ಸಿಂದಗಿ- ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ದಿ. ೨೫ ರಂದು ಬೆಳಿಗ್ಗೆ ೧೦ ಗಂಟೆಗೆ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜಯಂತಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಕಾರಣ ಹಾಲುಮತ, ಕುರುಬ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ತಾಲೂಕಾ ಸಂಗೋಳ್ಳಿ ರಾಯಣ್ಣ ನೌಕರರ ಸಂಘದ ಅಧ್ಯಕ್ಷ ರಾಯಣ್ಣ ಇವಣಗಿ ವಿನಂತಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜಯಂತಿ ನಿಮಿತ್ತ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಿಂಥಣಿ ಬ್ರಿಡ್ಜ್ ಕಾಗಿನೆಲೆ ಮಹಾ ಸಂಸ್ಥಾನ, ಶಾಖಾಮಠದ: ಶ್ರೀಶ್ರೀಶ್ರೀ ಸಿದ್ಧರಾಮಾನಂದಪುರಿ ಮಹಾಸ್ವಾಮಿಗಳು ಹಾಗೂ ಸುಕ್ಷೇತ್ರ, ಗೋಳಹಾರ ಪೂಜ್ಯಶ್ರೀ ಅಭಿನವ ಪುಂಡಲಿಂಗ ಮಹಾ ಶಿವಯೋಗಿಗಳ ಸಾನ್ನಿಧ್ಯದಲ್ಲಿ ವಿಜಯಪುರ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್. ನಾಗೂರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಸಿಂದಗಿ ತಾಲೂಕಾ ಸಂಗೊಳ್ಳಿ ರಾಯಣ್ಣನೌಕರರ ಸಂಘದ ಅಧ್ಯಕ್ಷ ರಾಯಪ್ಪ ಇವಣಗಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಡೊಳ್ಳಿನ ಕಲಾ ಗಾಯನ ಸಂಘದ ರಾಜ್ಯಾಧ್ಯಕ್ಷ ಜಕ್ಕಣ್ಣ ಮಾಸ್ತರ ಮೀಸಿ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಿ.ಎಂ. ಮೂಲಿಮನಿ, ಎಚ್.ಎಲ್. ಸಂಖ, ಎಂ.ಎಂ. ತಡಲಗಿ, ಪ್ರಾಚಾರ್ಯ ಎ.ಆರ್. ಹೆಗ್ಗಣದೊಡ್ಡಿ, ಡಾ. ಬಿ.ಎಸ್. ಅಳ್ಳಿಚಂಡಿ, ಚಿ. ವಾಯ್, ಗೌಡರ ಸೇರಿದಂತೆ ಅನೇಕರು ಉಪಸ್ಥಿತರಿಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್.ಕೆ.ಪಾಟೀಲ, ಎಂ.ಬಿ.ಪೂಜಾರ, ಜಿ.ಎನ್.ನಡಕೂರ, ಎಸ್.ಎಲ್.ಸುಂಬಡ, ಜಿ.ಎಸ್.ತಾವರಖೇಡ, ಮಹಾಂತೇಶ ಗುಂದಗಿ, ಹಿರಗಪ್ಪ ಪೂಜಾರ, ಮುತ್ತಪ್ಪ ಒಡೆಯರ, ಎಂ.ಬಿ.ಹೊಸೂರ, ರೇವಣಸಿದ್ದ ಹೂಗಾರ, ಬಸವರಾಜ ನಾಗರಾಳ ಸೇರಿದಂತೆ ಅನೇಕರಿದ್ದರು.