ಕ್ರಾಂತಿಕಾರರನ್ನು ಹುಟ್ಟಿಸುವ ಅಗತ್ಯವಿಲ್ಲ. ಕಾರಣ ಭೂಮಿಯಲ್ಲಿ ಇರೋರು ಅವರೆ ಹೆಚ್ಚು. ಆಧ್ಯಾತ್ಮದ ವಿಚಾರಗಳನ್ನು ಶಾಂತಿಯಿಂದ ತಿಳಿದುಕೊಳ್ಳಲು ಸಾಧ್ಯ. ಕ್ರಾಂತಿಯಿಂದ ತಿಳಿಯುವುದರಿಂದ ಇನ್ನಷ್ಟು ಅಶಾಂತಿ ಬೆಳೆಯುತ್ತದೆ.
ಹಿಂದಿನ ಮಹಾತ್ಮರ ನಡೆ ನುಡಿಯಲ್ಲಿದ್ದ ಶಾಂತಿ ಹಾಗು ಕ್ರಾಂತಿಕಾರಕ ಬೆಳವಣಿಗೆ ಇಂದಿಗೂ ವಿರುದ್ದ ದಿಕ್ಕಿನಲ್ಲಿ ನಡೆದು ತಿಳಿವಳಿಕೆ ಅರ್ಧn ಸತ್ಯದಲ್ಲಿ ನಿಂತಿದೆ. ಪ್ರತಿಯೊಂದು ಸತ್ಯವೆ.ಆದರೂಪ್ರತಿಯೊಬ್ಬರೂ ಸತ್ಯವಂತರಾಗಿರೋದಿಲ್ಲ. ಎಲ್ಲರೂ ಅನುಭವಸ್ಥರಾಗೋದಿಲ್ಲ. ಅನುಭವವೂ ಒಂದೆ ರೀತಿಯಲ್ಲಿ ಇರೋದಿಲ್ಲ. ಹೀಗಾಗಿ ನಮ್ಮೊಳಗಿರುವ ಸತ್ಯಜ್ಞಾನ ಪರರಲ್ಲಿರುವ ಮಿಥ್ಯಜ್ಞಾನಕ್ಕೆ ಸಮನಾಗೋದಿಲ್ಲ.
ಆದರೆ ಎಲ್ಲಾ ಇರೋದು ಭೂಮಿಯ ಮೇಲೇ, ಒಂದೆ ದೇಶದೊಳಗೆ, ಅದೇ ನೆಲ ಜಲವಾದರೂ ಅವರವರ ಹಿಂದಿನ ಧರ್ಮ ಕರ್ಮದ ಪ್ರಕಾರ ನಡೆಯದೆ ಪರರ ಕಡೆ ನಡೆದಾಗಲೆ ಒಳಗಿನ ಶಕ್ತಿ ಹೊರಗಿನ ಶಕ್ತಿ ವಿರುದ್ದ ದಿಕ್ಕಿಗೆ ನಡೆಯುತ್ತದೆ. ಮಧ್ಯೆ ಪ್ರವೇಶ ಮಾಡುವ ಮಧ್ಯವರ್ತಿಗಳು ಇದನ್ನು ತನ್ನ ಸ್ವಾರ್ಥ ಸುಖಕ್ಕಾಗಿ ಬಳಸಿದರೆ ಪೂರ್ಣಸತ್ಯ ಅರ್ಥ ವಾಗದೆ ಜೀವ ಹೋಗುತ್ತದೆ.
ಇಲ್ಲಿ ಒಳಗಿರುವ ಶಾಂತಿ ಹೊರಗಿನ ಕ್ರಾಂತಿ ಎರಡೂ ಧರ್ಮದ ಪರವಾಗಿದ್ದರೂ, ಕಾಣುವ ಕಣ್ಣಿಗೆ ಸರಿಸಮನಾಗಿರದ ಕಾರಣವೆ ಭೂಮಿಯಲ್ಲಿ ಮನುಕುಲ ತನ್ನ ತಾನರಿಯಲಾಗದೆ ಸಮಸ್ಯೆಗಳಿಗೆ ತಾನೆ ಕಾರಣವೆಂಬ ಸತ್ಯದಿಂದ ದೂರವಾಗುತ್ತಾ ಮಿಥ್ಯದಲ್ಲಿ ಸಿಲುಕಿಕೊಂಡು ಹೊರಬರಲಾರದೆ ಹೋರಾಟ ಮಾಡಿ ಒಮ್ಮೆ ಜೀವ ಮರೆಯಾದರೂ,ಮತ್ತೆ ಹುಟ್ಟಿದಾಗ ಅದೇ ಸಮಸ್ಯೆಯ ಒಳಗಿರುತ್ತದೆ.
ಒಮ್ಮೆ ಸ್ವಾಮಿವಿವೇಕಾನಂದರು ಒಬ್ಬ ವಿದೇಶಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಯನ್ನು ಕೇಳಿದರಂತೆ ಯಾಕೆ ವಿದೇಶಕ್ಕೆ ಹೋಗುತ್ತಿಯಾ ಅಂತ ಅದಕ್ಕವನು ಅಲ್ಲಿ ಹೋಗಿ ವಿದ್ಯಾಭ್ಯಾಸ ಮಾಡಿ ನಂತರ ಕೆಲಸ ಮಾಡುತ್ತೇನೆ. ಅಂತ ನಂತರ ಮದುವೆಯಾಗಿ ಸಂಸಾರಿಯಾಗುತ್ತೇನೆ ಎಂದಾಗ ಅದನ್ನೇ ಇಲ್ಲೂ ಇದ್ದು ಮಾಡಿದ್ದರೆ ದೇಶದ ಋಣ ತೀರಿಸಬಹುದಲ್ಲವೆ? ಎಂದು ಕೇಳಿದ್ದರಂತೆ.
ಅಂದರೆ, ನಮ್ಮ ಮೂಲವನ್ನರಿಯದೆ ವಿದೇಶದ ಬಗ್ಗೆ ಅರಿತು ಮುಂದೆ ಹೋದರೆ ಸಾಧನೆ ಎನ್ನುವ ನಾವು ನಮ್ಮ ಮಕ್ಕಳಿಂದಲೇ ದೂರವಾದರೂ ಸಂತೋಷಪಡುವ ಅಜ್ಞಾನದಲ್ಲಿ ಇದ್ದೇವೆ. ಅದಕ್ಕಾಗಿ ಮಕ್ಕಳಿಗೆ ಮೊದಲ ಶಿಕ್ಷಣದಲ್ಲಿ ಶಾಂತಿಯಿಂದ ಅಧ್ಯಾತ್ಮದ ಸತ್ಯ ತಿಳಿಸುವ ಕೆಲಸ ಗುರು ಹಿರಿಯರು ಹಿಂದೆ ಮಾಡುತ್ತಿದ್ದರು.
ಅವರಲ್ಲಿದ್ದ ಜ್ಞಾನವನ್ನು ಸ್ವಚ್ಚಗೊಳಿಸುತ್ತಾ ಗುರುವು ಜೀವಕ್ಕೆ ಗುರಿ ತೋರಿಸುತ್ತಿದ್ದರು. ಶಿಕ್ಷಣದಲ್ಲಿಯೇ ಇಂದು ಕ್ರಾಂತಿಕಾರಕ ವಿಚಾರಗಳಿರುವಾಗ ಮಕ್ಕಳಲ್ಲಿ ಶಾಂತಿ ಹೇಗಿರಬೇಕು.ಇದು ಪೋಷಕರ ಕೊಡುಗೆಯಾಗಿದೆ. ನಮ್ಮ ಅನುಭವ ಮಕ್ಕಳಿಗೆ ಸಿಗದು.ನಮ್ಮ ಕಾಲದ ಶಿಕ್ಷಣ ಇಂದಿಲ್ಲ. ಆದರೆ ಮಕ್ಕಳು ನಮ್ಮನ್ನು ಹೆಚ್ಚು ಅರ್ಥ ಮಾಡಿಕೊಂಡು ಗೌರವನೀಡಬೇಕೆಂಬ ಮಹಾದಾಸೆ ಪ್ರತಿ ಪೋಷಕರಲ್ಲಿದೆ.
ನಮ್ಮ ಜ್ಞಾನವೇ ಅವರಲ್ಲಿಲ್ಲ,ನಮ್ಮ ಧರ್ಮ ಕರ್ಮ ಅವರಿಗೆ ತಿಳಿಸಿಲ್ಲ. ನಮ್ಮ ಶಿಕ್ಷಣ ಅವರಿಗೆ ನೀಡಲಾಗಿಲ್ಲ ಎಂದಾಗ ಅವರು ನಮ್ಮನ್ನು ಅರ್ಥ ಮಾಡಿಕೊಳ್ಳಲು ಕೇವಲ ಭೌತಿಕ ಆಸ್ತಿ ಅಂತಸ್ತು ಹೆಚ್ಚಿಸಿದರೆ ಸಾಧ್ಯವೆ? ಭೌತಿಕಾಸಕ್ತಿ ಹೆಚ್ಚಿಸಿರುವ ವಿಜ್ಞಾನ ಶಿಕ್ಷಣದಿಂದ ಮಾನವನಿಗೆ ಬೌತಿಕದಲ್ಲಿ ಸುಖವಿದ್ದರೂ ಆಧ್ಯಾತ್ಮದ ಸುಖದ ಅನುಭವವಾಗಿಲ್ಲ. ಪರರ ಅಧೀನದಲ್ಲಿದ್ದು ಎಷ್ಟೇ ಕ್ರಾಂತಿ ನಡೆಸಿದರೂ ಆತ್ಮತೃಪ್ತಿ ಸಿಗೋದಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಮಹಾತ್ಮರುಗಳ ಶ್ರಮಕ್ಕೆ ಇಂದು ಬೆಲೆಯಿಲ್ಲದೆ ನಾವೇ ಪರಕೀಯರ ಶಿಕ್ಷಣ ಬೆಳೆಸುತ್ತಾ ವಿದೇಶದವರೆಗೆ ಹೋಗಿ ದುಡಿಯುವುದು ತಪ್ಪಿಲ್ಲ.
ಹೀಗಾಗಿ ವಿದೇಶದ ಸಾಲ ಸ್ವದೇಶದಲ್ಲಿ ಬೆಳೆಸಿ ಅವರನ್ನು ಒಳಗೆ ಬಿಟ್ಟು ವ್ಯವಹಾರಕ್ಕೆ ಕೈಜೋಡಿಸಿ, ಜನರ ಬೇಕು ಬೇಡಗಳನ್ನು ಹಣದಿಂದ ಉಚಿತ ಭಾಗ್ಯದ ಸರಮಾಲೆಯಲ್ಲಿ ಪೂರೈಸುತ್ತಾ ಪ್ರಗತಿಪರದೇಶ ಎಂದರೆ ಇದನ್ನು ಶಾಂತಿಯಿಂದ ಅರ್ಥ ಮಾಡಿಕೊಳ್ಳಲು ಆಧ್ಯಾತ್ಮ ಅಗತ್ಯವಿದೆ. ಆಧ್ಯಾತ್ಮ ಎಂದರೆ ನಮ್ಮ ನಾವು ತಿಳಿದು ಸ್ವತಂತ್ರ ಜ್ಞಾನದಿಂದ ಜೀವನ ನಡೆಸೋದು. ನಮ್ಮೊಳಗಿನ ಜ್ಞಾನವನ್ನು ಮಕ್ಕಳಿಗೆ ಕೊಟ್ಟು ಬೆಳೆಸುವುದು. ನಮ್ಮ ಮೂಲ ಧರ್ಮ ಕರ್ಮ ತಿಳಿದು ಪರಮಾತ್ಮನ ಕಡೆಗೆ ನಡೆಯೋದು.
ಹಾಗಾದರೆ ಇಂದಿನ ಆಧ್ಯಾತ್ಮ ಯಾವ ಕಡೆಗೆ ನಡೆದಿದೆ? ಇದರಿಂದ ಎಷ್ಟು ಶಾಂತಿ ಸಿಕ್ಕಿದೆ? ಎಷ್ಟು ಕ್ರಾಂತಿಗೆ ಕಾರಣವಾಗಿದೆ? ಶಾಂತಿಯ ಮಾತೇ ಆಡದೆ ಕ್ರಾಂತಿಕಾರರಿಗೆ ದಾರಿ ಮಾಡಿ ಕೊಟ್ಟರೆ ಕೇವಲ ಒಂದೇ ಮುಖ ಮಾತ್ರ ಕಾಣುತ್ತದೆ. ವ್ಯವಹಾರಕ್ಕೆ ಮಾತ್ರ ನಾಣ್ಯದ ಎರಡೂ ಮುಖ ಬೇಕು. ಆಚರಣೆಗೆ ಬೇಡ.ಮೊದಲ ಮೇಲ್ಮುಖ ಶಾಂತಿಯಾಗಿತ್ತು. ಕೆಳಮುಖ ಕ್ರಾಂತಿ. ಈಗ ಕೆಳಮುಖವೆ ರಾಜಕೀಯವಾಗಿ ಮೇಲಿನಮುಖ ಯಾರಿಗೂ ಕಾಣದಂತೆ ಶಿಕ್ಷಣ ಬೆಳೆದಿದೆ.
ನಮ್ಮೊಳಗಿನ ಜ್ಞಾನಕ್ಕೆ ತಕ್ಕಂತೆ ಶಿಕ್ಷಣ ನೀಡಿದಾಗಲೆ ಶಾಂತಿ, ಸಮಾನತೆ, ಸಮಾಧಾನ. ವಿರುದ್ದ ನೀಡಿದಾಗಲೆ ಅಸಮಾಧಾನ, ಅಸಮಾನತೆಯ ಕ್ರಾಂತಿ ಹೆಚ್ಚುವುದು. ಇದನ್ನು ಯಾವುದೇ ಪುರಾಣ, ಇತಿಹಾಸದ ಪುಟಗಳಲ್ಲಿ ಓದಿ ತಿಳಿಯೋ ಅಗತ್ಯವಿಲ್ಲ. ವಾಸ್ತವತೆಯನ್ನು ಅರ್ಥ ಮಾಡಿಕೊಂಡು ಸ್ಥಿತಪ್ರಜ್ಞ ರಾದರೆ ಸಾಕು. ಇದು ನಮ್ಮ ಸಹಕಾರದ ಪ್ರತಿಫಲ.ನಾವೇ ನೀಡಿದ ಸಹಕಾರ ನಮಗೆ ತಿರುಗಿ ಹೊಡೆಯುತ್ತಿದೆ.
ಇಲ್ಲಿ ಯಾವ ಒಂದು ಧರ್ಮ, ಜಾತಿ,ಪಂಗಡ,ಪಕ್ಷ,ದೇವರು,ವ್ಯಕ್ತಿ ಕಾರಣವಾಗೋದಿಲ್ಲ ಎಲ್ಲರೂ ಕಾರಣಕರ್ತರಾದಾಗ ನಮ್ಮೊಳಗಿನ ಸಣ್ಣ ಬಿಂದು ನಮಗೆ ಕಾಣೋದಿಲ್ಲವಾದಾಗ ಹೊರಗಿನ ಅಸಂಖ್ಯಾತ ಬಿಂದುಗಳನ್ನು ತಿಳಿಯಲು ಕಷ್ಟ.ಹೀಗಾಗಿ ಇದ್ದಲ್ಲೇ ನಮ್ಮನ್ನು ನಾವು ಶಾಂತಿಯಿಂದ ಪ್ರಶ್ನೆ ಮಾಡಿಕೊಂಡು ನಮ್ಮಲ್ಲೇ ಇರುವ ಭಿನ್ನಾಭಿಪ್ರಾಯ, ದ್ವೇಷ, ಅಸೂಯೆಯ ರಾಜಕೀಯ ಬಿಟ್ಟು ಸ್ವತಂತ್ರ ವಾದ ಸತ್ಯದ ಕಡೆಗೆ ನಡೆದರೆ ಜೀವನ್ಮುಕ್ತಿ.
ಜೀವ ಬಂದಿರೋದು ಶಾಂತಿಗಾಗಿಯೋ ಕ್ರಾಂತಿಗಾಗಿಯೋ ಅವರವರ ಒಳಗೆಇದಕ್ಕೆ ಉತ್ತರ ಸಿಗುತ್ತದೆ. ಒಟ್ಟಿನಲ್ಲಿ ನಮ್ಮನ್ನು ನಡೆಸೋಪರಮಾತ್ಮ ಒಬ್ಬನೆ ಆದರೂ ಪ್ರತಿಯೊಬ್ಬರ ಜನನ ಮರಣಕ್ಕೆ ಅವರವರ ಹಿಂದಿನ ಜನ್ಮದ ಋಣ ಹಾಗು ಕರ್ಮವೆ ಕಾರಣವೆನ್ನುವ ಆಧ್ಯಾತ್ಮ ಸತ್ಯದ ಪ್ರಕಾರಮಾನವನ ಜೀವನ ನಡೆದಿದೆ. ಋಣ ಎಂದರೆ ಸಾಲ ಕರ್ಮ ಎಂದರೆ ಕೆಲಸ. ಸಾಲ ತೀರಿಸಲು ಸತ್ಕರ್ಮದಿಂದ ಸಾಧ್ಯ.ಸತ್ಯ ಎಲ್ಲಿದೆ?ನಮ್ಮೊಳಗಿದೆ. ಹೊರಗಿನ ಸತ್ಯಕ್ಕೆ ಜೀವ ಹೋಗುತ್ತಿದೆ.ಹೀಗಾಗಿ ಆತ್ಮತೃಪ್ತಿ ಸಿಗದೆ ಕ್ರಾಂತಿ ನಡೆಸಿದೆ.
ಹಾಗಾದರೆ ನಾವ್ಯಾರು? ನಮಗೆ ಏನು ಬೇಕು? ನಮ್ಮೊಳಗಿರುವ ಶಕ್ತಿ ಯಾವುದು? ದೇವರು ಯಾರು? ಅಸುರರು ಯಾರು? ನಾನ್ಯಾರು?ಕೊನೆಯ ಪ್ರಶ್ನೆಗೆ ಉತ್ತರ ಒಳಗಿದೆ. ಎಷ್ಟು ಶಾಂತಿಯಿಂದ ಮನಸ್ಸು ಒಳಗಿರುವುದೋ ಅಷ್ಟು ಬೇಗ ಉತ್ತರ ಸಿಗುತ್ತದೆ. ಇದನ್ನು ಹೊರಗಿರುವ ಪುಸ್ತಕ ಓದಿ ಅದನ್ನು ಅಳವಡಿಸಿಕೊಳ್ಳಲು ಕಷ್ಟವಿದೆ. ಅವರವರ ಅನುಭವಕ್ಕೆ ಅವರೆ ಸಾಕ್ಷಿ.ಇದನ್ನು ಹೊರಗೆತೋರಿಸಲಾಗದ ಕಾರಣ ಆಧ್ಯಾತ್ಮದ ಶಾಂತಿಯನ್ನು ಯಾರೂ ಒಪ್ಪುವುದಿಲ್ಲ. ಒಪ್ಪದಿದ್ದರೂ ಅದೇ ಸತ್ಯಕ್ಕೆ ಹತ್ತಿರವಿರುತ್ತದೆ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು