ಓಂ ಸಂತಾಗೆ ಸಕಲ ಕಲಾ ವಲ್ಲಭ ಪ್ರಶಸ್ತಿ ಪ್ರದಾನ

Must Read

ಮೂಡಲಗಿ : ಇತ್ತೀಚೆಗೆ ರಬಕವಿ-ಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ಮಾಧವಾನಂದ ಆಶ್ರಮದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ, ಮಹಾಕವಿ ರನ್ನ ಫೌಂಡೇಶನ್ ಮುಧೋಳ ಹಾಗೂ ವೀರ ರಾಣಿ ಕಿತ್ತೂರು ಚೆನ್ನಮ್ಮ ಸಾಂಸ್ಕೃತಿಕ ಕಲಾ ಸಂಘ ಇವುಗಳ ಆಶ್ರಯದಲ್ಲಿ ಜರುಗಿದ, ವಿವಿಧ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮೂಡಲಗಿ ಪಟ್ಟಣದ ಕಲಾವಿದ ಓಂ ಸಂತಾ ಅವರಿಗೆ ಸಕಲ ಕಲಾವಲ್ಲಭ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ರನ್ನ ಬೆಳಗಲಿಯ ಋಷಿ ಯೋಗಾಶ್ರಮದ ಸದಾಶಿವ ಗುರೂಜಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಣಜ ಡಾ. ಸಿದ್ದಪ್ಪ ಬಿದರಿ, ಸೈದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಾಲಿಂಗಪ್ಪ ಸಣದಿ, ಕನಾ೯ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಶಶಿಕಾಂತ ಗೂರುಜಿ, ಕರ್ನಾಟಕ ರಾಜ್ಯ ಯುವ ಸಂಘದ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸಿದ್ದಣ್ಣ ದುರದುಂಡಿ, ಮಹಾಕವಿ ಚಕ್ರವರ್ತಿ ರನ್ನ ಫೌಂಡೇಶನ್ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ರೂವಾರಿ ಬಸವರಾಜ್ ಕೌಜಲಗಿ, ಯಮನಪ್ಪ ಉಪ್ಪಾರ, ಖುಷಿ ದವಳಿ, ಮಲಗೌಡ ಪಾಟೀಲ, ಕಲಗೌಡ ಪಾಟೀಲ ಹಾಗೂ ಸಂಘಟಕರು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Latest News

ಲೇಖನ : ಇದ ಹಾನಿ ಮಾಡಲು ಬೇಡಿ

ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಎಂದು ಹೇಳಿದ ಪುರಂದರದಾಸರು ಮಾನವ ಜನ್ಮದ ಮೌಲ್ಯವನ್ನು ಎತ್ತಿ ಹೇಳಿದ್ದಾರೆ. ಅಂದರೆ ಮನುಷ್ಯರಾಗಿ ಹುಟ್ಟುವದೇ...

More Articles Like This

error: Content is protected !!
Join WhatsApp Group