- Advertisement -
ಹೊಸದಿಲ್ಲಿ – ರಾಷ್ಟ್ರೀಯ ಪಿಂಚಣಿ ಪದ್ಧತಿ ಅಡಿಯಲ್ಲಿ ಸೇವೆಗೆ ಸೇರಿರುವ ೨೩ ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಅವರ ಸಂಬಳದ ಶೇಕಡಾ ೫೦ ರಷ್ಟು ಪಿಂಚಣಿ ನೀಡಲು ಕೇಂದ್ರ ಸಂಪುಟ ಶನಿವಾರದಂದು ಒಪ್ಪಿಗೆ ನೀಡಿದೆ.
ಈ ಯೋಜನೆಯು ಬರುವ ವರ್ಷ ೨೦೨೫ ರ ಏಪ್ರಿಲ್ ೧ ರಿಂದ ಜಾರಿಗೆ ಬರಲಿದ್ದು, ೨೦೦೪ ರ ಏಪ್ರಿಲ್ ೧ ರ ನಂತರ ಸರ್ಕಾರಿ ನೌಕರಿಗೆ ಸೇರಿದ ನೌಕರರಿಗೆ ಅನ್ವಯವಾಗುತ್ತದೆ.
ಸಂಪುಟದ ಈ ನಿರ್ಧಾರವನ್ನು ಪ್ರಕಟಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಮಂತ್ರಿ ಅಶ್ವಿನಿ ವೈಷ್ಣವ ಅವರು ಏಕತ್ರ ಪಿಂಚಣಿ ಯೋಜನೆಯ ಪ್ರಕಾರ ಸರ್ಕಾರಿ ನೌಕರರು ಇನ್ನು ಮುಂದೆ ತಾವು ಕಳೆದ ೧೨ ತಿಂಗಳು ಪಡೆದ ಸಂಬಳದ ಸರಾಸರಿ ಮೊತ್ತದ ಶೇಕಡಾ ೫೦ ರಷ್ಟು ಪಿಂಚಣಿ ಪಡೆಯಲು ಅರ್ಹರಾಗುತ್ತಾರೆ ಎಂದರು.
- Advertisement -
ಪಿಂಚಣಿ ಪಡೆಯುವ ಅರ್ಹತಾ ಅವಧಿಯು ಮುಂದಿನ ೨೫ ವರ್ಷಗಳು ಎಂದು ಸಚಿವರು ಹೇಳಿದರು