- Advertisement -
ಬೀದರ – ಯಾವುದೇ ಪರವಾನಿಗೆ ಇಲ್ಲದೇ ಮಾಂಜ್ರಾ ನದಿಯ ಒಡಲು ಬಗೆಯುತ್ತಿದ್ದ ಮರಳು ದಂಧೆಕೋರರಿಗೆ ಸಂಬಂಧಪಟ್ಟ ಸುಮಾರು ಏಳು ಲಕ್ಷ ರೂ. ಮೌಲ್ಯದ ಬೋಟ್ ಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ನಾಶಪಡಿಸಿದ್ದಾರೆ.
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಸಿ ತೂಗಾಂವ್ ಗ್ರಾಮದ ಮಾಂಜ್ರಾ ನದಿಯ ದಡದಲ್ಲಿ ಈ ಘಟನೆ ನಡೆದಿದ್ದು ಹಲವು ವರ್ಷಗಳಿಂದ ಮಹಾರಾಷ್ಟ್ರ ಕರ್ನಾಟಕ ಗಡಿಯ ಮಾಂಜ್ರಾ ನದಿಯಿಂದ ಮರಳನ್ನು ಬಗೆದು ತೆಗೆಯಲಾಗುತ್ತಿತ್ತು.
ಈ ಅಕ್ರಮ ಮರಳು ದಂಧೆಯನ್ನು ನಿಲ್ಲಿಸಬೇಕೆಂದು ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಧನರಾಜ್, ಭಾಲ್ಕಿ ಗ್ರಾಮೀಣ ಠಾಣೆಯ ಸಿಪಿಐ ಜಿ ಎಸ್ ಬಿರಾದಾರ, ಪಿಎಸ್ಐ ಶಿವಕುಮಾರ ಬಳತೆ, ನಾಡ ತಹಶಿಲ್ದಾರ ಸುನಿಲ ಸಜ್ಜನಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಿ ಮರಳಿನ ಬೋಟ್ ಗಳನ್ನು ಸುಟ್ಟುಹಾಕಿದರು.
- Advertisement -
ವರದಿ : ನಂದಕುಮಾರ ಕರಂಜೆ, ಬೀದರ