spot_img
spot_img

ಶಿಕ್ಷಣ ಇಲಾಖೆಯ ಯೋಜನೆಗಳೇ ಶಾಲಾಭಿವೃದ್ಧಿಗೆ ಪೂರಕ: ಅಜಿತ್ ಮನ್ನಿಕೇರಿ

Must Read

spot_img
- Advertisement -

ಮೂಡಲಗಿ: ಶಿಕ್ಷಣ ಇಲಾಖೆಯ ಎಲ್ಲ ಯೋಜನೆಗಳ ಉದ್ದೇಶಗಳನ್ನು ತಿಳಿದುಕೊಂಡು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದಾಗ ಎಲ್ಲ ಸರಕಾರಿ ಶಾಲೆಗಳ ಅಭಿವೃದ್ಧಿ ಸಾದ್ಯ ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಹೇಳಿದರು.

ಅವರು ತಾಲೂಕಿನ ತುಕ್ಕಾನಟ್ಟಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರದಂದು ವಿದ್ಯಾರ್ಥಿಗಳಿಗೆ ಸಂಕ್ರಮಣದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ವಿಶೇಷ ಭೋಜನಕೂಟದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.  

ಅದರಂತೆ ಎಲ್ಲ ಯೋಜನೆಗಳ ಜೊತೆ ಅಕ್ಷರದಾಸೋಹ ಕಾರ್ಯಕ್ರಮವನ್ನು ಉತ್ತಮವಾಗಿ ಜಾರಿಗೆ ತಂದಾಗ ಸರ್ಕಾರಿ ಶಾಲೆಗಳ ಬಡ ವಿದ್ಯಾರ್ಥಿಗಳ ಹಸಿವಿನ ದಾಹ ನೀಗಿಸಿ ಆರೋಗ್ಯವಂತರಾದಾಗ ಉತ್ತಮ ಶಿಕ್ಷಣ ಆ ಮಗು ಪಡೆಯಬಹುದು ಹೀಗಾಗಿ ಇಲ್ಲಿ ಒಳ್ಳೆಯ ಶಿಕ್ಷಣದ ಜೊತೆಗೆ ಉತ್ತಮ ಆಹಾರವನ್ನು ನೀಡುತ್ತಿದ್ದಾರೆ.

- Advertisement -

ಇವತ್ತು ಸಂಕ್ರಮಣದಲ್ಲಿ ಮಾಡುವ ಅಡುಗೆ ತಿಂಡಿ, ಗೋದಿ ಮಾದ್ಲಿ, ಶೇಂಗಾ ಹೋಳಿಗೆ, ಸಜ್ಜಿರೊಟ್ಟಿ, ಗೊಂಜಾಳ ರೊಟ್ಟಿ, ರಾಗಿ ಅಂಬಲಿ, ಬಳ್ಳೊಳ್ಳಿ ಕಾರ, ಜುಣಕದ ವಡೆ, ಬಾನ,ಕಾರ ಬೇಳೆ, ಮಡಿಕೆ ಉಸುಳೆ, ಕೋಸಂಬರಿ, ಮೊಸರು, ಶೇಂಗಾ ಚಟ್ನಿ, ಅಗಸಿ ಚಟ್ನಿ, ಕಾಂದಾ ಬಜಿ ಮಾಡಿ ಬಡಿಸಲಾಯಿತು. ಶಿಕ್ಷಣ ಮತ್ತು ಆಹಾರ ಮಕ್ಕಳಿಗೆ ತುಂಬಾ ಅವಶ್ಯಕವಾಗಿರುತ್ತವೆ. ಇವೆರಡೂಗಳನ್ನು ಸರಿಯಾಗಿ ನಿರ್ವಹಿಸಿದಾಗ ಸರಕಾರಿ ಶಾಲೆಗಳು ಸಮಾಜದಲ್ಲಿ ತುಂಬಾ ಪರಿಣಾಮ ಬೀರುತ್ತವೆ ಎಂದು ಹೇಳಿದರು.

ಕಲ್ಲೋಳಿ ಸಿ.ಆರ್.ಪಿ. ಗಣಪತಿ ಉಪ್ಪಾರ, ಮಾತನಾಡಿ ಎಲ್ಲಾ ಶಾಲೆಗಳ ಶಿಕ್ಷಕರು ತುಕ್ಕಾನಟ್ಟಿ ಸರಕಾರಿ ಶಾಲೆಯನ್ನು ಮಾದರಿಯಾಗಿಟ್ಟುಕೊಂಡು ತಮ್ಮ ಶಾಲೆಗಳಲ್ಲಿಯೂ ಕೂಡ ಸರಕಾರಿ ಯೋಜನೆಗಳನ್ನು ಯಶಸ್ವಿಗೊಳಿಸಬೇಕೆಂದರು.

ಮುಖ್ಯಾಧ್ಯಾಪಕ ಎ.ವ್ಹಿ.ಗಿರೆಣ್ಣವರ ಮಾತನಾಡಿ ಸರಕಾರಿ ಶಾಲೆಗಳು ಯಶಸ್ವಿಯಾಗಬೇಕಾದರೆ, ಸಮುದಾಯದ ಪಾತ್ರ ಹಾಗೂ ಶಿಕ್ಷಕರ ಕ್ರಿಯಾಶೀಲತೆ ಮುಖ್ಯವಾಗಿರುತ್ತದೆ. ಸರಕಾರಿ ಯೋಜನೆಗಳು ಯಶಸ್ವಿಯಾಗಬೇಕಾದರೆ, ಎಲ್ಲರ ಪಾತ್ರ ಹಾಗೂ ಇಚ್ಚಾಶಕ್ತಿ ಕಾರಣವಾಗಿರುತ್ತದೆ ಎಂದರು.

- Advertisement -

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ, ಶೀಲಾ ಕುಲಕರ್ಣಿ, ಪುಷ್ಪಾ ಭರಮದೆ, ಜ್ಯೋತಿ ಉಪ್ಪಾರ, ಮಹಾದೇವ ಗೋಮಾಡಿ, ಶಂಕರ ಲಮಾಣಿ, ಕಿರಣ ಭಜಂತ್ರಿ, ರೂಪಾ ಗದಾಡಿ, ಶಿವಲೀಲಾ ಹಣಮನ್ನವರ, ಖಾತೂನ ನದಾಫ, ಹೊಳೆಪ್ಪ ಗದಾಡಿ ರೇಖಾ ಗದಾಡಿ ಹಾಗೂ ಅಡುಗೆ ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group