ಸಾಯಿಬಾಬಾ ಜನ್ಮದಿನ ಹಾಗೂ ಪಾದುಕಾ ಪ್ರತಿಷ್ಠಾಪನೆ ಕಾರ್ಯಕ್ರಮ

Must Read

ಮೈಸೂರ: ನಗರದ ಜಯಲಕ್ಷ್ಮೀಪುರಂನ ಶ್ರೀ ಸತ್ಯಸಾಯಿ ಕಾಲೇಜು ಆವರಣದಲ್ಲಿ ಗುರುವಾರ(ನ-23) ಸಾಯಿಬಾಬಾರವರ ಹುಟ್ಟು ಹಬ್ಬ ಆಚರಣೆ ಹಾಗೂ ಪಾದುಕೆ ಪ್ರತಿಷ್ಠಾಪನೆ ಮಹೋತ್ಸವ ನಡೆಯಿತು.

ಬೆಳಿಗ್ಗೆ ನಗರ ಸಂಕೀರ್ತನೆ, ನಾರಾಯಣ(ಪ್ರಸಾದ) ಸೇವೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಕಾಲೇಜ ವಾರ್ಡನ,ಚಿಂತಕರಾದ ಸಚಿನ ಬಾಗೋಜಿ ಅವರು ಬರೆದ ‘ಪ್ರೇಮಾಮ್ರತಂ’ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು.

ಮುಖ್ಯ ಅತಿಥಿಗಳಾಗಿದ್ದ ಚಂದ್ರಯಾನ 2 ಮತ್ತು 3 ರ ಪ್ರಾಜೆಕ್ಟ್ ಮ್ಯಾನೇಜರ್, ವಿಜ್ಞಾನಿ ಶ್ರೀಮತಿ ಜಿ ಉಷಾ ಮಾತನಾಡಿ, ಸತ್ಯಸಾಯಿ ಬಾಬಾ ರವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಖುಷಿ ಸಂಗತಿ ಎಂದರು.      

ಬಾಲವಿಕಾಸ ಮಕ್ಕಳಿಗೆ ಶಿಕ್ಷಕಿಯಾಗಿ ಕೆಲಸ ಮಾಡಿದ ಅನುಭವ ಇದೆ ಬಾಬಾ ರವರ ನಡೆ ನುಡಿ ಆಚಾರ ವಿಚಾರಗಳನ್ನು ಪ್ರತಿಯೊಬ್ಬರು ತಿಳಿದುಕೊಂಡು ಅವರ ಸ್ಮರಣೆ ಮಾಡುವುದು ಮುಖ್ಯ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಯಿ ಬಾಬಾ ರವರ ಮಹಿಳಾ ಮತ್ತು ಮಕ್ಕಳ ಕೂಟ ಟ್ರಸ್ಟ್ ಅಧ್ಯಕ್ಷ ಪ್ರೊ ಕೆ.ಬಿ. ಪ್ರಭು ಪ್ರಸಾದ್,ಎಂ ಎನ್ ಸುಂದರೇಶ್, ಶ್ರೀಮತಿ ಜಿಎನ್ಎಸ್ ರಾಜೇಶ್ವರಿ,ಕೆ ಸತೀಶ್, ಡಾ.ಶ್ರೀಹರಿ ತೊರಗಲ್, ಕಲ್ಲೋಳಿ ಸೇವಾ ಸಂಸ್ಥೆ ಅಧ್ಯಕ್ಷ ಪರಪ್ಪ ಗಿರೆಣ್ಣವರ ಸೇರಿದಂತೆ ಅನೇಕರಿದ್ದರು.

ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ, ಆಧ್ಯಾತ್ಮಿಕ, ಕಾರ್ಯಕ್ರಮಗಳು ಜರುಗಿದವು. ಸಾಯಿಬಾಬಾರವರ ಹುಟ್ಟು ಹಬ್ಬವನ್ನು ಮಕ್ಕಳಿಂದ ಕೇಕ್ ಕತ್ತರಿಸಿ ಆಚರಿಸಲಾಯಿತು ಮತ್ತು ಬಾಬಾರವರ ಕುರಿತು ವಿದ್ಯಾರ್ಥಿಗಳು ಭಾಷಣ ಮಾಡಿದರು. ವಿಜ್ಞಾನಿ ಜಿ ಉಷಾ ಅವರು ಪಿಯು ವಿದ್ಯಾರ್ಥಿಗಳೊಂದಿಗೆ ಒಂದು ತಾಸು ಸಂವಾದ ನಡೆಸಿದರು.

ಕಾಲೇಜ ಪ್ರಾಚಾರ್ಯ ತ್ರಿಮೂರ್ತಿ ಸ್ವಾಗತಿಸಿದರು,ಶಾಲೆಯ ಉಪಪ್ರಾಚಾರ್ಯ ಹರಿಣಿ ಎ ಕಾರ್ಯಕ್ರಮ ನಿರೂಪಿಸಿದರು. ಪವನ ಎಚ್ ಯು ವಂದಿಸಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group