ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

Must Read

ಸಿಂದಗಿ: ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಪಟ್ಟಣದ ಪ.ವಿ.ವ.ಸಂಸ್ಥೆಯ ಆರ್.ಡಿ.ಪಾಟೀಲ ಪದವಿ ಪೂರ್ವ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

ಗುಡ್ಡಗಾಡು ಓಟದಲ್ಲಿ ಮಲ್ಲಿಕಾರ್ಜುನ ಕಲ್ಲೂರ, ಈರಣ್ಣ ಚವಟೆ ಫ್ರೀ ಸ್ಟೈಲ್ ಕುಸ್ತಿ 97 ಕೆ.ಜಿ,  ವಿಭಾಗದಲ್ಲಿ ಪ್ರಥಮ ಸ್ಥಾನ, ಉದ್ದ ಜಿಗಿತದಲ್ಲಿ ಸಾಕಲಿನ್ ಸೀತನೂರ ತೃತೀಯ ಸ್ಥಾನ, ವ್ಹಾಲಿಬಾಲ್ ವಿಭಾಗದಲ್ಲಿ ಮಹಿಳೆಯರು ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಇವರ ಸಾಧನೆಗೆ ಸಂಸ್ಥೆಯ ಚೇರಮನ್ನರಾದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ಜಿರ್ಲಿ, ವ್ಹಿ.ಡಿ.ಪಾಟೀಲ, ದೈಹಿಕ ಉಪನ್ಯಾಸಕ ಗವಿಸಿದ್ದಪ್ಪ ಆನೆಗುಂದಿ, ಎಸ್.ಎಚ್.ಜಾಧವ, ಪಿ.ಎಸ್.ಸರನಾಡಗೌಡ, ಪಿ.ವ್ಹಿ.ಮಹಲಿನಮಠ, ಬಿ.ಬಿ.ಜಮಾದಾರ, ಬಿ.ಎಂ.ಸಿಂಗನಳ್ಳಿ, ಶಿವಶರಣ ಬೂದಿಹಾಳ, ವ್ಹಿ.ಕೆ.ಹಿರೇಮಠ,  ಎಸ್.ಜಿ.ಮಾರ್ಸನಳ್ಳಿ, ಎಂ.ಐ.ಮುಜಾವರ್, ರಾಜಶ್ರೀ ಗಾಣಗೇರ್, ಸಂಗಮೇಶ ಚಾವರ್, ಎನ್.ಎಂ.ಶೆಳ್ಳಗಿ, ಆರ್.ಎಂ.ಕೊಳ್ಳೂರೆ, ಐ.ಎಸ್.ಶಿವಶಿವಸಿಂಪಿಗೇರ್, ದೀಪಾ ಕೋಟೆ, ವಿಜಯಲಕ್ಷ್ಮೀ ಕನ್ನೊಳ್ಳಿ, ಅಡಿವೆಪ್ಪಾ ದಸ್ಮಾ, ಚಂದ್ರು ಬಬಲೇಶ್ವರ ಸಿಬ್ಬಂದಿ ವರ್ಗ ಸೇರಿದಂತೆ ಕ್ರೀಡಾಪಟುಗಳಿಗೆ ಅಭಿನಂದಿಸಿದ್ದಾರೆ.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group