ಸತೀಶರಡ್ಡಿ ರಡ್ಡೇರ ಪಿಎಸ್‍ಐ ಹುದ್ದೆಗೆ ಆಯ್ಕೆ

Must Read

ಮೂಡಲಗಿ: ಕಳೆದ ಅಕ್ಟೋಬರ ತಿಂಗಳಲ್ಲಿ ಪಿಎಸ್‍ಐ ಹುದ್ದೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ಪಟ್ಟಣದ ಲಕ್ಷ್ಮೀ ನಗರದ ಸತೀಶರಡ್ಡಿ ಪರುಶುರಾಮ ರಡ್ಡೇರ ಅವರು 96ನೇ ರ್ಯಾಂಕ ಪಡೆಯುವ ಮೂಲಕ ಪಿಎಸ್‍ಐ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಇವರು ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಕುಂದೂರು ಗ್ರಾಮದವರಾಗಿದ್ದು ಇವರ ತಂದೆ ಇಲ್ಲಿನ ಎಮ್‍ಇಎಸ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸತೀಶರಡ್ಡಿ ಅವರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಹುಲಕೋಟಿಯ ಇಂಜಿನಿಯರಿಂಗ ಕಾಲೇಜಿನಲ್ಲಿ ಬಿಇ ಅಟೋಮೊಬೈಲನಲ್ಲಿ 9ನೇ ರ್ಯಾಂಕ ಪಡೆದಿದ್ದಾರೆ.

ಪೋಲಿಸ್ ಅಧಿಕಾರಿಯಾಗಬೇಕೆಂದು ಸತತ ಪ್ರಯತದಿಂದ ಓದಿ ಪರೀಕ್ಷೆ ಎದುರಿಸಿ ಪಿಎಸ್‍ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಈ ಸಾಧನೆಗೆ ಪಾಲಕರು,ಅವರ ಹಿತೈಷಿಗಳು ಹಾಗೂ ಶಿಕ್ಷಕ ಬಳಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group