ಸವದತ್ತಿ – ಪಟ್ಟಣದ ಕಟ್ಟಿ ಓಣಿ ದೇಸಾಯಿ ಗಲ್ಲಿಯ ಗಜಾನನ ದೇವಸ್ಥಾನದಲ್ಲಿ ಮಂಗಳವಾರ ರಂದು ಅಂಗಾರಿಕಾ ಸಂಕಷ್ಠೀ ನಿಮಿತ್ತ ಗಜಾನನನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಮುಂಜಾನೆ ಪಂಚಾಮೃತ ಅಭಿಷೇಕ ನಂತರ ಮೂರ್ತಿಗೆ ಬೆಣ್ಣೆ ಲೇಪನ ಮಾಡಿ ಪುಷ್ಪಾಲಂಕಾರ ನಂತರ ಮಹಾಮಂಗಳಾರತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಅರ್ಚಕರಾದ ಧೀರೇಂದ್ರ ಕಾನಡೆಯವರು ನಡೆಯಿಸಿ ಕೊಟ್ಟರು. ರಾತ್ರಿ 9 ಘಂಟೆ 44 ನಿಮಿಷಕ್ಕೆ ಚಂದ್ರೋದಯದ ನಂತರ ಪಟ್ಟಣದ ಭಕ್ತರು ದೇವಸ್ಥಾನಕ್ಕೆ ಬಂದು ದರುಶನಾಶೀರ್ವಾದ ಪಡೆದು ಪುನೀತರಾದರು.