ಮೂಡಲಗಿ: ಎಸ್‍ಎಸ್‍ಎಲ್‍ಸಿ ನಂತರ ಶಿಕ್ಷಣ ಮುಂದುವರಿಸಲು ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧಾರವಾಡದ ವಿದ್ಯಾಪೋಷಕ ಸಂಸ್ಥೆಯ ನರ್ಚರ ಮೆರಿಟ್ ಯೋಜನೆಯ ಅಡಿಯಲ್ಲಿ 2024-25ನೇ ಶೈಕ್ಷಣಿಕ ಸಾಲಿಗಾಗಿ ಆರ್ಥಿಕ ನೆರವು ನೀಡಲಿದೆ.
ವಿದ್ಯಾರ್ಥಿಗಳು ಇದೇ ಮಾ. 2024ರಲ್ಲಿ ಪ್ರಥಮ ಬಾರಿಗೆ ಎಸ್‍ಎಸ್‍ಎಲ್ ಸಿ ಪರೀಕ್ಷೆ ಬರೆದು ಶೇ. 80ರಷ್ಟು ಅಂಕ ಪಡೆದುಕೊಂಡು ಉತ್ತೀರ್ಣರಾಗಿರುವ ಮತ್ತು ಪಿಯುಸಿ ಮೊದಲ ವರ್ಷದ ವಾಣಿಜ್ಯ ಮತ್ತು ಇಂಗ್ಲಿಷ್ ಮಾಧ್ಯಮದ ಕಲಾ ಕೋರ್ಸ್‍ಗೆ ಸೇರಬಯಸುವ ವಿದ್ಯಾರ್ಥಿಗಳು ಅರ್ಜಿ ಹಾಕಲು ಅರ್ಹರಿರುವರು.
ವಿದ್ಯಾರ್ಥಿಗಳ ಕುಟುಂಬದ ಮಾಸಿಕ ವರಮಾನ ರೂ.10,000ಕ್ಕಿಂತ ಕಡಿಮೆ ಇರಬೇಕು.
ಬೆಳಗಾವಿ, ಬಾಗಲಕೋಟ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಶಿವಮೊಗ್ಗ ದಾವಣಗೆರೆ ಮತ್ತು ಕೊಪ್ಪಳ ಜಿಲ್ಲೆಯಲ್ಲಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಹಾಕಬೇಕು.
ಅರ್ಜಿಯು ವಿದ್ಯಾಪೋಷಕ ಸಂಸ್ಥೆಯ ವೆಬ್‍ಸೈಟ್‍ದಲ್ಲಿ ಲಭ್ಯವಿದ್ದು, ಆನ್‍ಲೈನ್ ಮೂಲಕ ಇದೇ ಜುಲೈ 15ರ ಒಳಗಾಗಿ ಅರ್ಜಿ ಹಾಕಬೇಕು.
ಹೆಚ್ಚಿನ ಮಾಹಿತಿಗಾಗಿ ಧಾರವಾಡ ಪೋನ್ ಸಂ: 0836-2747357, ಮೂಡಲಗಿ ತಾಲ್ಲೂಕು ವ್ಯಾಪ್ತಿಯ ವಿದ್ಯಾರ್ಥಿಗಳು ಮೊ. 9448839086, ಗೋಕಾಕ ತಾಲ್ಲೂಕು ವ್ಯಾಪ್ತಿಯಲ್ಲಿ ಮೊ. 94495455650 ಸಂಪರ್ಕಿಸಲು ತಿಳಿಸಿದ್ದಾರೆ. ವೆಬ್‍ಸೈಟ್ ವಿಳಾಸ www.vidyaposhak.ngo