ಹುನಗುಂದ: ತಾಲೂಕಿನ ತಿಮ್ಮಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬರುವ 2025 ರಿಂದ 28 ವರಗಿನ ಮೂರು ವರ್ಷದ ಅವಧಿಗೆ ಮೂರು ವರ್ಷದ ಅವಧಿಗೆ ಎಸ್ ಡಿ ಎಂ ಸಿ ರಚನಾ ಸಭೆಯು ಹುನಗುಂದ ತಾಲೂಕಿನ ಬಿೇಜವಾಡಗಿ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ಅಧಿಕಾರಿ, ಲಕ್ಷ್ಮಣ್ ಲಮಾಣಿ ಯವರ ಉಪಸ್ಥಿತಿಯಲ್ಲಿ ಹಾಗೂ ಅಮರಾವತಿ ಗ್ರಾಮ ಪಂಚಾಯತಿಯ ಅಧಿಕಾರಿಗಳಾದ ಶ್ರೀಮತಿ ಶಿಲ್ಪ ರ್ಯಾಕಿ ಸಮ್ಮುಖದಲ್ಲಿ ಜರುಗಿತು
ನೂತನ ಅಧ್ಯಕ್ಷರಾಗಿ ಯಮನಪ್ಪ ಜಂಬಣ್ಣ ಬಡಿಗೇರ ಉಪಾಧ್ಯಕ್ಷರಾಗಿ ಶ್ರೀಮತಿ ಸವಿತಾ ಹೆರೂರ ಆಯ್ಕೆಯಾಗಿದ್ದಾರೆಂದು ಶಾಲೆಯ ಮುಖ್ಯ ಗುರು ಶ್ರೀಮತಿ ಕೆಎಚ್ ಬೆಲ್ಲದ ತಿಳಿಸಿದ್ದಾರೆ ಉಳಿದ ಸದಸ್ಯರ ವಿವರ ಈ ಕೆಳಗಿನಂತಿದೆ
ಸದಸ್ಯರಾಗಿ ಆಯ್ಕೆಯಾದವರು ಸೈನಾಜ್ ಬೇಗಂ ಭಾಷಾ ಸಾಬ ದರ್ಜಿ ಮಹಾಂತೇಶ ಪೂಜಾರ ಶ್ರೀಮತಿ ರೇಣುಕಾ ಜಡಿಯಪ್ಪ ಹೂರಕರ ರಮೇಶ ಹನುಮಂತ ಚಲವಾದಿ ಶಿವಲಿಂಗಪ್ಪ ಧರ್ಮಣ್ಣ ಮಾದರ ಶ್ರೀಮತಿ ಸವಿತಾ ಬಸವರಾಜ ಮಾದರ ಶ್ರೀಮತಿ ನೀಲವ್ವ ಪಕೀರಪ್ಪ ಮಾದರ ಶ್ರೀಮತಿ ಪೂಜಾ ಸುರೇಶ ಪಾತ್ರೋಟಿ ಶ್ರೀಮತಿ ದುರ್ಗವ್ವ ವಿಭೀಷಣ ವಡ್ಡರ ಶ್ರೀಮತಿ ದೇವವ್ವ ಯಮನಪ್ಪ ಪೂಜಾರ ಶ್ರೀಮತಿ ಸರಸ್ವತಿ ಹುಲುಗವ್ವ ಕಡೆಮನಿ ಶ್ರೀಮತಿ ಮಹಾದೇವಿ ಪವಾಡಪ್ಪ ಮಾದರ,ಆಯ್ಕೆಯಾಗಿದ್ದಾರೆ
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಯಮನಪ್ಪ ಪತ್ರಿಕೆಯೊಂದಿಗೆ ಮಾತನಾಡಿ ನಾನು ಕಲಿತ ಶಾಲೆಯಲ್ಲಿ ನನ್ನ ಮಕ್ಕಳು ಸಹ ಕಲಿಯುತ್ತಿದ್ದು ಈಗ ನನ್ನನ್ನು ಶಾಲಾ ಸುಧಾರಣಾ ಸಮಿತಿಯ( ಎಸ್‌ಡಿಎಂಸಿ) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ತಿಮ್ಮಾಪುರ ಎಲ್ಲ ಗ್ರಾಮಸ್ಥರಿಗೆ ಅಭಿನಂದನೆಗಳು ಎಂದರಲ್ಲದೆ ಮೂರು ವರ್ಷದ ಅವಧಿಯಲ್ಲಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಎಂದು ತಿಳಿಸಿದರು.
ಎಸ್ ಡಿ ಎಮ್ ಸಿ ರಚನಾ ಸಭೆಯಲ್ಲಿ ಮುಖ್ಯ ಗುರುಗಳು ಕೆ ಎಚ್ ಬೆಲ್ಲದ ಶಿಕ್ಷಕರಾದ ಎಂಬಿ ಮನಿಯರ್ ಶಾರದಾ ಹುಲಗೇರಿ ಬಿಸಿ ಊಟದ ಸಿಬ್ಬಂದಿಗಳಾದ ಗೀತಾ ಬೇರಗಿ ಸಂಗವ್ವ ಚಿತ್ತರಗಿ, ನಿರ್ಮಲ ಜ ಹದ್ದಿ ಅಂಗನವಾಡಿ ಕಾರ್ಯಕರ್ತೆ ನಿರ್ಮಲ ಬೆಳ್ಳಿ ಹಾಳ, ಭಾಗವಹಿಸಿದ್ದರು ಶಿಕ್ಷಕ ಮಂಜುನಾಥ ಟಕ್ಕಳಿಕಿ ಸ್ವಾಗತಿಸಿ ನಿರೂಪಿಸಿದರು ಶಿಕ್ಷಕ ಬಸವರಾಜ ಎಸ್ ತೋಟಗೇರ ವಂದಿಸಿದರು

