ಲಯನ್ಸ್ ಕ್ಲಬ್‍ದಿಂದ ಶಾಲಾ ಮಕ್ಕಳ ಹಲ್ಲು ತಪಾಸಣೆ

Must Read

ಮೂಡಲಗಿ: ದೇಹದ ಆರೋಗ್ಯ ಉತ್ತಮವಾಗಿರಬೇಕಾದರೆ ಹಲ್ಲುಗಳ ಆರೋಗ್ಯ ಉತ್ತಮವಾಗಿರಬೇಕು’ ಎಂದು ದಂತ ವೈದ್ಯ ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು.

ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಸಮೀಪದ ತಳವಾರ ತೋಟದ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ಉಚಿತ ಹಲ್ಲು ತಪಾಸಣಾ ಶಿಬಿರದಲ್ಲಿ ಮಕ್ಕಳನ್ನು ಹಾಗೂ ಪಾಲಕರನ್ನು ಉದ್ಧೇಶಿಸಿ ಮಾತನಾಡಿದ ಅವರು, ಮಕ್ಕಳು ಸರಿಯಾಗಿ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳುವುದರ ಮೂಲಕ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಬಾಲ್ಯದ ಹಂತದಲ್ಲಿ ಹಲ್ಲುಗಳ ಬಗ್ಗೆ ಕಾಳಜಿವಹಿಸುವ ಬಗ್ಗೆ ಅರಿವು ಮೂಡಿಸುವುದು ಅವಶ್ಯವಿದೆ. ಪಾಲಕರು ಸಹ ಮಕ್ಕಳ ಹಲ್ಲುಗಳ ಸ್ವಚ್ಛತೆ ಬಗ್ಗೆ ಜಾಗೃತವಹಿಸಬೇಕು ಎಂದರು.

ಲಯನ್ ಸದಸ್ಯ ಗಿರೀಶ ಆಸಂಗಿ ಶಾಲೆಯ ಎಲ್ಲ ಮಕ್ಕಳಿಗೆ ಉಚಿತವಾಗಿ ಬ್ರಶ್ ಮತ್ತು ಟೂತ್‍ಪೇಸ್ಟ್ ಗಳನ್ನು ನೀಡಿದರು.

ಸಿಆರ್‍ಪಿ ಎಸ್.ಎನ್. ದಬಾಡಿ, ಶಾಲೆಯ ಮುಖ್ಯ ಶಿಕ್ಷಕ ರುಕ್ಮೀಣಿ ಬಿ. ಶೆಕ್ಕಿ, ಮಹಾವೀರ ಸಲ್ಲಾಗೋಳ ಅತಿಥಿಯಾಗಿ ಉಪಸ್ಥಿತರಿದ್ದರು.

ಶಿಕ್ಷಕ ಶಿವಾನಂದ ಕಿತ್ತೂರ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.

Latest News

ವಿದ್ಯಾರ್ಥಿಗಳು ಮೌಲ್ಯಯುತ ಬದುಕಿಗೆ ಆದ್ಯತೆ ನೀಡಬೇಕು – ಸಂತೋಷ ಬಂಡೆ

ಸಿಂದಗಿ: ಇಂದಿನ ಯುವ ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು, ಸಮಯ ಪಾಲನೆ ಹಾಗೂ ನಿರಂತರ ಜ್ಞಾನರ್ಜನೆಯೊಂದಿಗೆ ಮೌಲ್ಯಯುತ ಬದುಕಿಗೆ ಮೊದಲ ಆದ್ಯತೆ ನೀಡಿ ಸದೃಢ ಸಮಾಜ ನಿರ್ಮಾಣ...

More Articles Like This

error: Content is protected !!
Join WhatsApp Group