ಹಳ್ಳೂರ – ಸರಕಾರದ ಆದೇಶದಂತೆ ಅಂಗನವಾಡಿ ಕೇಂದ್ರಗಳಲ್ಲಿ ಜನವರಿ ತಿಂಗಳಿನಿಂದ ಎಲ್ ಕೆ ಜಿ ಯು ಕೆ ಜಿ ಪ್ರಾರಂಭ ಮಾಡಲಾಗಿದೆ 3, 4 ಹಾಗೂ 5 ವರ್ಷದ ಮುದ್ದು ಮಕ್ಕಳ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ಅಂಗನವಾಡಿ ಕಾರ್ಯಕರ್ತೆಯರು ಶಿಕ್ಷಣ ನೀಡುತ್ತಿದ್ದಾರೆ ಪಾಲಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸದೆ ಸರಕಾರಿ ಶಾಲೆಗೆ ಕಳುಹಿಸಿರೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಾಯ್ ಕೆ ಗದಾಡಿ ಹೇಳಿದರು.
ಅವರು ಹಳ್ಳೂರ ಗ್ರಾಮದ ಕೋಡ್ 225 ಅಂಗನವಾಡಿ ಶಾಲೆಯಲ್ಲಿ ನಡೆದ ಸಕ್ಷಮ ಯೋಜನೆ ಅಡಿಯಲ್ಲಿ ಎಲ್ ಕೆ ಜಿ ಯು ಕೆ ಜಿ ಪ್ರಾರಂಭ ಹಾಗೂ ಟಿ ವಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಅರಬಾಂವಿ ಕ್ಷೇತ್ರದಲ್ಲಿ 115 ಅಂಗನವಾಡಿ ಕೇಂದ್ರಗಳಲ್ಲಿ ಎಲ್ ಕೆ ಜಿ ಯು ಕೆ ಜಿ ಪ್ರಾರಂಭಿಸಿದ್ದೇವೆ. ಮಕ್ಕಳಿಗೆ ಸಮವಸ್ತ್ರ ಪುಸ್ತಕ ವಿತರಣೆ ಮಾಡಲಾಗಿದೆ. ಆದ್ದರಿಂದ ಪಾಲಕರು ಸಹಕಾರ ಅತೀ ಆವಶ್ಯಕವಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಸರಿಯಾದ ಸಮಯವನ್ನು ಪಾಲನೆ ಮಾಡಿ ಮಕ್ಕಳು ದೇವರ ಸಮಾನ ಸರಿಯಾದ ಆರೈಕೆ ಪೋಷಣೆ ಮಾಡಿ ಶಿಕ್ಷಣದ ಜೊತೆಗೆ ಆಟ ಪಾಠ ಕಲಿಸಿ ಮಕ್ಕಳ ಬೌದ್ಧಿಕ ಮಟ್ಟವನ್ನು ಸುಧಾರಿಸಲು ಸಹಾಯ ಮಾಡಿರೆಂದು ಹೇಳಿದರು.
ಮಕ್ಕಳಿಂದ ಕೇಕ್ ಕಟ್ ಮಾಡಿಸಿ ಸಿಹಿ ಹಂಚಿ ಸಂಭ್ರಮಿಸಿ ಹೊಸ ವರ್ಷವನ್ನು ಸ್ವಾಗತಿಸಿದರು.ಮಕ್ಕಳಿಗೆ ಪುಸ್ತಕ ಉಚಿತವಾಗಿ ನೀಡಿದರು.ಪಾಲಕರು ಮಕ್ಕಳಿಗೆ ಸಮವಸ್ತ್ರಗಳನ್ನು ನೀಡಿದರು.
ಈ ಸಮಯದಲ್ಲಿ ಅಂಗನವಾಡಿ ವಲಯ ಮೇಲ್ವಿಚಾರಕಿ ಆರ್ ಟಿ ಗುಡದೇರಿ, ಸಮಾಜ ಸೇವಕ ಮುರಿಗೆಪ್ಪ ಮಾಲಗಾರ, ಮುಖಂಡರಾದ ದಿಲೀಪ್ ಗಣಾಚಾರಿ, ಸತ್ತೆಪ್ಪ ಮೇಲಪ್ಪಗೊಳ, ಇಬ್ರಾಹಿಂ ಮುಜಾವರ, ಸುರೇಶ ಭೂತಪ್ಪಗೋಳ, ಅಂಗನವಾಡಿ ಕಾರ್ಯಕರ್ತೆಯರಾದ ಬನದವ್ವಾ ಭೂತಪ್ಪಗೊಳ, ಗಂಗವ್ವ ಪಾಲಬಾಂವಿ, ರಾಜಶ್ರೀ ಕುಲಕರ್ಣಿ, ಸಾವಿತ್ರಿ ಕದಂ, ಆಶಾ ಭೂತಪ್ಪಗೊಳ, ಲಕ್ಷ್ಮೀ ಕಿಳ್ಳಿಕೇತರ, ಕಾಜಲ್ ಬಾಗಡಿ,ಶೋಭಾ ಭೂತಪ್ಪಗೊಳ, ಲಕ್ಷ್ಮೀ ಹುರಕನ್ನವರ, ಮಮತಾ ಘಂಟಿ, ಸೈರಾ ಮುಜಾವರ ಹಾಗೂ ಮುದ್ದು ಮಕ್ಕಳಿದ್ದರು.

