ಸಾಧನೆಗೆ ಬಡವ, ಶ್ರೀಮಂತ ಮುಖ್ಯವಲ್ಲ : ತಹಸಿಲ್ದಾರ ಭಸ್ಮೆ

Must Read

ಮೂಡಲಗಿ:ಕಲ್ಲೋಳಿ ಪಟ್ಟಣದ ಪಿಜೆಎನ್ ಪ್ರೌಢ ಶಾಲೆಯಲ್ಲಿ ಶ್ರೀ ಸತ್ಯಸಾಯಿ ಬಾಬಾರವರ 99 ನೇ ಜನ್ಮದಿನೋತ್ಸವ ಆಚರಣೆಗೆ ಗೋಕಾಕ ತಹಶೀಲ್ದಾರ ಮನೋಹರ ಭಸ್ಮೇ ಅವರು ಸಸಿ ನೆಡುವ ಮೂಲಕ ಚಾಲನೆ ನೀಡಿದರು.

ಶನಿವಾರ ಶ್ರೀ ಸಾಯಿನಿತ್ಯೋತ್ಸವ ಲೋಕಸೇವಾ ಟ್ರಸ್ಟ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿನಿತ್ಯ ಸೇವೆ ಮಾಡುವ ಮೂಲಕ ಸಾಧನೆ ಮಾಡಬೇಕು,ನಿರೀಕ್ಷೆ ಇಲ್ಲದೇ ಸೇವೆಯಲ್ಲಿ ತೊಡಗಿಕೊಳ್ಳಬೇಕು,ಯಾವುದೇ ಸಾಧನೆಗೆ ಗುರಿ ಮುಖ್ಯ ಗುರಿ ಇಟ್ಟುಕೋಳ್ಳುತ್ತೇವೆ ಆದರೆ ಆಲೋಚನೆ ಮಾಡುವುದಿಲ್ಲ ಆವಾಗ ಗುರಿ ಮುಟ್ಟುವಲ್ಲಿ ವಿಫಲವಾಗುತ್ತೇವೆ.ಸಾಧನೆಗೆ ಬಡವ,ಶ್ರೀಮಂತ ಮುಖ್ಯವಲ್ಲ,ಸಾಯಿಬಾಬಾರವರ ಮೌಲ್ಯಗಳನ್ನು ಯಾರು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ ಅವರೇ ಶ್ರೀಮಂತರು ಎಂದರು.

ಉಪನ್ಯಾಸಕರಾಗಿ ಆಗಮಿಸಿದ ಶಿಕ್ಷಕಿ ಮಹಾದೇವಿ ಹುಕ್ಕೇರಿ ಮಾತನಾಡಿ ಶ್ರೀ ಸತ್ಯಸಾಯಿ ಬಾಬಾರವರ ಜೀವನ ಕುರಿತು ಹೇಳಿದ ಅವರು ಬಾಬಾರವರು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಕೊಳ್ಳಬೇಕೆಂದರು.ಬಾಬಾರವರ ಪ್ರೇರಣೆಯಿಂದ ಲಕ್ಷಾಂತರ ಭಕ್ತರು ಪರಿವರ್ತನೆಯಾಗಿದ್ದಾರೆಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸತ್ಯಸಾಯಿ ಬಾಬಾರವರ ಸಂದೇಶ ಹೊತ್ತ ಕಾರ್ಡಗಳನ್ನು ವಿತರಿಸಿದರು.ಶ್ರೀ ಸಾಯಿ ನಿತ್ಯೋತ್ಸವ ಲೋಕಸೇವಾ ಟ್ರಸ್ಟ ಲೋಗೋವನ್ನು ಬಿಡುಗಡೆಗೊಳಿಸಿದರು.

ಅಧ್ಯಕ್ಷತೆಯನ್ನು ನಿಂಗಾಪುರ ಶ್ರೀ ಸಾಯಿನಿತ್ಯೋತ್ಸವ ಲೋಕಸೇವಾ ಟ್ರಸ್ಟ್ ಅಧ್ಯಕ್ಷರಾದ ಆರ್ ಆರ್ ನಾಡಗೌಡರ ವಹಿಸಿದ್ದರು. ಅತಿಥಿಗಳಾಗಿ ಆರ್ಯವೇದ ವೈದ್ಯರಾದ ತುಕಾರಾಮ ಉಮರಾಣಿ, ಶಿಕ್ಷಕ ಅರವಿಂದ ಚೌವಡನ್ನವರ,ಪ್ರಕಾಶ ಕುರಬೇಟ, ಶಿಕ್ಷಕಿ ಕೆ.ಎಂ.ಭರನಟ್ಟಿ, ಪರಪ್ಪ ಗಿರೆಣ್ಣವರ,ಮಲ್ಲಪ್ಪ ಉಳ್ಳಾಗಡ್ಡಿ
ಟ್ರಸ್ಟ್‌ನ ಸದಸ್ಯರಾದ ಸಚಿನ ಬಾಗೋಜಿ, ಭೀಮಶಿ ಹುಲಕುಂದ, ನಾಮದೇವ್ ಉಮರಾಣಿ, ಬಸವರಾಜ ಸಪ್ಪಡ್ಲ, ಸಿದ್ದು ಗದಾಡಿ ಸೇರಿದಂತೆ ಅನೇಕ ಸಾಯಿಬಾಬಾರವರ ಭಕ್ತರು,ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿನಾಯಕ ಪರವಿನಾಯ್ಕರ ಸ್ವಾಗತಿಸಿದರು, ಶಿಕ್ಷಕ ವಿ ವಾಯ್ ಕೋಳದೂರ ಪರಿಚಯಿಸಿದರು,ದುಂಡಪ್ಪ ಬೀರಗೌಡರ ಕಾರ್ಯಕ್ರಮ ನಿರೂಪಿಸಿದರು.ರಮೇಶ ಲಂಗೋಟಿ ವಂದಿಸಿದರು.

Latest News

ಗಡಿಗಳನ್ನು ಮೀರಿ ಹರಿದ ಭಕ್ತಿ: ಓಮಾನ್‌ನಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವದ ವೈಭವ  

     ಗಡಿಗಳನ್ನು ಮೀರಿ ಹರಿಯುವ ಭಕ್ತಿಯ ಹರಿವು ಮಸ್ಕಟ್‌ನಲ್ಲಿ ಮತ್ತೆ ಒಮ್ಮೆ ತಿರುಮಲೆಯ ಸಾನ್ನಿಧ್ಯವನ್ನು ಮೂಡಿಸಿತು. ದಾರ್ಸೈಟ್‌ನ ಶ್ರೀ ಕೃಷ್ಣ ಮಂದಿರದಲ್ಲಿ ನೆರವೇರಿದ ಶ್ರೀ...

More Articles Like This

error: Content is protected !!
Join WhatsApp Group