ನಿವೃತ್ತ ಮುಖ್ಯಗುರು ಬಸಣ್ಣ ವಾಲೀಕಾರ ಇವರ ಸನ್ಮಾನ

0
1511

ಸಿಂದಗಿ: ನಿವೃತ್ತ ಮುಖ್ಯಗುರು ಬಸಣ್ಣ ವಾಲೀಕಾರ್ ಅವರು 31 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಅಮೋಘವಾದುದ್ದು ಅವರ ಕೈಯಲ್ಲಿ ಕಲಿತ ಗ್ರಾಮೀಣ ಭಾಗದ ಸಾಕಷ್ಟು ವಿದ್ಯಾರ್ಥಿಗಳು ರಾಜ್ಯದ ಮೂಲೆ ಮೂಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಳವಾರ ಮಹಾಸಭಾ ನಿರ್ದೇಶಕ (ಬೆಂಗಳೂರ) ಬಿ.ವಾಯ್. ಯಾತನೂರ ಹೇಳಿದರು.

ತಾಲೂಕಿನ ಸಮೀಪದ ಗಬಸಾವಳಗಿ ಗ್ರಾಮದ ಆರಾಧ್ಯ ದೇವತೆ ಶ್ರೀ ಹೇಮರೆಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಸಮಸ್ತ ಗಬಸಾವಳಗಿ ಗ್ರಾಮಸ್ಥರಿಂದ ನಿವೃತ್ತ ಮುಖ್ಯಗುರು ಬಸಣ್ಣ ವಾಲೀಕಾರ ಇವರ ವಯೋನಿವೃತ್ತಿ ಪ್ರಯುಕ್ತ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದಿನ ಶಿಕ್ಷಣಕ್ಕೂ ಈಗಿನ ಶಿಕ್ಷಣಕ್ಕೂ ಬಹಳಷ್ಟು ವ್ಯತ್ಯಾಸವಿದೆ ವಾಲೀಕಾರ ಗುರುಗಳ ಬಡಿಗೆ ಏಟು ತಿಂದಿರುವ ಎಲ್ಲ ವಿದ್ಯಾರ್ಥಿಗಳು ಸರಕಾರಿ ಸೇವೆ ಸಲ್ಲಿಸುತ್ತಿದ್ದಾರೆ ಅವರೆಲ್ಲರೂ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಲು ಆಗಮಿಸಿದ್ದಾರೆ.

ಇನ್ನು ಕೆಲವು ವಿದ್ಯಾರ್ಥಿಗಳು ಇವರ ಹೊಡೆತಕ್ಕೆ ಶಾಲೆಯೇ ಬಿಟ್ಟು ಊರಲ್ಲೇ ಉಳಿದಿದ್ದರೆ ಉಳಿ ಏಟು ಪೆಟ್ಟು ಎಂದರೆ ಯಾವ ಕಲ್ಲು ಕೂಡಾ ಶಿಲೆ ಆಗುವುದಿಲ್ಲ ಶಿಕ್ಷಕರ ಮಾರ್ಗದಲ್ಲಿ ವಿದ್ಯಾರ್ಥಿಗಳು ನಡೆದುಕೊಂಡರೆ ಜೀವನ ಪಾವನ ಎಂದು ಹೇಳಿ ನಿವೃತ್ತ ಮುಖ್ಯಗುರು ಬಸಣ್ಣ ವಾಲೀಕಾರ ಅವರಿಗೆ ಶುಭವಾಗಲಿ ಎಂದು ಸಮಸ್ತ ಗ್ರಾಮಸ್ಥರು ಹಿರಿಯರು ಮಹಿಳೆಯರು ಹಾರೈಸಿದರು.

ಈ ಸಂದರ್ಭದಲ್ಲಿ ತಳವಾರ ಮಹಾಸಭಾ ಸಿಂದಗಿ ತಾಲೂಕ ಅಧ್ಯಕ್ಷ ಈರಣ್ಣ ಕುರಿ, ಉಪಾಧ್ಯಕ್ಷ ಎಲ್, ಎಸ್, ಸೊನ್ನ,  ಕಾಶಿನಾಥ ಹಿರೇಮಠ್, ಭೀಮನಗೌಡ ಬಿರಾದಾರ, ಬಸನಗೌಡ ಬಿರಾದಾರ, ಗಂಗಪ್ಪಗೌಡ ಬಿರಾದಾರ,  ಶಿವುಗೌಡ ಬಿರಾದಾರ, ಬಸನಗೌಡ ಬಿರಾದಾರ, ಎಸ್, ಎಂ, ಬಿರಾದಾರ್, ಎಂ, ಬಿ, ಯಡ್ರಾಮಿ, ವಾಯ್, ಬಿ, ಬಿರಾದಾರ, ಬಿ, ಎಸ್, ಟಕ್ಕಳಕಿ, ಬಾಬು ಉಕ್ಕಲಿ, ಎಸ್, ಎಂ, ಮಸಳಿ, ಎಸ್, ಎಸ್, ಬಿರಾದಾರ, ಆರ್, ಪಿ, ಓಲೇಕಾರ, ಎಂ, ಜಿ, ತಳವಾರ, ಎಸ್, ಎಸ್, ಕೊಟರಗಸ್ತಿ, ಸೇರಿದಂತೆ ಗ್ರಾಮಸ್ಥರಿದ್ದರು.