ಪಿ.ಎಸ್.ಸಜ್ಜನ ಕಾಲೇಜು ವಿದ್ಯಾರ್ಥಿ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆ

Must Read

ಬಾಗಲಕೋಟೆ : ಜಿಲ್ಲೆಯ ಬಾಗಲಕೋಟ ತಾಲೂಕಿನ ಬೇವೂರ ಆದರ್ಶ ವಿದ್ಯಾವರ್ಧಕ ಸಂಘದ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿರುವ ಕು. ಸಂಗಮೇಶ ಕರಿಯಪ್ಪ ಹಾಲವರ ಮಲ್ಲಕಂಬ ಕ್ರೀಡೆಯಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯ ಜಮಖಂಡಿ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾನೆ.

ಬಾಗಲಕೋಟೆಯ ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜರುಗಿದ ಮಲ್ಲಕಂಬ ಸ್ಪರ್ಧೆಯಲ್ಲಿ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾದ ಒಟ್ಟು ಆರು ವಿದ್ಯಾರ್ಥಿಗಳ ಪೈಕಿ ಪಿ.ಎಸ್.ಸಜ್ಜನ ಕಾಲೇಜಿನ ಸಂಗಮೇಶ.ಕ ಹಾಲವರ ಒಬ್ಬರಾಗಿದ್ದು ಅ.೨೪ ರಿಂದ ೨೭ರವರೆಗೆ ಚೆನ್ನೈನ ವಿನಾಯಕ ಮಿಸ್ಸೆನ್ಸ್ ರೀಸರ್ಚ ಫೌಂಡೇಶನ್ ಯುನಿವರ್ಸಿಟಿಯಲ್ಲಿ ನಡೆಯವ ಅಖಿಲ ಭಾರತ ಅಂತರ ವಿವಿ ಸ್ಪರ್ಧೆಯಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯ ಪ್ರತಿನಿಧಿಸಲಿದ್ದಾರೆ.

ವಿದ್ಯಾರ್ಥಿಗೆ ಸಂಘದ ಚೇರ‍್ಮನ್ನರಾದ  ಜಿ.ಜಿ. ಮಾಗನೂರ ವಕೀಲರು, ಸರ್ವಸದಸ್ಯರು ಪ್ರಾಚಾರ್ಯರಾದ ಡಾ. ಜಗದೀಶ ಗು. ಭೈರಮಟ್ಟಿ ಕ್ರೀಡಾವಿಭಾಗದ ಮುಖ್ಯಸ್ಥರಾದ ಜಿ.ಎಸ್ ಗೌಡರ ಹಾಗೂ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group