ಸಿಂದಗಿ: ಮೈಸೂರಿನಲ್ಲಿ ನಡೆದ “ಇಂಡಿಯನ್ ಕೌನ್ಸಿಲ್ ಫಾರ್ ಸ್ಪೋರ್ಟ್ಸ್ ಆಂಡ್ ಎಜ್ಯುಕೇಶನ್”(IESಇE) ವತಿಯಿಂದ ನ್ಯಾಷನಲ್ ಕರಾಟೆ ಚಾಂಪಿಯನಶಿಪ್ ನಲ್ಲಿ ಪಟ್ಟಣದ ಹೊರವಲಯದ ಮಾತಾ ಲಕ್ಷ್ಮೀ ಪಬ್ಲಿಕ್ ಶಾಲೆ ಸಿಂದಗಿಯ 9ನೇ ತರಗತಿ ವಿದ್ಯಾರ್ಥಿ ಅಧೀಶ.ಆರ್.ಹೊಸಮನಿ ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾನೆ.
ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಸನ್ನ ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್.ಹೆಚ್.ಬಿರಾದಾರ, ಕ್ಷೇತ್ರ ಸಮನ್ವಯಧಿಕಾರಿ ಆಯ್ ಎಸ್ ಟಕ್ಕೆ ಅಧೀಶನನ್ನು ಅಭಿನಂದಿಸಿದ್ದಾರೆ.