79 ನೇ ಭಾರತ ಉತ್ಸವ ;  ಸ್ವಾತಂತ್ರ್ಯವನ್ನು ಗೌರವಿಸುವುದು ಎಂದರೆ ಭವಿಷ್ಯವನ್ನು ಪ್ರೇರೇಪಿಸುವುದು

Must Read

ಹಮಾರಾ ಭಾರತ್ ವಿಕಸಿತ್ ಭಾರತ್…                    ಹರ್ ಕರಂ ಅಪನಾ ಕರೆಂಗೆ ಹೇ ವತನ್ ತೆರೆ ಲಿಯೆ…. ವಂದೇ ಮಾತರಂ ವಂದೇ ಮಾತರಂ ಸುಜಲಾಂ….ಸುಫಲಾಂ..ಮಲಯಜ ಶೀತಲಾಂ….

ಎಲ್ಲಾ ಕಡೆ ದೇಶ ಭಕ್ತಿಗೀತೆಗಳ ಸಂಭ್ರಮ.ಆಗಸ್ಟ್ ತಿಂಗಳು ಎಲ್ಲಿಲ್ಲದ ಸಂಭ್ರಮ ಸಡಗರ….ಅಗಸ್ಟ್ 15. 2025 ರಂದು 79ನೆಯ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತಿದೆ. ಇದು ಪ್ರಗತಿ ಹಾಗೂ ಏಕತೆಯ ಸಂಕೇತ. ಈ ದಿನದಂದು ನಾವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳಿಗೆ ಗೌರವ ಸಲ್ಲಿಸುತ್ತೇವೆ.

ದೇಶದ ಇದುವರೆಗಿನ ಪ್ರಗತಿಯನ್ನು ಆಲೋಚಿಸುತ್ತೇವೆ. ಪ್ರತಿಯೊಬ್ಬ ನಾಗರಿಕನು ಬಲವಾದ ಎಲ್ಲರನ್ನು ಒಳಗೊಂಡ ಹಾದಿಯಲ್ಲಿ ಸಾಗಲು ಪ್ರೇರೇಪಿಸುತ್ತೇವೆ.ಭಾರತ ದೇಶ 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ದೇಶದಲ್ಲಿ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ “ಜನ ಗಣ ಮನ”ವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ.

ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ.ಸ್ವಾತಂತ್ರದ ಮಹತ್ವ ಹಾಗೂ ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡುವ ಗುರಿ ಹೊಂದಿದೆ.

ಚಿಕ್ಕ ಚಿಕ್ಕ ವಸಾಹತು ಅರಸರ ಆಳ್ವಿಕೆಯಲ್ಲಿದ್ದು ಅನೇಕ ಸಂಸ್ಥಾನಗಳನ್ನು ಒಳಗೊಂಡ ಭಾರತ ದೇಶವು ಇಂದು … ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು, ವಿಶ್ವದ ನಾಲ್ಕನೆಯ ಅಭಿವೃದ್ಧಿ ಹೊಂದಿದ ದೇಶವಾಗಿ ಜಾಗತಿಕ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಿರುವ ನವ ಭಾರತದ ಸಾಮರ್ಥ್ಯ ಹೆಚ್ಚಾಗುತ್ತಿದೆ.

ಇಡೀ ಜಗತ್ತು ಹೊಸ ಭಾರತದ ಶಕ್ತಿ ಸಾಮರ್ಥ್ಯ ಕಂಡಿದೆ. ಸ್ವಂತ ಅಗತ್ಯಗಳಿಗೆ ಅಗತ್ಯ ನೀಡಿ ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಸಾಧಿಸುವ ಮೂಲಕ ವಿಶ್ವಕ್ಕೆ ಭಾರತದ ಅನಿವಾರ್ಯತೆ ಸೃಷ್ಟಿಸಬೇಕೆಂದು ನಮ್ಮ ಹೆಮ್ಮೆಯ ಮೋದಿಯವರು ಕರೆ ಕೊಟ್ಟಿದ್ದು “ವಿಕಸಿತ್ ಭಾರತ್ @ 2047 “ಜಾಗತಿಕ ಮಟ್ಟದಲ್ಲಿ ಮಹತ್ವದ ಬದಲಾವಣೆಯತ್ತ ಹೆಜ್ಜೆಹಾಕುತ್ತಿದೆ..

ಎರಡನೆಯ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿದ ದೇಶವಾದ ಭಾರತ ದೇಶವು 140 ಕೋಟಿ ಜನ ಸಂಖ್ಯೆ ಹೊಂದಿದ್ದು,70% ಕೃಷಿ ಆಧಾರಿತ ದೇಶವಾಗಿದೆ…..
ಕೃಷಿಕರನ್ನೇ ಒಳಗೊಂಡಿರುವ ಭಾರತ ದೇಶವು ಇಂದು.. ವಿವಿಧ ಕ್ಷೇತ್ರಗಳಲ್ಲಿ ತನ್ನದೇ ದಾಖಲೆಯನ್ನು ಸೃಷ್ಟಿ ಮಾಡುತ್ತಾ ಬರುತ್ತಿದೆ. ಸ್ಪೇಸ್ ಸೆಕ್ಟರ್ ಅಂತರಿಕ್ಷಯಾನದಲ್ಲಿ ತನ್ನದೇ ದಾಖಲೆಯನ್ನು ತೆರೆದಿರುವ ಭಾರತವೂ ಚಂದ್ರಯಾನ 3 ಯಶಸ್ವಿ ಉಡಾವಣೆಯನ್ನು ದಾಖಲಿಸಿದೆ.

ಕ್ರಿಕೆಟ್, ಚೆಸ್, ಒಲಿಂಪಿಕ್ ಗೇಮ್ಸ್ ನಲ್ಲಿ ಭಾರತೀಯರ ಸಾಧನೆ ಮುಂದುವರಿದಿದೆ, ಸಿನಿಮಾ ರಂಗದಲ್ಲಿ ಜಗತ್ತನ್ನೆ ಹಿಂದಿಕ್ಕಿದೆ.ಐಟಿಬಿಟಿ ಯಲ್ಲಿ ಮಹತ್ವದ ಬದಲಾವಣೆಯೊಂದಿಗೆ ಉದ್ಯೋಗ ಸೃಷ್ಟಿಸಿದ ಭಾರತ ಔದ್ಯೋಗಿಕ ಕ್ರಾಂತಿ ಸೃಷ್ಟಿ ಮಾಡಿದೆ. ಶೈಕ್ಷಣಿಕ ಕ್ಷೇತ್ರದಲ್ಲಿನ ಬದಲಾವಣೆ ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದು ಮಾನವ ಸಂಪನ್ಮೂಲ ಶ್ರೀಮಂತಗೊಳ್ಳುತ್ತಿದೆ. ಪ್ರವಾಸೋದ್ಯಮ ಇಲಾಖೆಗೆ ಒತ್ತು ಕೊಟ್ಟಿದ್ದು ಐತಿಹಾಸಿಕ ಪರಂಪರೆಯ ರಕ್ಷಣೆಗೆ ಮಹತ್ವ ಸಿಕ್ಕಿದೆ.

ಕೃಷಿ ಕ್ಷೇತ್ರದಲ್ಲಿ ಅನೇಕ ಬದಲಾವಣೆ ಮಾಡಿದ್ದು ಕಿಸಾನ್ ಸಮ್ಮಾನ ಯೋಜನೆಗಳು, ಉನ್ನತೀಕರಿಸಿದ ತಂತ್ರಜ್ಞಾನದ ವ್ಯವಸ್ಥೆ ಹಳ್ಳಿ ಹಳ್ಳಿಗೂ ತಲುಪುತ್ತಿದೆ.ಅಂತರಿಕ್ಷದಲ್ಲಿ ತನ್ನದೆ ಸಾಧನೆ ಮಾಡುತ್ತಿರುವ ಭಾರತದತ್ತ ವಿಶ್ವ ಮುಖ ಮಾಡಿದ್ದು, ಮುಂದಿನ ದಿನಗಳಲ್ಲಿ ಆರ್ಥಿಕತೆಗೆ ಬಲ ಸಿಗುವುದು.ಹಾಗೆಯೇ ಪ್ರಗತಿಪರ ರಾಷ್ಟ್ರಗಳೊಂದಿಗೆ ಭಾರತವು ಒಳ್ಳೆಯ ಸಂಬಂಧ ಹೊಂದಿರುವುದು ಜಾಗತೀಕರಣದ ಸಾಧನೆಯೇ ಸರಿ.ವಿಶ್ವದ ಮೂಲೆ ಮೂಲೆಗೂ ಭಾರತ ದೇಶದ ಪೋಷಕಾಂಶ ಭರಿತ ಸೂಪರ್ ಫುಡ್ ತಲುಪುವ ವ್ಯವಸ್ಥೆ ಮಾಡುತ್ತಿದೆ. ಕೈಗಾರಿಕಾ ಕ್ರಾಂತಿ ಉಂಟು ಮಾಡಿದ್ದು ಅನೇಕ ಚಿಕ್ಕ ಚಿಕ್ಕ ಉದ್ಯಮಿಗಳಿಗೆ ಬಲ ನೀಡಿ ಔದ್ಯೋಗಿಕರಣದೊಂದಿಗೆ ಯುವ ಜನತೆಗೆ ಉದ್ಯೋಗ ಸೃಷ್ಟಿಮಾಡಿವೆ.

ಭಾರತದಲ್ಲಿರುವ ಅನೇಕ ಬುದ್ಧಿವಂತ ತಂತ್ರಜ್ಞಾನಿಗಳು ಯುವ ವಿಜ್ಞಾನಿಗಳು ಜಗತ್ತಿನಾದ್ಯಂತ ತನ್ನ ಸೇವೆಯನ್ನು ನೀಡುತ್ತಿದ್ದಾರೆ…. ಮಾಹಿತಿ ಹಾಗೂ ತಂತ್ರಜ್ಞಾನದಲ್ಲಿ ತನ್ನದೇ ದಾಖಲೆ ಬರೆದಿರುವ ಭಾರತದಲ್ಲಿ ಇಸ್ರೊ ಸ್ಪೀಸ್ ಸೆಕ್ಟರ್ ರೆಫರ್ ಮಾಡಲಾಗಿದೆ, ಪ್ರೈವೇಟ್ ಸೆಟಲೈಟಗಳ ತಯಾರಿ ಹಾಗೂ ಉಡಾವಣೆಯಲ್ಲಿ ಭಾರತ ಮುಂಚೂಣಿಯಲ್ಲಿದೆ…

ಹಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೂ ಸುಮಾರು ಹೊತ್ತುಕೋಟಿ ಗ್ರಹಿಣಿಯರು ಆರ್ಥಿಕ ಸಬಲೀಕರಣ ಹೊಂದಿದ್ದು ಸಣ್ಣ ಪುಟ್ಟ ಗೃಹ ಆಧಾರಿತ ಉದ್ಯಮಗಳಿಂದ ಆರ್ಥಿಕತೆಯಲ್ಲಿ ದೇಶಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ… ಪೂರ್ಣ ಸಮರ್ಪಣ್ ರಾಷ್ಟ್ರ ಕಲ್ಯಾಣದ ಗುರಿ ಹೊಂದಿರುವ ಭಾರತ ದೇಶದಲ್ಲಿ ಹೈವೇ ರೋಡ್, ಏರ್ಪೋರ್ಟ್, ಆರೋಗ್ಯ ಮಂದಿರ, ಶಾಲೆಗಳು, ಉನ್ನತೀಕರಿಸಿದ ಸೇತುವೆಗಳು, ತೂಗು ಸೇತುವೆಗಳು ಹಾಗೂ ರೈಲ್ವೆ ಸೇವೆಯಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದು ಉನ್ನತಕರಿಸಿದ ಮೆಟ್ರೋ ಸೇವೆಗಳು ಒಂದೇ ಭಾರತ ಎಕ್ಸ ಪ್ರೆಸ್ ಸೇವೆ ನೀಡುತ್ತಿದ್ದು ಅನೇಕ ಸುಧಾರಣೆಗಳನ್ನು ಹೊಂದಿದೆ….

ಮಿಷನ್ ಕರ್ಮ ಯೋಗಿ,
ಹರ ಘರ್ ಗಂಗಾ,ಕಾನೂನುಗಳನ್ನು ಅಪರಾಧಿಕರಣದಿಂದ ಮುಕ್ತಗೊಳಿಸಲು”ಜನ್ ವಿಶ್ವಾಸ “ಮಸೂದೆ ಜಾರಿಗೊಳಿಸಲಾಗಿದೆ.ಅನೇಕ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ಬಯಸಿದ್ದು, ಅಗತ್ಯ ಸೇವೆಯನ್ನು ಒದಗಿಸಿ ಕಾನೂನು ವ್ಯವಸ್ಥೆ ಅಡಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸರಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿರುವುದು ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿದೆ….ಸ್ವಾತಂತ್ರ್ಯದ ಆರಂಭದಲ್ಲಿ ನಾವು ಭಾರತ ದೇಶದ ಪ್ರಗತಿಯ ಹೆಜ್ಜೆಯನ್ನು ಮೆಲಕು ಹಾಕಿದಾಗ ಎಲ್ಲ ಕ್ಷೇತ್ರಗಳಲ್ಲಿನ ಸಾಧನೆಯ ಫಲದಿಂದ ಇಂದು ಜಗತ್ತಿನ ಪ್ರಗತಿಪರ ದೇಶಗಳಲ್ಲಿ ಭಾರತ ದೇಶವು ಒಂದಾಗಿ ಜಗತ್ತಿನೊಂದಿಗೆ ಪೈಪೋಟಿ ಮಾಡುತ್ತಿರುವುದು ಶ್ಲಾಘನೀಯ…

1959 ಭಾರತದಲ್ಲಿ ಮೊದಲ ದೂರದರ್ಶನ ಕೇಂದ್ರ ಸ್ಥಾಪನೆ.

1960 ಹಸಿರುಕ್ರಾಂತಿ

1969 ಬ್ಯಾಂಕುಗಳ ರಾಷ್ಟ್ರೀಕರಣ ಹಾಗೂ
ಇಸ್ರೋ ಸ್ಥಾಪನೆ.

1970 ಶ್ವೇತ ಕ್ರಾಂತಿ.

1970 ಪಂಚವಾರ್ಷಿಕ ಯೋಜನೆಗಳ ಆರಂಭ, ಇದು ದೇಶದ ಚಿತ್ರಣವನ್ನೇ ಬದಲಾಯಿಸಿತು.

1973 ಅಪ್ಪಿಕೋ ಚಳುವಳಿ.
ಪರಿಸರ ರಕ್ಷಣೆಯ ಅಗತ್ಯತೆ

1974 ಪೋಖ್ರಾನ್ ಅಣ್ವಸ್ತ್ರ ಶಸ್ತ್ರಾಸ್ತ್ರ ಪರೀಕ್ಷೆ 01.

1975 ಮೊದಲ ಆರ್ಯಭಟ್ಟ ಉಪಗ್ರಹ ಉಡಾವಣೆ.
1976 ಲಸಿಕಾಕರಣ ಕ್ರಾಂತಿ ಆರಂಭಿಸಿದ್ದು ಸಾಂಕ್ರಾಮಿಕ ರೋಗಗಳಿಂದ ಮುಕ್ತಿ.                                         1979 ಮಂಡಲ್ ಕಮಿಷನ್ ನೇಮಕ.

1982 ಮೊದಲ ಕಲರ್ ಟಿವಿ ಪರಿಚಯ
1987 ಬಾಹ್ಯಾಕಾಶಕ್ಕೆ ಮೊದಲ ಭಾರತೀಯ ಪ್ರಯಾಣ..
ಬಾಹ್ಯಾಕಾಶದತ್ತ ಭಾರತೀಯರ ದಾಪುಗಾಲು
1983 ಭಾರತದ ಮೂಡಿಗೆ ಕ್ರಿಕೆಟ್ ವಿಶ್ವ ಕಪ್.
1985 ಮುಸ್ಲಿಂ ಮಹಿಳೆಯರ ರಕ್ಷಣೆ ಕಾಯ್ದೆ
1987 ಕ್ರಿಕೆಟ್ ವಿಶ್ವಕಪ್
1991 ಆರ್ಥಿಕ ಜಾಗತೀಕರಣ
1995 ಮೊಬೈಲ್ ಫೋನ್ ಸೇವೆ ಆರಂಭ
1998 ಪೋಖ್ರಾನ್ 02 ಅಣ್ವಸ್ತ್ರ ಪರೀಕ್ಷೆ..
ಸುಸಜ್ಜಿತ ಶಸ್ತ್ರಾಸ್ತ್ರಗಳಿಂದ ಭಾರತ ಸ್ವಾವಲಂಬಿಯಾಗಿದೆ ಎನ್ನುವ ಸಂದೇಶ
1999 ದೆಹಲಿ ಲಾಹೋರ್ ಬಸ್ ಸಂಚಾರ ಆರಂಭ
1999 ಕಾರ್ಗಿಲ್ ಯುದ್ಧದಲ್ಲಿ ಭಾರತದ ಜಯ
2005 ಮಾಹಿತಿ ಹಕ್ಕು ಕಾಯ್ದೆ
2005 ನರೇಗಾ ಯೋಜನೆ ಜಾರಿ.
2007 ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಪ್ರಥಮ ಟೀಮ್ 20 ವಿಶ್ವಕಪ್ ಭಾರತದ ಮುಡಿಗೆ .

2008 ಚಂದ್ರಯಾನ 1 ಯಶಸ್ವಿ

2008 ವಿಶ್ವ ಒಲಂಪಿಕ್ಸ್ ನಲ್ಲಿ ಭಾರತದ ಚಿನ್ನದ ಖಾತೆ ತೆಗೆದ ಅಭಿನವ್ ಬಿಂದ್ರಾ

2009  ಅಣ್ವಸ್ತ್ರ ಜಲಾಂತರ್ಗಾಮಿ

2010 ಭಾರತದಲ್ಲಿ ಕಾಮನ್ವೆಲ್ತ್ ಕ್ರೀಡೆಗಳ ಯೋಜನೆ

2011 ಎರಡನೆಯ ಬಾರಿ ಕ್ರಿಕೆಟ್ ವಿಶ್ವಕಪ್ ಭಾರತದ ಮುಡಿಗೆ

2013 ಆಹಾರ ಭದ್ರತಾ ಕಾಯ್ದೆ
ಮಂಗಳಯಾನ ಯಶಸ್ವಿ

2014 ಪೋಲಿಯೋ ಮುಕ್ತ ಭಾರತ ಅಭಿಯಾನ ಆರಂಭ

2015 ಜಿಪಿಎಸ್ ವ್ಯವಸ್ಥೆ ಆರಂಭ
2016 ನೋಟ್ ಅಮಾನ್ಯೀಕರಣ
ಹಾಗೂ ಉಜ್ವಲ್ ಯೋಜನೆ ಜಾರಿ

2017 ಜಿಎಸ್‌ಟಿ ತೆರಿಗೆ ಜಾರಿ ಹಾಗೂ
ತ್ರಿವಳಿ ತಲಾಖ್ ರದ್ದು

2019 ಭಾರತೀಯ ವಾಯು ಸೇನೆಗೆ ತೇಜಸ್ ಕೊಡುಗೆ
ಹಾಗೂ ಮಿಷನ್ ಶಕ್ತಿ ಯಶಸ್ವಿ

2019 ಚಂದ್ರಯಾನ 2 ಉಡಾವಣೆ

2020 ಒಲಂಪಿಕ್ಸ್ ನಲ್ಲಿ ನಿರಜ್ ಚೋಪ್ರಾ ಚಿನ್ನದ ಪದಕ

2021 ಕೊವಿಡ್ ಲಸಿಕೆ ಸ್ವಾವಲಂಬನೆ

2022 ಬುಡಕಟ್ಟು ದ್ರೌಪತಿ ಮುರ್ಮು ಮಹಿಳಾ ರಾಷ್ಟ್ರಪತಿ

2022 ಬೆಂಗಳೂರು ಏರ್ಪೋರ್ಟ್ ಟರ್ಮಿನಲ್ 2 ವಿಶ್ವಾಕರ್ಷಣೆ

2023 ಚಂದ್ರಯಾನ 3 ಯಶಸ್ವಿ ಉಡಾವಣೆ ಜಾಗತಿಕ ಮಟ್ಟದಲ್ಲಿ ಇತಿಹಾಸ ಬರೆದ ಭಾರತ ದೇಶ .

2003 ಮತ್ತು 2004 ರಲ್ಲಿ ಭಾರತಕ್ಕೆ ಮೂರು ಆಸ್ಕರ್ ಪ್ರಶಸ್ತಿ

2023 ಏಶಿಯನ್ ಹಾಕಿ ಚಾಂಪಿಯನಷಿಪ್ ಭಾರತದ ಮುಡಿಗೆ….

ಸ್ವತಂತ್ರ ಪೂರ್ವದಲ್ಲಿ ಅನಕ್ಷರತೆ, ಬಡತನ, ಗುಲಾಮಗಿರಿಗೆ ಒಳಪಟ್ಟ ನಮ್ಮ ಭಾರತವು ಇಂದು ಜಗತ್ತಿನೊಂದಿಗೆ ಪೈಪೋಟಿ ಮಾಡುತ್ತಿದೆ. ಡಿಜಿಟಲ್ ವ್ಯವಹಾರದಲ್ಲಿ ಮೊದಲ ಸ್ಥಾನದಲ್ಲಿದೆ. ಮೇಕ್ ಇನ್ ಇಂಡಿಯಾ ಎಂಬ ಹೊಸ ತತ್ವದ ಅಡಿಯಲ್ಲಿ ಸಂಪೂರ್ಣ ಸ್ವಾವಲಂಬಿತಾಗುವತ್ತ ಭಾರತ ಮುನ್ನಡೆದಿದೆ. ಇತ್ತೀಚೆಗೆ ಪಾಕಿಸ್ತಾನದ ಜೊತೆಗಿನ ಯುದ್ಧದಲ್ಲಿ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಬಳಸಿ ವಿಜಯಿಯಾಗಿರುವ ನಮ್ಮ ದೇಶದ ಶಸ್ತ್ರಾಸ್ತ್ರಗಳನ್ನು ಕೊಳ್ಳಲು ಹಲವು ದೇಶಗಳು ಮುಂದೆ ಬರುತ್ತಿವೆ. ಈಗ ನಮ್ಮಲ್ಲಿ 40,000 km ಉದ್ದದ ರೈಲು ಮಾರ್ಗ ಇದೆ.160 ವಿಮಾನ ನಿಲ್ದಾಣಗಳು30 ಜಲಮಾರ್ಗ,22 ಏಮ್ಸ್,,704 ವೈದ್ಯಕೀಯ ಕಾಲೇಜು ಗಳು,23 ಐಐಟಿ,21ಐಎಂ ಕಾಲೇಜು ಗಳು ನಮ್ಮಲ್ಲಿವೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಫಲ ಭಾರತ ಪ್ರಗತಿಪರ ರಾಷ್ಟ್ರಗಳೊಂದಿಗೆ ಪೈಪೋಟಿ ಮಾಡುತ್ತಿರುವುದಲ್ಲದೆ ಹಲವು ವಿಷಯಗಳಲ್ಲಿ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗುತ್ತಿದೆ.

 

ನಂದಿನಿ ಸುರೇಂದ್ರ ಸನಬಾಳ ಪಾಳಾ ಕಲಬುರಗಿ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group