Homeಸುದ್ದಿಗಳುಗ್ರಾಮೀಣ ಪ್ರತಿಭೆ ಕು.ಲಕ್ಷ್ಮಿ ರಡರಟ್ಟಿ ವಿಶ್ವ ಮಟ್ಟದ ಸಾಧನೆ ಮಾಡಲಿ

ಗ್ರಾಮೀಣ ಪ್ರತಿಭೆ ಕು.ಲಕ್ಷ್ಮಿ ರಡರಟ್ಟಿ ವಿಶ್ವ ಮಟ್ಟದ ಸಾಧನೆ ಮಾಡಲಿ

ಮೂಡಲಗಿ – ಟೇಕ್ವಾಂಡೋ ಎಂಬ ಅಪರೂಪದ ಕ್ರೀಡೆಯಲ್ಲಿ ಏಷಿಯನ್ ಮಟ್ಟದಲ್ಲಿ ಸ್ಪರ್ಧಿಸಿ ಕಂಚಿನ ಪದಕ ಗೆಲ್ಲುವ ಮೂಲಕ ಮೂಡಲಗಿಯಂಥ ಗ್ರಾಮೀಣ ಪ್ರದೇಶದ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿಸಿದ ಕು.ಲಕ್ಷ್ಮಿ ರಡರಟ್ಟಿಯವರ ಸಾಧನೆ ನಿಜಕ್ಕೂ ಪ್ರಶಂಸನೀಯ ಎಂದು ಪ್ರಗತಿ ಗ್ರಾಮೀಣ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಉಮೇಶ ಬೆಳಕೂಡ ಹೇಳಿದರು.

ಮಲೇಷಿಯಾದಲ್ಲಿ ಇತ್ತೀಚೆಗೆ ನಡೆದ ಟೇಕ್ವಾಂಡೋ ಏಷಿಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದುಬಂದ ಹಿನ್ನೆಲೆಯಲ್ಲಿ ಕು.ಲಕ್ಷ್ಮಿ ರಡರಟ್ಟಿಯವರನ್ನು ಸೊಸಾಯಿಟಿಯ ಕಚೇರಿಯಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.

ಇಂಥ ಪ್ರತಿಭೆಗಳು ನಮ್ಮ ಭಾಗದಲ್ಲಿ ಇನ್ನೂ ಹೆಚ್ಚಾಗಬೇಕು. ಸರ್ಕಾರವು ಕ್ರೀಡಾಳುಗಳಿಗೆ ಎಲ್ಲ ರೀತಿಯ ಸಹಕಾರ ಬೆಂಬಲ ನೀಡಬೇಕು. ಕು.ಲಕ್ಷ್ಮಿ ಇನ್ನೂ ಸಾಧನೆ ಮಾಡಿ ವಿಶ್ವ ಕ್ರೀಡಾ ಕೂಟದಲ್ಲಿಯೂ ಯಶಸ್ಸು ಗಳಿಸಲಿ ಎಂದು ಹಾರೈಸಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಸೊಸಾಯಿಟಿಯ ಅಧ್ಯಕ್ಷ ಡಾ.ಬಸವರಾಜ ಪಾಲಭಾಂವಿ, ನಿರ್ದೇಶಕರಾದ ಭೀಮಶಿ ಢವಳೇಶ್ವರ, ವಿಠ್ಠಲ ತುಪ್ಪದ, ರವಿ ಭಾಗೋಜಿ, ಈರಣ್ಣ ಕಂಬಾರ, ಬಸಪ್ಪ ಬೆಳಗಲಿ, ಹಾಲಪ್ಪ ಅಂತರಗಟ್ಟಿ ಹಾಗೂ ಕಾರ್ಯದರ್ಶಿ ಶಿವಬಸು ಕತ್ತಿ, ರಾಜು ಸೊರಗಾಂವಿ, ಉದೇಶ ತಳವಾರ ಹಾಗೂ ಗೋಪಾಲ ಗೌರವ್ವಗೋಳ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group