ಹಳ್ಳೂರ – ಕಾರ್ಮಿಕರ ಜೊತೆಗಿದ್ದು ಹಿತ ರಕ್ಷಣೆ ಕಾಪಾಡಿಕೊಂಡು ಕಾರ್ಮಿಕ ಹಾಗೂ ಕಾರ್ಖಾನೆ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಕಾರ್ಯ ಮಾಡಿ ತೋರಿಸುತ್ತೇವೆಂದು ಮಜದೂರ ಯೂನಿಯನ್ ಅಧ್ಯಕ್ಷ ರವಿ ಕುರುಬರ ಹೇಳಿದರು.
ಅವರು ಸಮೀರವಾಡಿ ಗೋಧಾವರಿ ಬೈಯೋರಿಪೈನರೀಜ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಹೊರ ವಲಯದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ನಿಮ್ಮೆಲ್ಲರ ಸಹಕಾರದಿಂದ ನಮ್ಮ ಪೇನಲ್ ದವರು ಎಲ್ಲರೂ ಆಯ್ಕೇಯಾಗಿದ್ದು ಹೆಮ್ಮಯ ಸಂಗತಿಯಾಗಿದೆ.
ರಮೇಶ ಪಾಟೀಲ ಮಾತನಾಡಿ ಭೇದ ಭಾವ, ಪಕ್ಷಪಾತ ಮಾಡದೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಮಿಕರ ಪ್ರೀತಿಗೆ ಪಾತ್ರರಾಗಬೇಕೆಂದು ಹೇಳಿದರು.
ಮುರಿಗೆಪ್ಪ ಮಾಲಗಾರ ಮಾತನಾಡಿ ನಾವೆಲ್ಲರೂ ಒಗ್ಗಟ್ಟಿನಿಂದ ನಿಮಗೆ ಬೆಂಬಲ ಸೂಚಿಸಿದ್ದೇವೆ ತಮ್ಮಆಡಳಿತ ಅವಧಿಯಲ್ಲಿ ಅತೀ ಹೆಚ್ಚು ಒಳ್ಳೆಯ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿ ತೋರಿಸಬೇಕೆಂದು ಹೇಳಿದರು.
ಈ ಸಮಯದಲ್ಲಿ ಯೂನಿಯನ್ ಪದಾಧಿಕಾರಿಗಳಾದ ಬಸು ಮೇಲಪ್ಪಗೋಳ, ಸಂಗನಗೌಡ ಪಾಟಿಲ, ಪಾಂಡು ಹಂಚಿನಾಳ, ರಾಜು ಹಲಿಂಗಳಿ, ಸಕ್ಕರೆ ವಿಭಾಗದ ಶ್ರೀನಿವಾಸ ನಿಡೋಣಿ, ರಾಜು ಮೂರ್ತೆಲಿ, ಮಹಾಲಿಂಗ ಮಾಳಿ, ಸುರೇಶ ಹೊಸಕೋಟಿ, ಫಕೀರಪ್ಪ ವಗ್ಗರ ಸೇರಿದಂತೆ ಅನೇಕರಿದ್ದರು.

