- Advertisement -
ಸಿಂದಗಿ: ಪಟ್ಟಣದ ನಿವಾಸಿಯಾದ ಸಚೀನ್ ಚೌರ ಇವರನ್ನು ಕರ್ನಾಟಕ ಭೀಮ್ ಸೇನೆಯ ಉತ್ತರ ಕರ್ನಾಟಕ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ್ ರಾಮಲಿಂಗಯ್ಯ ನೇಮಕಾತಿ ಪತ್ರ ನೀಡಿದ್ದಾರೆ.
ದಲಿತರ, ರೈತರ, ಕಾರ್ಮಿಕರ, ಮಹಿಳೆಯರ, ವಿದ್ಯಾರ್ಥಿಗಳ ಹಾಗೂ ಸಮಗ್ರ ನಾಡಿನ ಸಮಸ್ಯೆಗಳಿಗೆ ಸ್ಪಂದಿಸುತ್ತ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಕರ್ನಾಟಕ ಭೀಮ್ ಸೇನೆ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ನಾಡಪರ ಸಮಸ್ಯೆಗಳಿಗೆ ಸ್ಪಂದಿಸುತ್ತ ತಮ್ಮ ನಾಯಕತ್ವದ ಸೇವೆಯನ್ನು ವಹಿಸಿಕೊಂಡು ಬುದ್ಧ, ಬಸವ ಅಂಬೇಡ್ಕರ ತತ್ವ ಸಿದ್ಧಾಂತಗಳಲ್ಲಿ ನಡೆದು ಭೀಮ್ ಸೇನೆಯ ಸಿದ್ಧಾಂತಗಳನ್ನು ಪಾಲಿಸಲು ಸೂಚಿಸಿ ರಾಜ್ಯ ಕಾರ್ಯಧ್ಯಕ್ಷ ದೇವಿಕುಮಾರ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಮಂಜುನಾಥ ನೇಮಕಾತಿ ಪತ್ರದಲ್ಲಿ ತಿಳಿಸಿದ್ದಾರೆ.