Homeಸುದ್ದಿಗಳುನಿವೃತ್ತ ಕೆಂಪಣ್ಣ ಹುಬ್ಬಳ್ಳಿ ಸತ್ಕಾರ,  ನೂತನ ಕಾರ್ಯದರ್ಶಿ ರಾಮಣ್ಣ ಸುಣದೋಳಿ ಅವರ ಪದಗ್ರಹಣ ಸಮಾರಂಭ

ನಿವೃತ್ತ ಕೆಂಪಣ್ಣ ಹುಬ್ಬಳ್ಳಿ ಸತ್ಕಾರ,  ನೂತನ ಕಾರ್ಯದರ್ಶಿ ರಾಮಣ್ಣ ಸುಣದೋಳಿ ಅವರ ಪದಗ್ರಹಣ ಸಮಾರಂಭ

ಹಳ್ಳೂರ – ಶ್ರೀ ಬಸವೇಶ್ವರ ಬ್ಯಾಂಕಿನಿಂದ ಸಾಕಷ್ಟು ರೈತ ಬಾಂಧವರಿಗೆ ಅನುಕೂಲವಾಗಿದೆ. ಯಾವುದೇ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದುವುದು ಸಹಜ ಆದರೆ ತಾವು ಮಾಡಿದ ಕೆಲಸದ ಬಗ್ಗೆ ಸದಾ ಕಾಲ ಜನರ ಮನಸ್ಸಿನಲ್ಲಿರಬೇಕು. ಕೆಂಪಣ್ಣ ಹುಬ್ಬಳ್ಳಿ ಅವರು ಜನರೊಡನೆ ಬೆರೆತು ಸಂಸ್ಥೆ ಬೆಳೆಯಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆಂದು ಬಸಪ್ಪ ಸಂತಿ ಹೇಳಿದರು.

ಅವರು ಗ್ರಾಮದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ನಡೆದ ನಿವೃತ್ತಿ ಹೊಂದಿದ ಕೆಂಪಣ್ಣ ಹುಬ್ಬಳ್ಳಿ ಅವರ ಬೀಳ್ಕೊಡುವ ಹಾಗೂ ರಾಮಣ್ಣ ಸುಣದೋಳಿ ಅವರ ನೂತನ ಕಾರ್ಯದರ್ಶಿ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ ಶ್ರೀ ಬಸವೇಶ್ವರ ಬ್ಯಾಂಕವು ಒಟ್ಟು 42 ಕೋಟಿ ಲಾಭದಾಯಕದಲ್ಲಿದೆ.. ನೂತನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ ರಾಮಣ್ಣ ಸುಣದೋಳಿ ಅವರು ಸಾಲಗಾರರ ಜೊತೆ ಒಳ್ಳೆಯ ಸಂಬದ್ದವನ್ನಿಟ್ಟು ಹೆಚ್ಚು ಸಾಲ ನೀಡಿ ಲಾಭಾಂಶ ಪಡೆದು,ಉನ್ನತ ಮಟ್ಟಕ್ಕೆ ಬೆಳೆಯಲು ಅವಕಾಶ ನೀಡಬೇಕು .ಬ್ರ್ಯಾಂಚ್ ಗಳನ್ನು ತೆಗೆದು ಬ್ಯಾಂಕ ಹೆಮ್ಮರವಾಗಿ ಬೆಳೆಯಲು ನಾವೆಲ್ಲರೂ ಪ್ರಯತ್ನಿಸೋಣ ಎಂದು ಹೇಳಿದರು.

ಗ್ರಾಂ ಪ ಸದಸ್ಯ ಲಕ್ಷಣ ಕತ್ತಿ, ಮುರಿಗೆಪ್ಪ ಮಾಲಗಾರ, ಶ್ರೀಕಾಂತ ಕೌಜಲಗಿ, ಶ್ರೀಶೈಲ ಉಳ್ಳಾಗಡ್ಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ನಿವೃತ್ತಿ ಹೊಂದಿದ ಕೆಂಪಣ್ಣ ಹುಬ್ಬಳ್ಳಿ ಹಾಗು ನೂತನ ಕಾರ್ಯದರ್ಶಿ ಪದಗ್ರಹಣ ಮಾಡುತ್ತಿರುವ ರಾಮಣ್ಣ ಸುಣದೋಳಿ ಅವರಿಗೆ ಶ್ರೀ ಬಸವೇಶ್ವರ ಬ್ಯಾಂಕಿನ ಆಡಳಿತ ಮಂಡಳಿ,ಸಿಬ್ಬಂದಿಗಳು , ಗ್ರಾಮಸ್ಥರು, ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಗೌರವಿಸಿದರು.

ಈ ಸಮಯದಲ್ಲಿ ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಶಂಕರಯ್ಯ ಹಿರೇಮಠ, ಕುಮಾರ ಲೋಕನ್ನವರ, ನಿಂಗಪ್ಪ ಸುಣದೋಳಿ, ಹನಮಂತ ತೇರದಾಳ, ಶಂಕರ ಬೋಳನ್ನವರ, ಗಣಪತಿ ದಾಸರ, ಶ್ರೀಶೈಲ ತಳವಾರ, ಪುಂಡಲೀಕ ನಿಡೋಣಿ, ಬಸು ತಳವಾರ ಸೇರಿದಂತೆ ಅನೇಕರಿದ್ದರು. ಕಾರ್ಯಕ್ರಮವನ್ನು ಕಾರ್ಯದರ್ಶಿ ರಾಮಣ್ಣ ಸುಣದೋಳಿ ಸ್ವಾಗತಿಸಿ,ಮಲ್ಲಿಕಾರ್ಜುನ ಸಂತಿ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group