spot_img
spot_img

ಅಡುಗೆ ಮನೆಯಲ್ಲಿ ವಿಜ್ಞಾನ ಚಟುವಟಿಕೆ

Must Read

spot_img
- Advertisement -

ಮುನವಳ್ಳಿ: ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಮಳೆಬಿಲ್ಲು’ ಕಾರ್ಯಕ್ರಮವು ಮಕ್ಕಳಲ್ಲಿರುವ ಸೃಜನಾತ್ಮಕತೆಯನ್ನು ಗುರುತಿಸುವ ಪ್ರಯತ್ನವಾಗಿದೆ. ಆಟದ ಮೂಲಕ ಮಕ್ಕಳಿಗೆ ಪಾಠವನ್ನು ತಿಳಿಸುವ ಈ ಕಾರ್ಯಕ್ರಮವು ತುಂಬಾ ಉಪಯುಕ್ತವಾಗಿದೆ. ಈ ಸಂದರ್ಭದಲ್ಲಿ ‘ಅಡುಗೆ ಮನೆಯಲ್ಲಿ ವಿಜ್ಞಾನ’ ಎನ್ನುವ ಚಟುವಟಿಕೆಯನ್ನು ಮಕ್ಕಳಿಂದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಕನ್ನಡ ಶಾಲೆ. ಮುನವಳ್ಳಿ ಯಲ್ಲಿ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಮಕ್ಕಳು ತಂದ ಆಹಾರ ಪದಾರ್ಥಗಳನ್ನು ಕಾರ್ಬೋಹೈಡ್ರೇಟ್, ಖನಿಜಗಳು, ಕೊಬ್ಬಿನಂಶ, ವಿಟಮಿನ್, ಮತ್ತು ಪ್ರೊಟೀನ್ ಎನ್ನುವ ವಿಧಗಳಾಗಿ ವಿಂಗಡಿಸಿ ವಿವಿಧ ತರಕಾರಿಗಳಿಂದ ದೊರೆಯುವ ವಿಟಮಿನಗಳು ಮನುಷ್ಯನ ದೇಹಕ್ಕೆ ಹೇಗೆ ಉಪಯುಕ್ತವಾಗಿದೆ ಎನ್ನುವುದನ್ನು ಚಟುವಟಿಕೆಯ ಮೂಲಕ ತಿಳಿಸಿದರು.

- Advertisement -

ಈ ಸಂದರ್ಭದಲ್ಲಿ ಬಿ. ಐ. ಇ. ಆರ್. ಟಿಯವರಾದ ವೈ. ಬಿ. ಕಡಕೋಳ ಮುಖ್ಯೋಪಾಧ್ಯಾಯ ರಾದ ಪ್ರಕಾಶ ಶೀಲವಂತ, ಶಿಕ್ಷಕರಾದ ಬಿ.ಎಚ್.ಖುಂದುನಾಯ್ಕ, ಗುರುಮಾತೆಯವರಾದ, ಪಿ.ಎಸ್.ಕಮತಗಿ, ಕೆ.ವ್ಹಿ.ತಟವಟಿ, ಎಸ್.ಸಿ.ಹೊನ್ನಳ್ಳಿ, ಯು.ಎಸ್‌. ಏಣಗಿಮಠ, ವಾಯ್.ಟಿ.ತಂಗೋಜಿ, ಬಿ.ಆರ್.ಹೋಟಿ, ಶಿಕ್ಷಕರಾದ ಡಾ. ಎನ್.ಆರ್.ಚಲವಾದಿ, ಕು.ಎನ್.ಎನ್.ಕುರಿ, ಎನ್.ಆರ್.ಕಕಮರಿ ಅತಿಥಿ ಶಿಕ್ಷಕಿಯರಾದ ಶ್ರೀಮತಿ. ಎಮ್.ಆರ್.ಗುಡೆಣ್ಣವರ, ಕು.ಎ.ಎ.ತೆಗ್ಗಿನಮನಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group