ಸಿಂದಗಿ- ಇತ್ತೀಚೆಗೆ ಸಿಂದಗಿ ಪಟ್ಟಣದ ಎಚ್. ಜಿ. ಕಲಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ 2024-25 ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಸಿಂದಗಿ ಎಚ್. ಜಿ.ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿದ್ದಮ್ಮ ಅಗ್ನಿ ಏಕಾಭಿನಯ ಪಾತ್ರದಲ್ಲಿ ಪ್ರಥಮ ಸ್ಥಾನ, ಪ್ರಥಮ ಪಿಯುಸಿ ವಿದ್ಯಾರ್ಥಿನಿ ಭಾಗ್ಯಶ್ರೀ ಬಾಗೇವಾಡಿ ಏಕಾಭಿನಯ ಪಾತ್ರದಲ್ಲಿ ದ್ವಿತೀಯ ಸ್ಥಾನ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಲಕ್ಷ್ಮೀ ಸಾಲೋಡಗಿ ಆಂಗ್ಲ ಮಾಧ್ಯಮ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕರಾದ ಅಶೋಕ್ ಮನಗೂಳಿ ಹಾಗೂ ಸಂಸ್ಥೆಯ ನಿರ್ದೇಶಕ ಮಂಡಳಿಯವರು ಮತ್ತು ಮಹಾವಿದ್ಯಾಲಯದ ಪ್ರಾಚಾರ್ಯ ಎ. ಆರ್. ಹೆಗ್ಗನದೊಡ್ಡಿ, ನಿರ್ದೇಶಕರಾದ ಬಿ.ಜಿ ನೆಲ್ಲಗಿ, ಉಪನ್ಯಾಸಕರಾದ ಬಿ.ಎಸ್. ಬಿರಾದಾರ್, ಆರ್.ಬಿ. ಹೊಸಮನಿ, ಎಂ.ಎನ್. ಅಜ್ಜಪ್ಪ, ಎಫ್.ಎ. ಹಾಲಪ್ಪನವರ್, ಸಿದ್ದಲಿಂಗ ಕಿಣಗಿ, ಮುಕ್ತಾಯಕ್ಕ ಕತ್ತಿ, ಜ್ಯೋತಿರ್ಲೇಖ ಚೆನ್ನೂರ್, ಎ.ಬಿ. ಪಾಟೀಲ್, ಡಾ. ಎಸ್.ಎಸ್. ಚವಾಣ್, ಗಂಗಾರಾಮ್ ಪವಾರ್ ಸೇರಿದಂತೆ ಬೋಧಕ ಬೋಧಕರ ಸಿಬ್ಬಂದಿಯವರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.