ಹುನಗುಂದ: ನಗರದ ಸಂಗಮ ಪ್ರತಿಷ್ಠಾನದ ತಾಲೂಕು ಮಟ್ಟದ ಕಾವ್ಯ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಲೇಖಕಿ ದಾನೇಶ್ವರಿ ಸಾರಂಗಮಠ(ಪ್ರಥಮ), ಇನ್ನೋರ್ವ ಲೇಖಕಿ ನಾಗರತ್ನ ಭಾವಿಕಟ್ಟಿ(ದ್ವಿತೀಯ) ಮತ್ತು ಯುವ ಲೇಖಕ ಜಗದೀಶ ಹಾದಿಮನಿ(ತೃತೀಯ) ಬಹುಮಾನ ಪಡೆದಿದ್ದಾರೆ ಎಂದು ಪ್ರತಿಷ್ಠಾನದ ಸಂಚಾಲಕ ಎಸ್ಕೆ ಕೊನೆಸಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಕುಂದ ಅಮೀನಗಡ, ಡಾ.ಲಿಂಗರಾಜ ಗಗ್ಗರಿ, ನಿಂಗಮ್ಮ ಭಾವಿಕಟ್ಟಿ, ಬಸವರಾಜ ಕನ್ನೂರ ಮತ್ತು ಶ್ರೇಯಾಂಸ ಕೋಲಾರ ಅವರ ಕವಿತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ಸ್ಪರ್ಧೆಗೆ ೩೧ ಕವಿತೆಗಳು ಬಂದಿದ್ದವು.
ಅಂಕೋಲಾದ ಕವಿ ಶಿಕ್ಷಕ ಕೆ.ಬಿ.ವೀರಲಿಂಗನಗೌಡ್ರ, ಅಮೀನಗಡದ ಕವಿ, ಶಿಕ್ಷಕ ಮಹಾದೇವ ಬಸರಕೋಡ ಮತ್ತು ಹುನಗುಂದ ಸರ್ಕಾರಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ವೀರಭದ್ರಯ್ಯ ಶಶಿಮಠ ತೀರ್ಪುಗಾರರಾಗಿದ್ದರು.

