Homeಸುದ್ದಿಗಳುಸ್ವಾತಂತ್ರ್ಯ ಹೋರಾಟಗಾರರ ಸೇವೆ ಅನುಪಮ - ಪ್ತೊ. ಹವಾಲ್ದಾರ

ಸ್ವಾತಂತ್ರ್ಯ ಹೋರಾಟಗಾರರ ಸೇವೆ ಅನುಪಮ – ಪ್ತೊ. ಹವಾಲ್ದಾರ

spot_img

ಹುನಗುಂದ – ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ವಿಜ್ಞಾನದಲ್ಲಿ ಅನುಪಮ ಸೇವೆ ಸಲ್ಲಿಸಿದ ನಮ್ಮ ದೇಶದ ವಿಜ್ಞಾನಿಗಳು ನಿಮ್ಮಂತೆ ಮಕ್ಕಳಾಗಿದ್ದರು. ಉತ್ತಮವಾಗಿ ಅಭ್ಯಾಸ ಮಾಡಿ ಮೇಲೇರಿ ಇಂದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ವಿಜಯ ಮಹಾಂತೇಶ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಸಿ.ಜಿ. ಹವಾಲ್ದಾರ್ ಹೇಳಿದರು.

ಇಲ್ಲಿನ ಬಿಜಾಪೂರ ಇಂಟಿಗ್ರೇಟೆಡ್ ರೂರಲ್ ಡೆವ್ಹಲೆಪಮೆಂಟ್ ಸೊಸೈಟಿಯಲ್ಲಿ ಹಮ್ಮಿಕೊಂಡ ೭೯ನೇ ಸ್ವಾತಂತ್ರ್ಯೋ ತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತ, ಸ್ವಾತಂತ್ರ್ಯ ಹೋರಾಟಗಾರರ ಸೇವೆ ಅನುಪಮ ಅವರ ಸ್ಮರಣೆ ಮತ್ತು ಆದರ್ಶಗಳನ್ನು ಅನುಷ್ಠಾನಗೊಳಿಸುವುದು ಇಂದಿನ ಅಗತ್ಯವಾಗಿದೆ. ನಮ್ಮ ದೇಶ ಇಂದು ಹಸಿರು ಕ್ರಾಂತಿ, ಎಲ್ಲೋ ರೆವಲ್ಯೂಶನ್ ಹಾಗೂ ಬಾಹ್ಯಾಕಾಶದಲ್ಲಿ ಅದ್ಭುತ ಸಾಧನೆಯನ್ನು ಮಾಡಿದೆ. ನಮ್ಮ ನಾಡು, ನುಡಿ, ಕಲೆ, ಸಂಸ್ಕೃತಿ ಮತ್ತು ಇತಿಹಾಸವನ್ನು ಅರಿತುಕೊಂಡು ಹೆಮ್ಮೆ ಪಡೋಣ ಎಂದು ಹವಾಲ್ದಾರ ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷೆ ಮಹಾದೇವಿ ಕಡಪಟ್ಟಿ ಮತ್ತು ಸಂಸ್ಥೆಯ ಅಜೀವ ಸದಸ್ಯ ವೀರೇಶ ಕುರ್ತಕೋಟಿ ಉಪಸ್ಥಿತರಿದ್ದರು. ಸಂಸ್ಥಾಪಕ ಅರ‍್ಯದರ್ಶಿ ಮಹಾಂತೆಶ ಅಗಸಿಮುಂದಿನ ಸ್ವಾಗತಿಸಿ ನಿರೂಪಿಸಿದರು. ಸಂಸ್ಥೆಯ ಸಿಇಒ ಪ್ರವೀಣ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group