ಸೈದಾಪೂರ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಸೋಮವಾರದಿಂದ ಪ್ರಾರಂಭ

0
9

ಹಳ್ಳೂರ – ಸಮೀಪದ ಸಕ್ಕರೆ ನಾಡಿನ ಸೈದಾಪೂರ ಗ್ರಾಮದ ಪವಾಡ ಪುರುಷ ಜಗದ್ಗುರು ಶ್ರೀ ಶಿವಲೀಗೇಶ್ವರ ಜಾತ್ರಾ ಮಹೋತ್ಸವವು ಸೋಮವಾರ ಮುಂಜಾನೆಯ ಶಿವಲಿಂಗೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ವಿಶೇಷ ಪೂಜೆ ನೈವೇದ್ಯ ನಡೆದು 11 ಗಂಟೆಗೆ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ.

ಸಾಯಂಕಾಲ 5 ಗಂಟೆಗೆ ಮೊದಲನೇ ರಥೋತ್ಸವ ಜರುಗುವುದು. ರಾತ್ರಿ ‘ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ’ ಎಂಬ ಸುಂದರ ಸಾಮಾಜಿಕ ನಾಟಕವಿರುತ್ತದೆ. ಮಂಗಳವಾರ ಸಾಯಂಕಾಲ 5ಗಂಟೆಗೆ 2ನೇ ಮರು ರಥೋತ್ಸವ ಜರುಗುತ್ತದೆ.

ರಾತ್ರಿ ‘ಕೆಂಗೆಟ್ಟ ರೈತರು’ ಅರ್ಥಾತ್ ‘ಹಸಿರು ಕ್ರಾಂತಿ ಹರಿಕಾರ’ ಎಂಬ ಸುಂದರ ಸಾಮಾಜಿಕ ನಾಟಕವಿರುತ್ತದೆ. ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ. ಸುತ್ತಮುತ್ತಲಿನ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಬಾಗಿಯಾಗಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಅರ್ಚಕರಾದ ಮಹಾಂತಯ್ಯ ಮಠಪತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here