ಸಿಂದಗಿ: ಮಹಾತ್ಮರು, ಸಾಧಕರು ಶಿವಶರಣರು, ಸಂತರು, ಸಾವಿನ ನಂತರವು ಭಕ್ತರಮನದಲ್ಲಿ ಸದಾಕಾಲ ಜೀವಂತ ಇರುತ್ತಾರೆ ಎಂದು ಮೂರ್ಜಾವದ ಮಠದ ರಾಮಚಂದ್ರ ಶ್ರೀಗಳು ಹೇಳಿದರು.
ಪಟ್ಟಣದ ಕಾಳಿಕಾ ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ಬ್ರಹ್ಮಲೀನರಾದ ರಾಷ್ಟ್ರಸಂತರು. ವೇದ ವೇದಾಂತಾಚಾರ್ಯ ಪೂಜ್ಯ ಶ್ರೀ ಅಷ್ಟೋತ್ತರ ಶತ ಶಿವಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ದಯಾನಂದ ಪತ್ತಾರ, ಉಪಾಧ್ಯಕ್ಷ ಮೋಹನ ಪತ್ತಾರ, ವಿನೋದ ಹಂಚನಾಳ, ಗುರಪ್ಪ ಪತ್ತಾರ, ಶಿವಾನಂದ ಬಡಿಗೇರ, ಶಿಕ್ಷಕ ಅಶೋಕ ಬಡಿಗೇರ ಆಲಮೆಲ, ಗಂಗಾಧರ ಪತ್ತಾರ ಆಲಮೆಲ, ಲಕ್ಷ್ಮಣ ಪತ್ತಾರ, ಸೋಮನಾಥ ಹಂಚನಾಳ, ಕಮಲಾಕರ ಪತ್ತಾರ, ಪ್ರಭು ಹಂಚನಾಳ, ವಿಶ್ವನಾಥ ಬಡಿಗೇರ, ಸಿದ್ದಲಿಂಗ ಪತ್ತಾರ, ಈರಣ್ಣ ಪತ್ತಾರ, ಆರ್.ಎಮ್ ಪತ್ತಾರ, ನಾಗು ಪತ್ತಾರ, ಅಜೀತ ಕಲಬುರ್ಗಿ, ಮಹಾದೇವಿ ಪತ್ತಾರ, ಮಂಡಳಿಯ ವಿಜಯಲಕ್ಷ್ಮೀ ಮೂರ್ಝಾವದಮಠ, ಸುಭದ್ರಾ ಮಠ, ನಾಗಠಾಣ ಗಾಯಿತ್ರಿ ಮಠದ, ಶಾರದಾ ಬಡಿಗೇರ, ಸುಮಂಗಲಾ ಬಮ್ಮಣ್ಣಿ, ಮಾನಂದಾ ಪತ್ತಾರ, ಶಕುಂತಲಾ ರಾಂಪೂರ, ಜಯಶ್ರಿ ಬಡಿಗೇರ, ಬಾಗಿರಥಿ ಬಡಿಗೇರ ಸೇರಿದಂತೆ ವಿಶ್ವಕರ್ಮದ ಸಮಾಜ ಬಂಧುಗಳು ಪಾಲ್ಗೊಂಡಿದ್ದರು.