ಬೆಳಗಾವಿ: ಸಕಾ೯ರಿ ಸೇವೆಯಲ್ಲಿ ಇದ್ದವರಿಗೆ ನಿವೃತ್ತಿ ಅನಿವಾಯ೯ ಆದರೆ ನಿಸ್ವಾರ್ಥ ಸೇವೆಯಿಂದ ಮಾತ್ರ ಜೀವನವನ್ನು ಮಾಡಿಕೊಳ್ಳಬಹುದಾಗಿದೆ.ಎಂದು ಕ ರಾ ಪ್ರಾ ಶಾ ಶಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಎಸ್ ಜಿ ಗಂಗಣ್ಣವರ ಹೇಳಿದರು.
ಲಿಂಗಾಯತ ನೌಕರರ ಸಂಘ ಬೆಳಗಾವಿ ನಗರ ಇವರು ಡಿ ಎಸ್ ಪೂಜಾರ ಎಂ ವೈ ಮೆಣಸಿನಕಾಯಿ ಅವರು ನಿವೃತ್ತರಾದ ಮೂಲಕ ಸನ್ಕಾನಿಸಿ ಮಾತನಾಡಿದರು
41 ವಷ೯ಸೇವೆ ಸಲ್ಲಿಸುವುದು ಅವರ ಭಾಗ್ಯ ನೂತನವಾಗಿ ಬಿ ಇ ಓ ಕಚೇರಿಗೆ ಬೆಳಗಾವಿ ನಗರ ಮ್ಯಾನೇಜರ್ ಆಗಿಮಿಸಿದ ಆರ್ ಡಿ ಗಣಾಚಾರಿ ಮತ್ತು ಸರಕಾರಿ ನೌಕರರ ನಾಮ ನಿದೇ೯ಶಿತ ಸಹಕಾಯ೯ದಶಿ೯ ಆಶಿಪ್ ಅತ್ತಾರ ಮತ್ತು ಎಂ ಬಿ ಮರಲಕ್ಕನ್ನವರ ಅವರನ್ನು ಸತ್ಕರಿಸಲಾಯಿತು.
ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಭವನ ಚೆನ್ನಮ್ಮ ವೃತ್ತದಲ್ಲಿ ದಿ.31 ರಂದು ಏಪ೯ಡಿಸಲಾಗಿತ್ತು mಅಧ್ಯಕ್ಷತೆ ಯನ್ನು ಮೃತ್ಯುಂಜಯ ಸ್ವಾಮಿಗಳು ಹಿರೇಮಠ ವಹಿಸಿದ್ದರು. ಮುಖ್ಯಅತಿಥಿಗಳಾಗಿ ಕ ರಾ ನೌಕರರ ಸಂಘದ ಪ್ರಧಾನ ಕಾಯ೯ದಶಿ೯ ಶಂಕರ ಗೋಕಾವಿ ಆಗಮಿಸಿದ್ದರು ಅತಿಥಿಗಳಾಗಿ ಶಿವಾನಂದ ಕುಡಸೊಮನ್ನವರ, ಅನ್ವರ ಲಂಗೊಟಿ, ಗೂಳಪ್ಪನವರ, ಆನಂದ ಕಾದ್ರೋಳಿ, ವಿ ಡಿ ಸಾಗರ, ಬಸವರಾಜ ಸುಣಗಾರ,ರಸೂಲಖಾನ, ಅಸ್ಮಿತೆ ನಾಯಕ, ಅಕ್ಕ ಮಹಾದೇವಿ ಹುಲಗಬಾಳಿ, ಸುರೇಶ ನಾವಲಗಿ, ದೇಸೂರಕರ,ಕುಮಾರ ಚರಂತಿಮಠ,ಮಹಾಂತೇಶ ವಾಲಿ, ಕರಂಬಳಕರ, ಎನ್ ಐ ಹಕ್ಕಿ, ಸುಮಾ ದೂಡಮನಿ, ಬೇವಿನಕೊಪ್ಪಮಠ ಗುರುಗಳು ಗುರುಮಾತೆಯರು ಆಗಮಿಸಿದ್ದರು ಶಿವಾನಂದ ಹಿತ್ತಲಮನಿ ಸವ೯ರನ್ನು ಸ್ವಾಗತಿಸಿದರು. ಹಿರೇಮಠ ಮೇಡಂ ಪ್ರಾಥ೯ನೆ ಮಾಡಿದರು. ನಿವೃತ್ತರಾದವರು ತಮ್ಮ ಅನುಭವ ಹಂಚಿಕೊಂಡರು ನಿವೃತ್ತ ರಾದರು ಶಿಕ್ಷಕರಿಗೆ ಅವರ ವಿದ್ಯಾಥಿ೯ಗಳು ಸಮಾಜ ಗೌರವ ನೀಡುತ್ತದೆ ಎಂದು ಶಂಕರ ಗೋಕಾವಿಯವರು ತಿಳಿಸಿದರು ಅನೇಕ ವಿದ್ಯಾರ್ಥಿಗಳಿಗೆ ಜ್ಞಾನ ನೀಡಿ ದಾರಿ ದೀಪವಾಗಿರುತ್ತಾರೆ ಎಂದು ನುಡಿದರು
ವಿವಿಧ ಗಣ್ಯ ಮಾನ್ಯರನ್ನು ಸನ್ಮಾನಿಸಲಾಯಿತು ಅಧ್ಯಕ್ಷತೆ ವಹಿಸಿದ್ದ ಮೃತ್ಯುಂಜಯ ಸ್ವಾಮಿಗಳು ಮಾತನಾಡಿ, ಸೇವೆ ಸರಕಾರಿ ಕೆಲಸ ದೇವರ ಕೆಲಸ ಎಂದು ನಿಸ್ವಾರ್ಥದಿಂದ ಸೇವೆ ಸಲ್ಲಿಸಿದಾಗ ಗೌರವ ಲಭಿಸುವುದು ಕನ್ನಡ ಕಟ್ಟುವ ಕೆಲಸದಲ್ಲಿ ನಿರತ ರಾಗಿದ್ದನ್ನು ನಾವು ನೋಡಿದ್ದೇವೆ ಅವರಿಗೆ ದೇವರು ಆರೋಗ್ಯ ಆಯಸ್ಸು ನೀಡಲಿ ಎಂದು ಹಾರೈಸಿದರು.
ಶೈಲಜಾ ಹಂಪಿಹೊಳಿ ಎಂ ಎಸ್ ದೇಶನೂರ ನಿರೂಪಿಸಿದರು ದೊಡಬಂಗಿ ಪಾಟೀಲ ಮಠಪತಿ ಬೆವಿನಕೊಪ್ಪಮಠ ಎನ್ ಆರ್ ಮೆಳವಂಕಿ ಮಹಾಂತೇಶ ವಾಲಿಕಾರ ಇತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಕುಮಾರ ಚರಂತಿಮಠ ವಂದಿಸಿದರು