spot_img
spot_img

ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘಕ್ಕೆ ರೂ.3.16 ಕೋಟಿ ನಿವ್ವಳ ಲಾಭ

Must Read

spot_img
- Advertisement -

ಮೂಡಲಗಿ: ಕಲ್ಲೋಳಿಯ ಶ್ರೀ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘವು 2022-23ನೇ ಸಾಲಿನ ಅಂತ್ಯಕ್ಕೆ ರೂ. 3.16 ಕೋಟಿ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸಂಘದ ಅಧ್ಯಕ್ಷ ಬಾಳಪ್ಪ ಬ. ಬೆಳಕೂಡ ಅವರು ತಿಳಿಸಿದರು.

ಸಂಘದ ಸಭಾಭವನದಲ್ಲಿ  ಸಂಘದ ಪ್ರಗತಿಯ ಬಗ್ಗೆ ತಿಳಿಸಲು ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಕಾನೂನು ಅಡಿಯಲ್ಲಿ ಸಣ್ಣ ವ್ಯವಹಾರದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಲಾಭ ಗಳಿಸಿ, ಮೊದಲ ಶ್ರೇಣಿಯಲ್ಲಿರುವ ಸಂಘ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಸದ್ಯ ಸಂಘವು ರೂ. 16.57 ಕೋಟಿ ನಿಧಿಗಳು, ರೂ. 42.20 ಕೋಟಿ ಠೇವುಗಳು, ರೂ. 59.56 ಕೋಟಿ ದುಡಿಯುವ ಬಂಡವಾಳ, ರೂ. 6.76 ಕೋಟಿ ಗುಂತಾವಣಿಗಳನ್ನು ಹೊಂದಿದ್ದು, ವಿವಿಧ ಕ್ಷೇತ್ರಗಳಿಗೆ ರೂ. 54.07 ಕೋಟಿ ಸಾಲಗಳನ್ನು ನೀಡಿದೆ ಎಂದು ತಿಳಿಸಿದರು.

- Advertisement -

ಸಂಘ ಪ್ರಾರಂಭದಿಂದ ಪ್ರಸಕ್ತ ಸಾಲಿನಲ್ಲಿನಲ್ಲಿಯೂ ಶೇ.100ರಷ್ಟು ಸಾಲ ವಸೂಲಾತಿಯಲ್ಲಿ ದಾಖಲೆ ಸಾಧಿಸಿರುವುದಲ್ಲದೆ ಅಡಿಟ್ ವರ್ಗಿಕರಣದಲ್ಲಿ ‘ಅ’ ಶ್ರೇಣಿಯನ್ನು ಪಡೆದುಕೊಳ್ಳುವ ಮೂಲಕ ಜನರ ವಿಶ್ವಾಸವನ್ನು ಗಳಿಸಿದೆ ಎಂದರು. 

         ಕಳೆದ 23 ವರ್ಷಗಳಿಂದ ಸದಸ್ಯರಿಗೆ ಶೇ. 25 ಶೇರ ಡಿವಿಡೆಂಡ್ ನೀಡುತ್ತಲಿದ್ದು, ಮರಣ ಹೊಂದಿದ ಸದಸ್ಯರ ಕುಟುಂಬಕ್ಕೆ ರೂ. 5 ಸಾವಿರ ಮರಣೋತ್ತರ ನಿಧಿ ನೀಡುವ ಮೂಲಕ ಸದಸ್ಯರ ಕಾಳಜಿ ಮಾಡುತ್ತಲಿದೆ ಎಂದರು.

ಸಂಘವು ಸಂಪೂರ್ಣ ಗಣಕೀಕರಣ ಹೊಂದಿದ್ದು, ಆರ್‍ಟಿಜಿಎಸ್, ನೆಫ್ಟ್ ಇ-ಸ್ಟಾಂಪ್, ಸೇಫ್ ಲಾಕರ್, ಎಟಿಎಂ ಸೌಲಭ್ಯಗಳನ್ನು ಸಂಘವು ಕಲ್ಪಿಸಿಕೊಟ್ಟಿದೆ ಎಂದರು.

- Advertisement -

ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಶಿವರುದ್ರಪ್ಪ ಬಿ. ಪಾಟೀಲ, ನಿರ್ದೇಶಕರಾದ ಭೀಮಪ್ಪ ಕಡಾಡಿ, ಬಸಗೌಡ ಪಾಟೀಲ, ಮಲ್ಲಪ್ಪ ಖಾನಾಪೂರ, ರಾಮಪ್ಪ ದಬಾಡಿ, ಹನಮಂತ ಪರಕನಟ್ಟಿ, ಸುಭಾಷ ಖಾನಾಪೂರ, ಬಸಪ್ಪ ಹೆಬ್ಬಾಳ, ಅನಿತಾ ಕಾಡೇಶ ಗೋರೋಶಿ, ಲಕ್ಷ್ಮೀಬಾಯಿ ಮ. ಕಂಕಣವಾಡಿ,  ಪ್ರಕಾಶ ಕಲಾಲ, ಮಹಮ್ಮದ ಶಫಿ ಮೋಕಾಶಿ ಹಾಗೂ ಸಂಘದ ಪ್ರಧಾನ ವ್ಯವಸ್ಥಾಪಕ ಹಣಮಂತ ಖಾನಗೌಡ್ರ ಇದ್ದರು.

- Advertisement -
- Advertisement -

Latest News

ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ಆಂದೋಲನಕ್ಕೆ ಚಾಲನೆ

ಮೂಡಲಗಿ : ಕಳೆದ ಶನಿವಾರದಂದು ಗೋಸಬಾಳದ ಸರಕಾರಿ ಕೆ.ಹೆಚ್.ಪಿ.ಎಸ್ ಮತ್ತು ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group