ಫೆಬ್ರುವರಿ 2ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 17 ವರ್ಷ ವಯೋಮಾನದ ಕೆಳಗಿನ ಮಕ್ಕಳಿಗಾಗಿ ನಡೆದ ರಾಜ್ಯಮಟ್ಟದ ಭಾರ ಎತ್ತುವ ಕ್ರೀಡಾಸ್ಪರ್ಧೆಯಲ್ಲಿ ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಬೆಳಗಾವಿ ಗ್ರಾಮೀಣ ವಲಯದ ಒಟ್ಟು ಎಂಟು ವಿದ್ಯಾರ್ಥಿಗಳು ಇದೇ ತಿಂಗಳು ಫೆಬ್ರುವರಿ 12 ರಿಂದ 16ರವರೆಗೆ ಬಿಹಾರ ರಾಜ್ಯದ ಪಾಟ್ನಾದಲ್ಲಿ ನಡೆಯಲಿರುವ 67ನೇ ರಾಷ್ಟ್ರಮಟ್ಟದ ಭಾರ ಎತ್ತುವ ಕ್ರೀಡಾಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಬಾಲಕಿಯರಲ್ಲಿ ಸೃಷ್ಟಿ ಮುತಗೇಕರ, ಶ್ರಾವಣಿ ಮತಕರ, ಸಮೀಕ್ಷಾ ಮನಮೋಡೆ, ಸಾನ್ವಿ ಯಲಜಿ ಮತ್ತು ಬಾಲಕರ ವಿಭಾಗದಲ್ಲಿ ಆದರ್ಶ ಗಾಯಗೊಂಡೆ, ನಾಗೇಶ ಅನಗೋಳಕರ, ರೋನಿತ ಮುರಕೂಟೆ, ಜ್ಞಾನೇಶ್ವರ ಬೆಕ್ಕಿನಕೇರಿ ರಾಷ್ಟ್ರಮಟ್ಟದ ಕ್ರೀಡಾ ಸ್ಪರ್ಧೆಗೆ ಆಯ್ಕೆಯಾಗುವದರ ಜೊತೆಗೆ ಸಮಗ್ರ ಚಾಂಪಿಯನ್ ಶಿಪ್ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳು ಬೆಳಗಾವಿ ಗ್ರಾಮೀಣ ವಲಯದ ಕಡೋಲಿ ಗ್ರಾಮದ ಸರಕಾರಿ ಮಾದರಿ ಮರಾಠಿ ಪ್ರಾಥಮಿಕ ಶಾಲೆ ಮತ್ತು ಶಿವಾಜಿ ವಿದ್ಯಾಲಯ ಕಡೋಲಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ಇವರಿಗೆ ದೈಹಿಕ ಶಿಕ್ಷಕರು ಮತ್ತು ಕ್ರೀಡಾಕೂಟದ ವ್ಯವಸ್ಥಾಪಕರು ಆಗಿರುವ ರಮೇಶ್ ಅಲಗುಡೆಕರ ಮತ್ತು ದೈಹಿಕ ಶಿಕ್ಷಕ ಎನ್. ಆರ್.ಪಾಟೀಲರವರು ಮಾರ್ಗದರ್ಶನ ನೀಡಿದ್ದಾರೆ. ಜಿಲ್ಲಾ ತರಬೇತಿ ಸಂಸ್ಥೆಯ ಸದಾನಂದ ಮಾಲಶೆಟ್ಟಿ, ಬೆಳಗಾವಿ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ದಾಸಪ್ಪನವರ, ಶಿಕ್ಷಣ ಸಂಯೋಜಕ ಸುನೀಲ ಕುಟ್ರೆ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸುರೇಖಾ ಮಿರ್ಜಿ, ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಸಾಧನಾ ಬದ್ರಿ, ಶಿವಾಜಿ ವಿದ್ಯಾಲಯ ಶಾಲೆಯ ವರ್ಷಾ ಪಾಟೀಲ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಈ ಕ್ರೀಡಾಪಟುಗಳಿಗೆ ಅಭಿನಂದಿಸಿ ಸತ್ಕರಿಸಿದರು.