ಭಂಡಾರಹಳ್ಳಿ : ಸರಳತೆಯಲ್ಲೂ ಸಿರಿವಂತಿಕೆಯಿರುತ್ತದೆ ಗುರುತಿಸಲು ಹೃದಯವಂತಿಕೆ ಇರಬೇಕು,ಪಾಟೀಲ ಗುರುಗಳು ಹೆಸರಿಗೆ ತಕ್ಕಂತೆ ಶಾಂತ ಸ್ವಭಾವದವರು. ಸಹಬಾಳ್ವೆ,ಸಹಕಾರ,ಸದಾಚಾರ ಗುಣವುಳ್ಳ ಇವರ ನಿವೃತ್ತಿ ಜೀವನ ಸುಖ ಶಾಂತಿ ನೆಮ್ಮದಿಯಿಂದ ಕೂಡಿರಲಿ ಎಂದು ಕಗದಾಳದ ಡಾ.ಗುರು ವೀರಭದ್ರಸ್ವಾಮಿಗಳು ತಮ್ಮ ಆಶೀರ್ವಚನ ನುಡಿಗಳಲ್ಲಿ ಹೇಳಿದರು.
ಅವರು ಭಂಡಾರಹಳ್ಳಿ ತೋಟದ ಶಾಲೆಯಲ್ಲಿ ನಿವೃತ್ತಿ ಹೊಂದಿದ ವಿಠಲಗೌಡ ಪಾಟೀಲ ಗುರುಗಳ ಸೇವಾ ನಿವೃತ್ತಿ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪಡೆದ ಸಮನ್ವಯ ಸಂಪನ್ಮೂಲ ಶಿಕ್ಷಕ ಡಾ. ವೈ.ಬಿ.ಕಡಕೋಳ ಹಾಗೂ ಪರಿವೀಕ್ಷಕರಾದ ಗೋವಿಂದಪ್ಪ ಕಾಂಬಳೆ, ಶಿಕ್ಷಣ ಸಂಯೋಜಕರಾದ ಅರ್ಜುನ ಕಾಮನ್ನವರ, ಸುಧೀರ ವಾಗೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಎಂ,ಎಸ್ ಹೊಂಗಲ, ಅನಸೂಯ ಮದನಬಾವಿ, ಈರಣ್ಣ ಕಿತ್ತೂರ, ಶಿಕ್ಷಕರ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಸಿ.ವೈ.ನಿಪ್ಪಾಣಿ, ಸಿಆರ್ ಪಿ ಗಳಾದ ಗದಿಗೆಪ್ಪ ಚಿಪ್ಪಲಕಟ್ಟಿ, ನಾಗಪ್ಪ ಹೊನ್ನಳ್ಳಿ ಮೊದಲಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ ಶಿಕ್ಷಕರಾದ ಮಲ್ಲಿಕಾರ್ಜುನ ಕಿಲಾರಿ, ಹುಲಿಗೊಪ್ಪ,ಕೊಳಚಿ ಗುರುಗಳನ್ನು ಸನ್ಮಾನಿಸಲಾಯಿತು. ಶಾಲೆಗೆ ದೇಣಿಗೆ ನೀಡಿದ ಮಹನೀಯರನ್ನು ಕೂಡ ಸನ್ಮಾನಿಸಲಾಯಿತು.
ಡಾ.ವೈ.ಬಿ.ಕಡಕೋಳ ಗೋವಿಂದಪ್ಪ ಕಂಬಳಿ.. ಸುಧೀರ ವಾಘೇರಿ ಮೊದಲಾದವರು ಮಾತನಾಡಿದರು.ಸಿಂದೋಗಿ ಸಮೂಹ ಸಂಪನ್ಮೂಲ ಕೇಂದ್ರ ವ್ಯಾಪ್ತಿಯಲ್ಲಿನ ಎಲ್ಲ ಶಾಲೆಗಳ ಪ್ರಧಾನ ಗುರುಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ನಿವೃತ್ತಿ ಹೊಂದಿದ ವ್ಹಿ,.ಎಸ್.ಪಾಟೀಲ ಗುರುಗಳು ಶಿಕ್ಷಕ ವೃತ್ತಿಯಲ್ಲಿನ ತಮ್ಮ ಅನುಭವಗಳನ್ನು ನೆನೆದು,ಪ್ರತಿ ಹೆಜ್ಜೆ ಹೆಜ್ಜೆಗೂ ಹೊಸ ಪಾಠಗಳನ್ನು ಕಲಿಯುತ್ತ ಸಮಾಜದ ವಿವಿಧ ಸ್ಥರದ ಜನರೊಡನೆ ಸಹಕಾರ ಪಡೆದು ಮಕ್ಕಳಿಗೆ ಶಿಕ್ಷಣ ನೀಡಲು ದೇವರು ಕರುಣಿಸಿದ ಪವಿತ್ರ ವೃತ್ತಿ ಶಿಕ್ಷಕ ವೃತ್ತಿ ತಮಗೆ ಸಹಕರಿಸಿದ ಎಲ್ಲ ಮಹನೀಯರನ್ನು ಸ್ಮರಿಸದೇ ಹೋದರೆ ತಪ್ಪಾದೀತು ಎಂದು ತಮ್ಮ ವೃತ್ತಿ ಜೀವನದಲ್ಲಿ ತಮಗೆ ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಪ್ರತಿ ವರ್ಷ ಶಾಲೆಗೆ ಹತ್ತು ಸಾವಿರ ರೂಪಾಯಿಗಳನ್ನು ದೇಣಿಗೆ ನೀಡುತ್ತಿರುವ ದಾನಿಗಳಾದ ಪ್ರಕಾಶ ಪೂಜೇರ,ಕಾರ್ಯಕ್ರಮ ಜರುಗಲು ಧ್ವನಿವರ್ಧಕ ವ್ಯವಸ್ಥೆ ಹಾಗೂ ಪ್ರಸಾದ ಸೇವೆಗೈದ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಮುತ್ತಪ್ಪ ಮಾದರ,ಭೂದಾನಿಗಳಾದ ಎಸ್ ಆರ್ ನಿಕ್ಕಮ್ ಮಾಜಿ ಎಸ ಡಿ ಎಂ ಸಿ ಅಧ್ಯಕ್ಷರು. ಪರೋಕ್ಷವಾಗಿ ಸಹಕರಿಸಿದ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು ಹನುಮಂತ ಅರಭಾವಿ, ಮಕ್ಕಳಿಗೆ ಬ್ಯಾಗ್ ವಿತರಿಸಿದ ನೌಕರರ ಸಂಘದ ಪದಾಧಿಕಾರಿಗಳಾದ ಮಹಾಂತೇಶ ಬ್ಯಾಹಟ್ಟಿ ಯವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಉಮೇಶ ಅಂಗಡಿ ಶಿಕ್ಷಕರು ಪ್ರಾಸ್ತಾವಿಕವಾಗಿ ಮಾತನಾಡುತ್ತ ಪಾಟೀಲ ಗುರುಗಳ ಪರಿಚಯ ಮಾಡಿದರು. ಪ್ರಕಾಶ ತಂಗೋಜಿ ಕಾರ್ಯಕ್ರಮ ನಿರೂಪಿಸಿದರು.ಸಿಂದೋಗಿ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ನಾಗಪ್ಪ ಹೊನ್ನಳ್ಳಿ ಸ್ವಾಗತಿಸಿದರು.ಎಲ್ಲಪ್ಪ, ನೆಲಗುಡ್ಡ ವಂದಿಸಿದರು