಸಂಸ್ಥೆ, ಸಿಂದಗಿ ಇವರ ವತಿಯಿಂದ ಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕ ಶಿವಶರಣಪ್ಪ ಎಸ್. ಸೂರಪುರ ಮಾತನಾಡಿ, “ಪ್ರತಿಯೊಬ್ಬರಿಗೂ ಸ್ವಾತಂತ್ರವಾಗಿ ಬದುಕುವ, ವಾಸಿಸುವ ಮತ್ತು ಸಮಾನತೆಯಿಂದ ಬದುಕುವ ಹಕ್ಕು ಇದೆ. ಜನಾಂಗ—ಜಾತಿ—ಧರ್ಮದ ಬೇಧ ಭಾವ ಸಮಾಜದಲ್ಲಿ ಸ್ಥಾನ ಪಡುವಂತಿಲ್ಲ,” ಎಂದರು.
ಸಂಗಮ ಸಂಸ್ಥೆ ನಿರ್ದೆಶಕ ಫಾದರ್ ಸಂತೋಷ್ ಮಾತನಾಡಿ, ವಿಶ್ವಸಂಸ್ಥೆಯು ಪ್ರತಿಯೊಬ್ಬ ಮನುಷ್ಯ ನಿಗೂ ಜೀವಿಸುವ ಹಕ್ಕು, ಭಾಗವಹಿಸುವ ಹಕ್ಕು ಹಾಗೂ ಸಮಾನತೆಯ ಹಕ್ಕನ್ನು ನೀಡಿದೆ. ಈ ಹಕ್ಕುಗಳನ್ನು ಕಾನೂನುಗಳ ಮೂಲಕ ಅನುಷ್ಠಾನಕ್ಕೆ ತರುವುದು ನಮ್ಮ ಸಂಯುಕ್ತ ಜವಾಬ್ದಾರಿ ಎಂದು ಹೇಳಿದರು.
ಸಿಸ್ಟರ್ ಸಿಂಥಿಯಾ ಅವರು ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಿಂದುತಾಯಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸರಿತಾ ಹರಿಜನ, ರಶ್ಮಿಪ್ರಿಯಾ —ವೈದ್ಯಾಧಿಕಾರಿ, ತಾಲೂಕಾ ಆಸ್ಪತ್ರೆ, ಸಿಂದಗಿ, ಶ್ರೀಮತಿ ರುಭಿನಾ ನದಾಪ್— ಆಪ್ತ ಸಮಾಲೋಚಕಿ, ಹಾಗೂ ವಿವಿಧ ಗ್ರಾಮಗಳ ಮಹಿಳಾ ಸಂಘಗಳ ಸದಸ್ಯರು ಭಾಗವಹಿಸಿ ಮಾನವ ಹಕ್ಕುಗಳ ಕುರಿತ ಜಾಗೃತಿ ಪಡೆದರು. ಕಾರ್ಯಕ್ರಮವನ್ನು ತೇಜಸ್ವಿನಿ ಹಳ್ಳದಕೇರಿ ನಿರೂಪಿಸಿದರು. ವಿಜಯ ಭಂಟನೂರ ಸ್ವಾಗತಿಸಿದರು. ಉಮೇಶ್ ವಂದಿಸಿದರು.

