Homeಸುದ್ದಿಗಳುಸುಪ್ರೀಂ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ

ಸುಪ್ರೀಂ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ

ಮೈಸೂರು – ಮೈಸೂರು ನಗರದ ಕನಕದಾಸನಗರದಲ್ಲಿರುವ ಸುಪ್ರೀಂ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನ ಮತ್ತು ಸಂಕ್ರಾಂತಿ ಹಬ್ಬದ ಕಾರ್ಯಕ್ರಮವನ್ನು ಜ.13 ರಂದು ಹಮ್ಮಿಕೊಳ್ಳಲಾಗಿತ್ತು.       ವಸ್ತುಪ್ರದರ್ಶನದ ಉದ್ಘಾಟನೆಯನ್ನು ಕಾರ್ಮಿಕ ಕಲ್ಯಾಣ ಇಲಾಖೆಯ ಆಯುಕ್ತರಾದ ಡಾ.ಎಸ್.ಪಿ.ರವಿಕುಮಾರ್‍ರವರು ರಾಕೇಟ್ ಉಡಾವಣೆ ಹಾಗೂ ಡ್ರೋಣ್ ಹಾರಿಸುವುದರ ಮೂಲಕ ವಿಜ್ಞಾನ ವಸ್ತುಪ್ರದರ್ಶನವನ್ನು ಉದ್ಘಾಟಿಸಿದರು ಹಾಗೂ ದೀಪ ಬೆಳಗಿಸುವುದರ ಮೂಲಕ ಮಕರ ಸಂಕ್ರಾಂತಿ ಹಬ್ಬದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅವರು ತಮ್ಮ ಭಾಷಣದಲ್ಲಿ ದೇಶದ ಅಭಿವೃದ್ಧಿಗೆ ವಿಜ್ಞಾನದ ಪ್ರಗತಿ ಅತೀ ಮುಖ್ಯ. ಆ ಕಾರಣದಿಂದಲೇ ನಮ್ಮ ಪ್ರಧಾನಿಯವರು ‘ಜೈ ಜವಾನ್ ಜೈ ಕಿಸಾನ್’ ಎಂಬುವುದರ ಜೊತೆಗೆ ‘ಜೈ ವಿಜ್ಞಾನ್’ ಎಂಬ ಘೋಷಣೆಯನ್ನು ಮಾಡಿದ್ದಾರೆ ಎಂದು ತಿಳಿಸಿ, ಮಕ್ಕಳ ಚಟುವಟಿಕೆಯನ್ನು ಪ್ರಶಂಶಿಸಿದರು. 

ಕಾರ್ಯಕ್ರಮದಲ್ಲಿ ಗಣ್ಯರಾದ ಹೆಚ್.ಪಿ.ಗಗನ್‍ಶೆಟ್ಟಿ, ಹೆಚ್.ಪಿ.ದರ್ಶನ್ ಶೆಟ್ಟಿ, ಸುಪ್ರೀಂ ಪಬ್ಲಿಕ್ ಶಾಲೆಯ ಸ್ಥಾಪಕ ಮತ್ತು ಅಧ್ಯಕ್ಷ ಡಾ.ರವೀಂದ್ರಸ್ವಾಮಿ, ಶಾಲೆಯ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

RELATED ARTICLES

Most Popular

error: Content is protected !!
Join WhatsApp Group