- Advertisement -
ಅಥಣಿಯ ಶ್ರೀ ಕೃಷ್ಣರಾವ ಅಣ್ಣಾರಾವ ಲೋಕಾಪೂರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಏಕವಲಯ ಪುರುಷರ ಹಾಗೂ ಮಹಿಳೆಯರ ಚೆಸ್ ಪಂದ್ಯಾವಳಿಯಲ್ಲಿ ಮೂಡಲಗಿಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಪುರುಷ ಹಾಗೂ ಮಹಿಳೆ ಎರಡು ವಿಭಾಗಗಳಲ್ಲಿ ದ್ವಿತೀಯ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ಕ್ರೀಡಾಳುಗಳಾದ ಮಾಲಾಶ್ರೀ ಮುಗಳಖೋಡ, ತುಳಸವ್ವಾ ಹೊಸಟ್ಟಿ, ಭಾರತಿ ಬೋಳನ್ನವರ, ಆರತಿ ಬೋಳನ್ನವರ, ಸುರೇಶ ಕೌಜಲಗಿ, ಶಂಕರ ತೈಕರ, ಆಕಾಶ ಅಂಗಡಿ, ತುಕಾರಂ ಹನಮಣ್ಣವರ, ಸಚಿನ ಜೋಕಾನಟ್ಟಿ ಅವರಿಗೆ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ, ಸರ್ವ ಸದಸ್ಯರು, ಪ್ರಾಂಶುಪಾಲರಾದ ಮಹೇಶ ಕಂಬಾರ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.