ಮುಧೋಳ – ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ {ರಿ} ಮುಧೋಳ ಇವರಿಂದ ಮುಗಳಖೋಡದ ಏಳು ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣಕ್ಕೆ 2ಲಕ್ಷ 16 ಸಾವಿರ ಮೊತ್ತದ ಸುಜ್ಞಾನ ನಿಧಿ ಶಿಷ್ಯವೇತನದ ಮಂಜೂರಾತಿ ಪತ್ರವನ್ನು ವಿತರಣೆಯನ್ನು ಮಾಡಲಾಯಿತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಕಚೇರಿಯಲ್ಲಿ ಶ್ರಾವಣ ಸಂಭ್ರಮ ಕೊನೆಯ ಶುಕ್ರವಾರ ತನ್ನಿಮಿತ್ತ ಲಕ್ಷ್ಮಿ ಪೂಜೆಯನ್ನ ಮಾಡಿ ಕೃಷಿ ಅಧಿಕಾರಿ ಪ್ರವೀಣ ಪೂಜಾರಿಯವರು ಶಿಷ್ಯವೇತನ ಪತ್ರವನ್ನು ವಿದ್ಯಾರ್ಥಿಗಳಿಗೆ ನೀಡಿ ಮಾತನಾಡುತ್ತಾ.ಪೂಜ್ಯರಾದ ಧಮ೯ಸ್ಥಳದ ಧಮಾ೯ಧಿಕಾರಿ ವೀರೇಂದ್ರ ಹೆಗ್ಗಡೆ ಅವರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು ಶಿಷ್ಯವೇತನವನ್ನು ನೀಡುತ್ತಿದ್ದು ಇದರ ಪ್ರಯೋಜನನ್ನು ಪಡೆದು ಸಮಾಜಕ್ಕೆ ಉತ್ತಮ ಸೇವೆ ನೀಡುವಂತಾಗಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಚಂದ್ರಕಲಾ ಒಡೆಯರ ಪಿ .ಕೆ.ಪಿ.ಎಸ್ ಮಾಜಿ ಅಧ್ಯಕ್ಷ ನವಜೀವನ ಸಮಿತಿ ಸದಸ್ಯ ಪಿ.ಡಿ.ಕುಂಬಾರ, ಶೌಯ೯ ವಿಪತ್ತು ಘಟಕದ ಸದಸ್ಯ ಹಣಮಂತ ನಾವ್ಹಿ ಉಪಸ್ಥಿತರಿದ್ದರು.
ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿಗಳಾದ ಎಲ್ ಶ್ಯಾಮಲಾ ಮಾತನಾಡಿದರು . ಶಿಲ್ಪಾ ಒಡೆಯರ್ ಸ್ವಾಗತಿಸಿದರು.ರಕ್ಷಿತಾ ಒಡೆಯರ್ ವಂದಿಸಿದರು