ಮೂಡಲಗಿ- ಮೂಡಲಗಿ ಶೈಕ್ಷಣಿಕ ವಲಯದಲ್ಲಿ ೨೦೨೩-೨೪ ನೇ ಸಾಲಿಗೆ ವಿವೇಕ ಯೋಜನೆ ಅಡಿಯಲ್ಲಿ ೩೧ ಶಾಲಾ ಕೊಠಡಿಗಳು ಮಂಜೂರಾಗಿದ್ದು ೨೯ ಕಟ್ಟಡಗಳು ಫೂರ್ತಿಯಾಗಿವೆ ಹಾಗೂ ೨ ಕಟ್ಟಡ ಕಾಮಗಾರಿ ನಡೆದಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ವಿಧಾನಸಭೆಯಲ್ಲಿ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಅತ್ಯಂತ ಹೆಚ್ಚು ಮಕ್ಕಳು ಅಭ್ಯಾಸ ಮಾಡುತ್ತಿದ್ದು ಶಾಲಾ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಒದಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸನ್ ೨೦೨೧-೨೨ ನೇ ಸಾಲಿಗೆ ೨೦ ಕೊಠಡಿಗಳು ಆರ್ ಎಸ್ ಎಮ್ ಎ ಯೋಜನೆಯಡಿ ಮಂಜೂರಾಗಿದ್ದು ರೂ. ೨೫೫.೧೪ ಲಕ್ಷ ಅನುದಾನ ನೀಡಲಾಗಿದೆ. ಸನ್ ೨೦೨೨-೨೩ ಹಾಗೂ ೨೦೨೩-೨೪ ರಲ್ಲಿ ವಿವೇಕ ಯೋಜನೆಯಡಿ ೩೧ ಕೊಠಡಿಗಳಿಗೆ ಮಂಜೂರಾತಿ ನೀಡಿದ್ದು ರೂ. ೩೩೬.೯೪ ಲಕ್ಷ ಮತ್ತು ರೂ. ೯೩.೯೬ ಲಕ್ಷ ಅನುದಾನ ನೀಡಲಾಗಿದೆ. ೨೯ ಕಟ್ಟಡಗಳ ಕಾಮಗಾರಿ ಮುಗಿದಿದ್ದು ಇನ್ನೂ ಎರಡು ಕಟ್ಟಡಗಳ ಕಾಮಗಾರ ಚಾಲ್ತಿಯಲ್ಲಿದೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ ಎಂಬುದಾಗಿ ಶಾಸಕರು ಮಾಹಿತಿ ಹಂಚಿಕೊಂಡಿದ್ದಾರೆ