ಮೂಡಲಗಿ – ಸರ್ಕಾರಿ ಶಾಲೆಯ ಚಿಕ್ಕ ಮಕ್ಕಳಿಂದ ಮುಖ್ಯೋಪಾಧ್ಯಾಯರು, ಶಿಕ್ಷಕರು ತಾವು ಊಟ ಮಾಡಿದ ಪ್ಲೇಟುಗಳನ್ನು ತೊಳೆಯಲು ಹಚ್ಚಿದ ಘಟನೆ ತಾಲೂಕಿನ ಪಟಗುಂದಿಯ ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿಠ್ಠಪ್ಪನಕೋಡಿ ಶಾಲೆಯಲ್ಲಿ ನಡೆದಿದೆ.
ಶಾಲೆಯ ಮುಖ್ಯೋಪಾಧ್ಯಾಯ ಎಮ್ ಎಲ್ ನಾಯಿಕ ಅವರು ತಾವು ಊಟ ಮಾಡಿದ ನಂತರ ಪ್ಲೇಟ್ ತೊಳೆಯಲು ಶಾಲೆಯ ಮಕ್ಕಳು ತೆಗೆದುಕೊಂಡು ಹೋಗುವ ವಿಡಿಯೋ ವೈರಲ್ ಆಗಿದೆ.
ಈ ಬಗ್ಗೆ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹಿರೇಮಠ ಅವರ ಗಮನಕ್ಕೆ ತಂದಾಗ, ಶಿಕ್ಷಕರು ಈ ರೀತಿ ಮಾಡುವುದು ತಪ್ಪು. ಈ ಘಟನೆಯಲ್ಲಿ ಯಾರು ಶಾಮೀಲಾಗಿದ್ದಾರೆಂಬುದನ್ನು ಪರಿಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು
ಇಂಥ ಅಮಾನವೀಯ ಘಟನೆ ಹಲವಾರು ದಿನಗಳಿಂದ ನಡೆದು ಬರುತ್ತಿದ್ದರೂ ಉಳಿದ ಶಿಕ್ಷಕರಾಗಲಿ ಅಧಿಕಾರಿ ಗಳಾಗಲೀ ಗಮನಕ್ಕೆ ಬಾರದೇ ಇರುವುದು ವಿಷಾದನೀಯ. ಶಿಕ್ಷಣ ಇಲಾಖೆ ಯಾವ ದಾರಿಯಲ್ಲಿ ಸಾಗಿದೆ ಎಂಬ ಪ್ರಶ್ನೆ ಎದುರಾಗುವ ಇಂಥ ಸನ್ನಿವೇಶವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಗೆ ನಿಭಾಯಿಸುತ್ತಾರೋ ಕಾದು ನೋಡಬೇಕು.

