ವಿಭಾಗ ಮಟ್ಟದ ಕಬಡ್ಡಿ ಕ್ರೀಡೆಗೆ ಆಯ್ಕೆ: ಕ್ರೀಡಾಪಟುಗಳಿಗೆ ಸತ್ಕಾರ

Must Read

ಮೂಡಲಗಿ – ಗುಜನಟ್ಟಿ ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಬೆಳಗಾವಿ ವಿಭಾಗ ಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗ್ರಾಮಸ್ಥರಿಂದ ಶಾಲೆಯಲ್ಲಿ ಸನ್ಮಾನ ಸಮಾರಂಭ ಜರುಗಿತು.

ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಕ್ರೀಡಾಪಟುಗಳನ್ನು ಸತ್ಕರಿಸಿ ಮಾತನಾಡಿ, ವಿಭಾಗದ ಮಟ್ಟದ ಕಬಡ್ಡಿ ಪಂದ್ಯಾವಳಿಯ ವಿಜಯಶಾಲಿಗಳಾಗಿ ಶಾಲೆಯ ಮತ್ತು ಮೂಡಲಗಿ ತಾಲೂಕಿನ ಕೀರ್ತಿ ಹೆಚ್ಚಿಸಬೇಕೆಂದರು.

ಸಮಾರಂಭದಲ್ಲಿ ಶಾಸಕರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ತಾ.ಪಂ ಮಾಜಿ ಸದಸ್ಯ ಸಾಬಪ್ಪ ಬಂಡ್ರೋಳಿ, ರಾಮಪ್ಪ ಅರಭಾವಿ, ಸಿದ್ಲಿಂಗಪ್ಪ ಕಂಬಳಿ, ಸಿದ್ಧಾರೂಢ ಮುಕ್ಕನವರ, ಶಿವಬಸು ಶೆಟ್ಟರ, ಶಾಲೆಯ ಮುಖ್ಯ ಶಿಕ್ಷಕ ವಾಯ್.ಆರ್.ಮುಕ್ಕನವರ, ಶಿಕ್ಷಕರಾದ ಮಹಾಲಿಂಗಪ್ಪ ಕೊಣ್ಣೂರ, ಸಿದ್ದಪ್ಪ ಮದಿಹಳ್ಳಿ, ಮಹೇಶ ಮರ್ದಿ, ಮಹಮ್ಮದ ಪೆಂಡಾರಿ, ಮಾಯವ್ವ ಮರೆನ್ನವರ ಮತ್ತು ಗ್ರಾಮದ ಯುವಕರು, ಮುಖಂಡರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group