spot_img
spot_img

ಶಾಲಾ ಪ್ರಾರಂಭೋತ್ಸವದ ಪೂರ್ವಸಿದ್ಧತೆಗಳ ಕುರಿತು ಪೂರ್ವಭಾವಿ ಸಭೆ

Must Read

- Advertisement -

ಮೂಡಲಗಿ -ಮೂಡಲಗಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಸನ್:೨೦೨೪-೨೫ ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಪೂರ್ವಸಿದ್ಧತೆಗಳ  ಪ್ರಗತಿ ಪರಿಶೀಲನಾ ಸಭೆಯನ್ನು ದಿ. ೩೦ ರಂದು ಆಯೋಜಿಸಲಾಗಿತ್ತು.

ನವೀನಕುಮಾರ ಕಟ್ಟಿಮನಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕಾ ಪಂಚಾಯತ, ಮೂಡಲಗಿ, ಶಿವಾನಂದ ಬಬಲಿ, ಗ್ರೇಡ್-೨ ತಹಶೀಲ್ದಾರರು ಮೂಡಲಗಿ, ಎ ಸಿ ಮನ್ನಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೂಡಲಗಿ ಹಾಗೂ ಶ್ರೀಮತಿ ಆರ್.ಎಂ.ಆನಿ ಕ್ಷೇತ್ರ ಸಮನ್ವಯಾಧಿಕಾರಿಗಳು ಮೂಡಲಗಿ ಇವರು ಸಭೆಯ ನೇತೃತ್ವವನ್ನು ವಹಿಸಿದ್ದರು.

ಮೂಡಲಗಿ ವಲಯದ ಎಲ್ಲ ಉಸ್ತುವಾರಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

- Advertisement -

ಸಭೆಯಲ್ಲಿ ಚರ್ಚಿಸಲ್ಪಟ್ಟ ಪ್ರಮುಖ ಅಂಶಗಳು

ಈಗಾಗಲೇ ಶಾಲಾ ಹಂತದಲ್ಲಿ ಶಾಲಾ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದ್ದು ದಿ. ೩೧/೦೫/೨೦೨೪ ರಂದು ಶಾಲಾ ಪ್ರಾರಂಭೋತ್ಸವ ಇರುತ್ತದೆ.
ಶಾಲಾ ಪ್ರಾರಂಭೋತ್ಸವಕ್ಕೆ ಶಾಲಾ ಎಸ್.ಡಿ.ಎಂ.ಸಿ ಪದಾಧಿಕಾರಿಗಳನ್ನು /  ಸದಸ್ಯರನ್ನು ಹಾಗೂ ಸ್ಥಳೀಯ ಶಿಕ್ಷಣ ಪ್ರೇಮಿಗಳನ್ನು ಆಹ್ವಾನಿಸುವುದು.
ಶಾಲಾ ಪ್ರಾರಂಭೋತ್ಸವವನ್ನು ಹಬ್ಬದ ವಾತಾವರಣದೊಂದಿಗೆ  ಅತ್ಯಂತ ವಿಜೃಂಭನೆಯಿಂದ ಕೈಗೊಳ್ಳುವುದು.
ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸುವುದು.
ಅಕ್ಷರ ಬಂಡಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗ್ರಾಮದಲ್ಲಿ ಸಂಚರಿಸಿ ಸಮುದಾಯ ಜಾಗೃತಿಯೊಂದಿಗೆ ಮಕ್ಕಳ ದಾಖಲಾತಿ ಆಂದೋಲನ ಪ್ರಕ್ರಿಯೆಗೆ ಚಾಲನೆ ನೀಡುವುದು.
ಅಕ್ಷರ ಬಂಡಿಗೆ ಶೈಕ್ಷಣಿಕ ಮಹತ್ವವುಳ್ಳ ಭಿತ್ತಿಪತ್ರಗಳನ್ನು ಅಂಟಿಸುವುದು.
ಘೋಷವಾಕ್ಯಗಳನ್ನು ಹೇಳಿಸುವುದು.
ಹೊಸದಾಗಿ ದಾಖಲಾಗುವ ಮಕ್ಕಳನ್ನು ಅಕ್ಷರ ಬಂಡಿಯಲ್ಲಿ ಕರೆದುಕೊಂಡು ಬರುವುದು.
ಅಕ್ಷರ ದಾಸೋಹ ಕಾರ್ಯಕ್ರಮವನ್ನು ಪ್ರಾರಂಭಿಸುವುದು ಹಾಗೂ ಮಕ್ಕಳಿಗೆ ಸಿಹಿಯೂಟ ಮಾಡಿಸುವುದು.
ಈಗಾಗಲೇ ಶಾಲೆಗಳಿಗೆ ಪೂರೈಸಲಾಗಿರುವ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ವಿತರಣೆ ಮಾಡುವುದು.
ಸೇತುಬಂಧ ಕಾರ್ಯಕ್ರಮದ ಪೂರ್ವಸಿದ್ಧತೆ ಮಾಡಿಕೊಳ್ಳುವುದು.
ಒಟ್ಟಾರೆಯಾಗಿ ಸನ್:೨೦೨೪-೨೫ ನೇ ಶೈಕ್ಷಣಿಕ ವರ್ಷವನ್ನು ಉತ್ತಮ ಸಿದ್ಧತೆಗಳೊಂದಿಗೆ  ಶುಭಾರಂಭ ಮಾಡುವುದು ಎಂದು ನಿರ್ಧರಿಸಲಾಯಿತು.

ಇದೇ ಸಂದರ್ಭದಲ್ಲಿ ಈ ವರ್ಷದ  ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆದಿರುವ ೨೩೭ ವಿದ್ಯಾರ್ಥಿಗಳಿಗೆ ಹಾಗೂ ಅವರ ಸಾಧನೆಗೆ ಕಾರಣರಾದ ಶಾಲಾ ಗುರುಗಳಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು ಎಂದು ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisement -
- Advertisement -

Latest News

ಅಣಕವಾಡು : ಮದನಾರಿ ಸತಿ ರೇಣುಕೆ

ಮದನಾರಿ ಸತಿ ರೇಣುಕ ಮದ‌ವೇರಿದ ತುಂಬಿದ ತನು ತಂದಳು ಸತಿ ರೇಣುಕೆ ಮನೆಮುಂದಿನ ಅಂಗಳದಲಿ ಕಸಬಳಿದಳು‌ ಬಳಲಿಕೆ ಏದುಸಿರನು‌ ಬಿಡುಬಿಡುತಲಿ ನೀರನು ಚಳೆಹೊಡೆದಳು ಆಯಾಸದಿ ಬಾಗುತ್ತಲಿ ರಂಗೋಲಿಯ ಬರೆದಳು ಮಹಾಮನೆಯ ಮಹಾದೇವಿ ಮಹಾಕಾಯ ಹೊತ್ತಳು ಬೇಸರದಲಿ ಬುಸುಗುಡುತಲಿ ನಿಟ್ಟುಸಿರನು‌ ಬಿಟ್ಟಳು ಹಾದಾಡುವ ಹೊಸತಿಲಲ್ಲಿ ಬಂದಳು ಹೊಯ್ದಾಡುತ ಮನೆಬಾಗಿಲ...
- Advertisement -

More Articles Like This

- Advertisement -
close
error: Content is protected !!
Join WhatsApp Group