- Advertisement -
ಮೂಡಲಗಿ – ಮೂಡಲಗಿಯಿಂದ ಗೋಕಾಕ ರಸ್ತೆಯ ಬಲಬದಿ ಇರುವ ಸರ್ಕಾರಿ ಆಸ್ಪತ್ರೆಯಿಂದ ಗಣೇಶ ನಗರ ( ಮೂಡಲಗಿ ಕ್ರಾಸ್ ) ದ ವರೆಗಿನ ಪ್ರದೇಶಕ್ಕೆ ಶ್ರೀ ಬಸವೇಶ್ವರ ನಗರ ಎಂದು ನಾಮಕರಣ ಮಾಡಬೇಕೆಂದು ನೀಡಲಾಗಿದ್ದ ಮನವಿಯನ್ನು ಜಿಲ್ಲಾಧಿಕಾರಿಗಳು ಪುರಸ್ಕರಿಸಿ ಅನುಮತಿ ನೀಡಿದ್ದು ಅನುಮತಿ ಪತ್ರವನ್ನು ಪುರಸಭೆ ಮುಖ್ಯಾಧಿಕಾರಿಗಳು ಬಸವೇಶ್ವರ ನಗರದ ನಿವಾಸಿಗಳಿಗೆ ನೀಡಿದರು.
ಅನುಮತಿ ಪತ್ರದ ಜೊತೆಗೆ ಶ್ರೀ ಬಸವೇಶ್ವರ ನಗರದ ನಕ್ಷೆಯನ್ನು ನೀಡಲಾಗಿದ್ದು ಸದರಿ ಪ್ರದೇಶದಲ್ಲಿ ನಾಮಫಲಕಗಳನ್ನು ಹಚ್ಚುವ ಮುನ್ನ ಪರಸಭೆಯಿಂದ ಪರವಾನಿಗೆ ಪಡೆಯಬೇಕು ಎಂದು ತಿಳಿಸಲಾಗಿದೆ.
- Advertisement -
ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಹಾಗೂ ಕಂದಾಯ ಅಧಿಕಾರಿಗಳು ಈ ಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಶ್ರೀ ಬಸವ ಸೇವಾ ಯುವಕ ಸಂಘದ ಅಧ್ಯಕ್ಷ ಕಲ್ಮೇಶ ಗೋಕಾಕ, ಉಪಾಧ್ಯಕ್ಷ ಪ್ರವೀಣ ಕುರುಬಗಟ್ಟಿ ಕಾಯ೯ದಶಿ೯ ಉಮೇಶ ಶೆಕ್ಕಿ, ಮಲ್ಲು ಕುರುಬಗಟ್ಟಿ ಹಾಗೂ ಅನೇಕರು ಹಾಜರಿದ್ದರು.