ಮೂಡಲಗಿ: – ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರು ತಾಲೂಕಿನ ಅವರಾದಿ ಗ್ರಾಮಕ್ಕೆ ಆಗಮಿಸಿ ಮಳೆಗಾಲದಲ್ಲಿ ಮುಳುಗಡೆಯಾಗುವ ಸೇತುವೆ ವೀಕ್ಷಣೆ ಮಾಡಿದರು.
ಅವರಾದಿ ಗ್ರಾಮಕ್ಕೆ ಆಗಮಿಸಿ ಸೇತುವೆ ವೀಕ್ಷಿಸಿ, ಅವರಾದಿ-ನಂದಗಾವ ಮೂಲಕ ಮಹಾಲಿಂಗಪೂರ ಸಂಪರ್ಕ ಇರುವ ಸೇತುವೆ ಮಕ್ಕಳ ಶಿಕ್ಷಣ, ಆರೋಗ್ಯ,ಸಾರ್ವಜನಿಕರ ಅನುಕೂಲಕ್ಕಾಗಿ ಅವರಾದಿ ಸೇತುವೆ ಕಂ ಬ್ಯಾರೇಜ್ ಸೇತುವೆಯನ್ನು ಮೇಲ್ದರ್ಜೆಗೆ ಏರಿಸುವುದಾಗಿ ಗ್ರಾಮದ ಜನತೆಗೆ ಭರವಸೆ ನೀಡಿದರು.
ಸಂದರ್ಭದಲ್ಲಿ ಅವರಾದಿ ಗ್ರಾಮದ ಮುಖಂಡರು,ಹಿರಿಯರು, ಯವಕರು ಮತ್ತು ಆರಕ್ಷಕರು ಇದ್ದರು