ಒಂದೇ ದಿನಕ್ಕೆ 20,243 ಮೆ. ಟನ್ ಕಬ್ಬು ನುರಿಸಿದ ಸಮೀರವಾಡಿ ಕಾರ್ಖಾನೆ

Must Read

ಹಳ್ಳೂರ- ಸಮೀರವಾಡಿ ಸಕ್ಕರೆ ಕಾರ್ಖಾನೆಯ 2025-26 ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿ ತಿಂಗಳ ಕಾಲ ಕಳೆದಿವೆ ಎಲ್ಲ ಕಾರ್ಖಾನೆಗಳು ಕಬ್ಬು ನುರಿಸುವವುದು ಜೋರಾಗಿದ್ದು ಸಮೀರವಾಡಿ ಸಕ್ಕರೆ ಕಾರ್ಖಾನೆಯು ಗುರುವಾರದಂದು ಪ್ರಸಕ್ತ ಸಾಲಿನಲ್ಲಿ ಒಂದೇ ದಿನಕ್ಕೆ 20,243 ಮೆಟ್ರಿಕ್ ಟನ್ ಕಬ್ಬು ನುರಿಸಿ ದಾಖಲೆ ನಿರ್ಮಿಸಿದೆ.

ಕೇವಲ 35 ದಿನದಲ್ಲಿ 620297 ಮೆಟ್ರಿಕ್ ಟನ್ ಕಬ್ಬು ನುರಿಸಿ ರಾಜ್ಯದ ಎಲ್ಲ ಕಾರ್ಖಾನೆಗಳಿಗಿಂತ ಅತೀ ಹೆಚ್ಚು ಕಬ್ಬು ನುರಿಸಿ ಪ್ರಗತಿ ಪಥದಲ್ಲಿ ಸಾಗುತ್ತಿದೆ. ರೈತರ ಹಿತ ಬಯಸಿ ರೈತರ ವಿಶ್ವಾಸವುಳ್ಳ ಕಾರ್ಖಾನೆ ಎಂದೆ ಹೆಸರು ಪಡೆದ ಸಕ್ಕರೆ ಕಾರ್ಖಾನೆ ಇದಾಗಿದ್ದು ರೈತ ಕಾರ್ಖಾನೆಗೆ ಕಬ್ಬು ದಿನಾ ದಿನಾ ಹೆಚ್ಚಾಗುತ್ತಿದ್ದು ಒಂದೇ ದಿನಕ್ಕೆ 20243 ಮೆಟ್ರಿಕ್ ಟನ್ ಕಬ್ಬು ನುರಿಸಿದರೂ 11546 ಮೆಟ್ರಿಕ್ ಟನ್ ಕಬ್ಬು ಬಾಕಿ ಉಳಿಯುತ್ತಿದೆ

ಅತೀ ಹೆಚ್ಚು ಕಬ್ಬು ನುರಿಸಿದ್ದಕ್ಕೆ ಕಾರ್ಖಾನೆಯ ನಿರ್ದೇಶಕರಾದ ಬಾಲಚಂದ್ರ ಭಕ್ಷಿ . ಮುಖ್ಯ ತಾಂತ್ರಿಕ ಅಧಿಕಾರಿ ದಿನೇಶ ಶರ್ಮಾ. ಕೆನ್ ವಿಭಾಗದ ಜನರಲ್ ಮ್ಯಾನೇಜರ್ ವಿ ಎಸ್ ಕಣಬುರ ಅವರು ಕಾರ್ಖಾನೆಯ ಕಾರ್ಮಿಕರಿಗೆ, ರೈತ ಬಾಂಧವರಿಗೆ ಅಭಿನಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group