ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲನ

Must Read

ತಿಮ್ಮಾಪುರ  – ಹುನಗುಂದ ತಾಲೂಕಿನ ಹಿರೇಮಾಗಿ ಸರಕಾರಿ ಕನ್ನಡ ಮಾದರಿಯ ಪ್ರಾಥಮಿಕ ‌ಶಾಲೆ ಯಲ್ಲಿ  ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲನ ಕಾರ್ಯಕ್ರಮವು ಅದ್ದೂರಿಯಾಗಿ, ಸಡಗರ ಸಂಭ್ರಮದಿಂದ ದಿನಾಂಕ 31ರ  ಗುರುವಾರ ಜರುಗಿತು..

ಶಾಲಾ ಮಕ್ಕಳಿಗೆ ಹೂ ನೀಡಿ, ಚಾಕಲೇಟ್ ವಿತರಿಸಿ ಸ್ವಾಗತ ಮಾಡಿಕೊಳ್ಳಲಾಯಿತು. ಮಕ್ಕಳಿಗೆ ಬಲೂನನ್ನ ನೀಡಿ ಚಟುವಟಿಕೆಯ ಮೂಲಕ ಮಕ್ಕಳನ್ನು ಸ್ವಾಗತಿಸಿ, ಕಲಿಕೆಗೆ ಪ್ರೇರಣೆ ನೀಡಲಾಯಿತು.ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲನ ವ್ಯಾಪಕ ಪ್ರಚಾರ ಕುರಿತು ಕರಪತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ SDMC ಅಧ್ಯಕ್ಷರು ಮಕ್ಕಳಿಗೆ ಪುಷ್ಪ ನೀಡಿ ಸ್ವಾಗತಿಸಿ, ಮಾತನಾಡಿ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಿ, ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು..

ಪ್ರಧಾನ ಗುರುಗಳಾದ ಗುರುರಾಜ ರಜಪೂತ ಮಾತನಾಡಿ, ಸರ್ಕಾರದ ಉಚಿತ ಸೌಲಭ್ಯಗಳನ್ನು, ಉಚಿತ ಶಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಸಮುದಾಯದ ಪಾತ್ರ ಬಹಳ ಪ್ರಮುಖವಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ SDMC ಸದಸ್ಯರು, ಗ್ರಾ ಪಂ ಸದಸ್ಯರು, ಊರಿನ ಹಿರಿಯರು, ಶಾಲಾ ಶಿಕ್ಷಕರ ಬಳಗ, ಅಡುಗೆ ಸಿಬ್ಬಂದಿ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಿದರು.

Latest News

ಕವನ : ಎಡಗೈ ಶಕ್ತಿ

ಎಡಗೈ ಶಕ್ತಿ ಬಲಕ್ಕಿಲ್ಲದ ವೇಗ, ಎಡಕ್ಕಿಹುದು ನೋಡಿ ಯುವರಾಜ್ ಸಿಂಗ್ ನ ಬ್ಯಾಟಿಂಗ್ ಶಕ್ತಿಯಲ್ಲಿ ಹರಿಯಿತು ರನ್ ಮಳೆ ಎಡಗೈಯ ಸವಿನಯ ನಗು ಎಲ್ಲರನು ಮೋಡಿಮಾಡಿದಾಗ ಜಗವೆಲ್ಲ ಕೊಂಡಾಡಿತು ಸಾಧನೆಯನುವಿಷ್ಣುವರ್ಧನ್ ಎಡಗೈ...

More Articles Like This

error: Content is protected !!
Join WhatsApp Group