spot_img
spot_img

ಆಶಾ ಕಾರ್ಯಕರ್ತೆಯರ ಸೇವೆ ಸಮಾಜಕ್ಕೆ ಸಿಗಲಿ

Must Read

- Advertisement -

ಸಿಂದಗಿ; ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಜನರಿಗೆ ತಲುಪಿಸಬೇಕಿದೆ ಮತ್ತು ನಮ್ಮ ಆಶಾ ಕಾರ್ಯಕರ್ತೆಯರೂ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ನಿಮ್ಮ ಬೇಡಿಕೆಗಳು ಈಡೇರಲಿ ಮತ್ತು ಆಶಾ ಕಾರ್ಯಕರ್ತೆಯರ ಸೇವೆ ಇನ್ನಷ್ಟು ಉತ್ತಮವಾಗಿ ಜನರಿಗೆ ತಲುಪಲು ಸಹಕಾರಿ ಯಾಗಲಿ ಎಂದು ತಾಲ್ಲೂಕು
ವೈದ್ಯಾಧಿಕಾರಿ ಎ, ಎಮ್ ಮಾಗಿ ಹಾರೈಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆವರಣದಲ್ಲಿ ಆಶಾ ಕಾರ್ಯಕರ್ತೆಯರ ತಾಲ್ಲೂಕಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಎ.ಐ.ಯುಟಿಯುಸಿ ಯ ಜಿಲ್ಲಾ ಅಧ್ಯಕ್ಷ ಹೆಚ್.ಟಿ ಮಲ್ಲಿಕಾರ್ಜುನ ಮಾತನಾಡಿ, ಆಶಾ ಕಾರ್ಯಕರ್ತೆಯರು ಯಾವುದೋ ಪಿ.ಎಚ್.ಸಿಯ ಆಧಾರ ಸ್ಥಂಭ ವಾಗದೇ ಅವರು ಇಡೀ ರಾಜ್ಯದ ಆರೋಗ್ಯ ಇಲಾಖೆಯ ಆಧಾರ ಸ್ತಂಭವಾಗಿದ್ದಾರೆ, ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ಸೇವೆ ಸಲ್ಲಿಸಿದ್ದಾರೆ, ಅಲ್ಲದೆ ಆಶಾ ಕಾರ್ಯಕರ್ತೆಯರು ಬಂದಮೇಲೆ ಸಮಾಜದಲ್ಲಿ ನವಜಾತ ಶಿಶುಗಳು ಮತ್ತು ತಾಯಂದಿರ ಸಾವು ಗಣನೀಯ ಇಳಿಕೆ ಕಂಡು ಬಂದಿದೆ ಎಂದು ವಿಶ್ವ ಸಂಸ್ಥೆಯೇ ಹೇಳಿದೆ, ಆದರೆ ಆಶಾಕಾರ್ಯಕರ್ತೆಯರಿಗೆ ನಮ್ಮ ಸರಕಾರಗಳು ಸೂಕ್ತ ಸಂಬಳ ನೀಡುತ್ತಿಲ್ಲ. ಇದುವರೆಗೆ ಅಧಿಕಾರಕ್ಕೆ ಬಂದಿದ್ದ ಬಿಜೇಪಿ, ಕಾಂಗ್ರೆಸ್, ಜೇಡಿಎಸ್ ಎಲ್ಲಾ ಪಕ್ಷಗಳು ಕಾರ್ಮಿಕರಿಗೆ ದ್ರೋಹ ಬಗೆಯುತ್ತಲೆ ಬಂದಿವೆ ಇವಾವುವೂ ಕೂಡಾ ಇಂದು ಕಾರ್ಮಿಕರ ಹಿತಾಸಕ್ತಿ ಕಾಪಾಡುತ್ತಿಲ್ಲ ಹಾಗಾಗಿ ನಮಗೆಲ್ಲಾ ಉಳಿದಿರುವುದು ಹೋರಾಟದ ದಾರಿ ಒಂದೇ ಎಂದರು, ಶ್ರೀಮಂತರು ಶ್ರೀಮಂತರಾಗುವ ಮತ್ತು ಬಡವರು ಬಡವರಾಗುವ ಈ ವ್ಯವಸ್ಥೆ ಬದಲಾಗಬೇಕು, ಬಂಡವಾಳಶಾಹಿಗಳ ಅಟ್ಟಹಾಸ ನಿಲ್ಲಿಸಬೇಕು, ನಮ್ಮ ಹೋರಾಟಗಳು ಸಾಮಾಜದಲ್ಲಿನ ಮೂಲಭೂತ ಬದಲಾವಣೆಗೆ ಪೂರಕವಾಗಲಿ, ಕಾರ್ಮಿಕರ ಹಿತ ಕಾಪಾಡುವ ರಾಜ್ಯ ಸ್ಥಾಪನೆಯಾಗಲಿ, ಕೇವಲ ಪ್ರಶಂಸೆಗೆ ಮರಳಾಗದೆ ಒಂದಾಗಿ ಹೋರಾಡಿ ಬೇಡಿಕೆ ಈಡೇರಿಸಿಕೊಳ್ಳಬೇಕಿದೆ ಎಂದರು.

- Advertisement -

ತಾಲ್ಲೂಕು ಅಧ್ಯಕ್ಷೆ ರೇಣುಕಾ ಕಲಕುಟಗೇರ ಅಧ್ಯಕ್ಷತೆ ವಹಿಸಿದ್ದರು. ಆಶಾ ಸಂಘಟನೆಯ ಜಿಲ್ಲಾ ಮುಖಂಡ ಹೆಚ್.ಟಿ ಭರತಕುಮಾರ ಉಪಸ್ಥಿತರಿದ್ದರು. ಸಮ್ಮೇಳನದ
ಎ.ಐ.ಯು.ಟಿ.ಯು.ಸಿ.ಯ ಸಂಸ್ಥಾಪನಾ ಅಧ್ಯಕ್ಷ ಕಾಮ್ರೆಡ್ ಶಿವದಾಸ್ ಘೋಷ ರವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮತ್ತು ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ನೂತನ ತಾಲ್ಲೂಕು ಸಮಿತಿಯ ರಚನೆಯಾಯಿತು, ಅಧ್ಯಕ್ಷರಾಗಿ ಜ್ಯೋತಿ ಶಾಬಾದಿ ಉಪಾದ್ಯಕ್ಷರಾಗಿ ಮಹಾನಂದ ನಾಗಮ್ಮ ಜಗದೇವಿ ರೇಣುಕಾ ಹೊಸಮನಿ, ಯಮನವ್ವ ಕಾರ್ಯದರ್ಶಿಯಾಗಿ ಮೈರುನ್ನಿಸಾ ಜಂಟಿ ಕಾರ್ಯದರ್ಶಿಗಳಾಗಿ ರೂಪಾ ಅಲಮೇಲ ಅಂಬುಬಾಯಿ, ಅನಸುಬಾಯಿ ರೇಣುಕಾ ಕನ್ನೋಳ್ಳಿ ಹಾಗು ಸಮಿತಿಯ ಸದಸ್ಯರುಗಳಾಗಿ ತುಳಸಿ, ಕವಿತಾ, ಲಕ್ಷ್ಮೀ, ವಿಜಯಲಕ್ಷ್ಮೀ, ಮಹಾದೇವಿ, ಸರಸ್ವತಿ, ಕನ್ಯಾಕುಮಾರಿ ಫಾತಿಮಾ ಶೆಖ್, ಶೋಭಾ,ಬಸಮ್ಮ ಸುನಂದ ಬೋರಮ್ಮ, ರೇಣುಕಾ, ಭಾರತಿ, ನಾಗರತ್ನ, ಮಲ್ಲಮ್ಮ, ಶಂಕ್ರಮ್ಮ ಆಯ್ಕೆಯಾದರು.

- Advertisement -
- Advertisement -

Latest News

ದಸರಾ ಕ್ರೀಡಾಕೂಟ: ಬೂದಿಹಾಳ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಬೈಲಹೊಂಗಲ: 2024-25 ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಲಕ್ಷ್ಮಿ...
- Advertisement -

More Articles Like This

- Advertisement -
close
error: Content is protected !!
Join WhatsApp Group