ಮಾನವೀಯತೆಯ ಜೀವನ ಪವಿತ್ರ: ಹಾಸಿಂಪೀರ

Must Read

ಸಿಂದಗಿ: ಮಾನವೀಯತೆಯ ಜೀವನ ಪಾವನ. ಧರ್ಮ ದಿಂದಲೆ ಮಾನವ ಕುಲ ಉದ್ಧಾರ ಆದ್ದರಿಂದ ಮನುಷ್ಯತ್ವಕ್ಕೆ ಮೌಲ್ಯ ನೀಡಬೇಕು ಎಂದು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಯರಗಲ್ ಬಿ ಕೆ ಗ್ರಾಮದ ಶ್ರೀ ಚಿಕ್ಕಪ್ಪಯ್ಯ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮಾತೆಯ ಮಹಾಪುರಾಣ ಕಾರ್ಯಕ್ರಮದಲ್ಲಿ ನಡೆದ ಧರ್ಮಸಭೆಯನ್ನು ಉದ್ಘಾಟಿಸಿ ಮಾತನಾಡಿ, ನಮಗೆ ಸೃಷ್ಟಿಯ ಸಂಪತ್ತು ನೀಡಿದ ದೇವನೋಬ್ಬನಿದ್ದಾನೆ. ಕುಟುಂಬದ ಹಿರಿಯರನ್ನು ದೇವರೆಂದು ಪೂಜಿಸಬೇಕು. ಮಹಿಳೆಯರನ್ನು ದೇವತೆಗಳೆಂದು ಭಾವಿಸಿ ಗೌರವಿಸಿ ಬದುಕಿದರೆ ಕುಟುಂಬದಲ್ಲಿ ಶಾಂತಿ ನೆಮ್ಮದಿ ಸಮೃದ್ದಿ ನೆಲೆಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಸಾನ್ನಿಧ್ಯ ವಹಿಸಿದ್ದ ರೇವಣಸಿದ್ದೇಶ್ವರ ಶಿವಾಚಾರ್ಯರು ಹಾಗು ಸಿದ್ಧರಾಮೇಶ್ವರ ಸ್ವಾಮಿಜಿಯವರು ಆಶಿರ್ವಚನ ನೀಡುತ್ತಾ ಪ್ರೀತಿ ಮಮತೆ ಹಾಗು ನಂಬಿಕೆಯ ಜೀವನಕ್ಕೆ ಪ್ರಾಧ್ಯಾನತೆ ನೀಡಬೇಕು. ಕುಟುಂಬದ ಜವಾಬ್ದಾರಿಯೊಂದಿಗೆ ಸಮಾಜದ ಸ್ವಾಸ್ಥ್ಯ ಕಾಪಾಡುವ ಹೊಣೆ ಹೊತ್ತು ಸಚ್ಚಾರಿತ್ರ್ಯ ಬದುಕು ಸಾಗಿಸಬೇಕು. ಸಾಮರಸ್ಯ ಕದಡದಂತೆ ಗ್ರಾಮದ ಜನರು ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.

ವೇದಮೂರ್ತಿ ದಯಾನಂದ ಪೂಜಾರಿ ಹಾಗು ಸುಧಾಕರ ಕುಲಕರ್ಣಿ ಮಾತನಾಡಿದರು.

ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ್ ಸೋಮಜಾಳ, ಸಂಗನಗೌಡ ಪಾಟೀಲ್,ಭೀಮಣ್ಣ ಹೇರೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Error: Contact form not found.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group