ಮೈಸೂರು -ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ವಿಜ್ಞಾನ ವಸ್ತುಪ್ರದರ್ಶನವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಜ್ಞಾನಿ ಡಾ.ದಯಾನಂದ ಅವರು ಮಾತನಾಡಿ, ಮಕ್ಕಳಿಗೆ ವೈಜ್ಞಾನಿಕ ಮನೋಭಾವನೆ ಮತ್ತು ಪರಿಕಲ್ಪನೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಬಗ್ಗೆ ಸವಿವರವಾಗಿ ತಿಳಿಸಿ, ಮಕ್ಕಳ ದಿನಾಚರಣೆಯ ವಿಶೇಷತೆಯನ್ನು ವಿವರಿಸಿ, ಮಕ್ಕಳಿಗೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಉತ್ತಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ವೇದಿಕೆಯಲ್ಲಿ ನಂಜುಂಡೇಶ್ವರ ವಿದ್ಯಾಸಂಸ್ಥೆಯ ಶಿಕ್ಷಕ ಡಿ.ಮೋತಿಲಾಲ್ ಯುವರಾಜ, ಎಟಿಎಂಇ ಕಾಲೇಜ್ ಆಫ್ ಇಂಜಿನಿಯರಿಂಗ್‌ನ ಪ್ರೊ.ಆರ್.ರಾಘವೇಂದ್ರ, ಶಾಲಾ ಅಧ್ಯಕ್ಷ ಟಿ.ರಂಗಪ್ಪ, ಆಡಳಿತಾಧಿಕಾರಿ ಶ್ರೀಮತಿ ಕಾಂತಿ ನಾಯಕ, ಗಂಗೋತ್ರಿ ಎಜುಕೇಷನ್ ಟ್ರಸ್ಟ್ನ ನಿರ್ದೇಶಕ ದರ್ಶನ, ಪ್ರಾಂಶುಪಾಲ ಎಂ.ಸುನಿಲ್‌ಕುಮಾರ, ಮುಖ್ಯೋಪಾಧ್ಯಾಯ ಮೊಹಮ್ಮದ್ ಫಾರೂಕ್, ಶಿಕ್ಷಕ-ಶಿಕ್ಷಕೇತರ ವೃಂದದವರು ಭಾಗವಹಿಸಿದ್ದರು.

