ಬೆಳಗಾವಿ – ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿಯ ಒಂದನೇ ಘಟಕದಲ್ಲಿ ಸಾರಿಗೆ ನಿಯಂತ್ರಕರಾಗಿದ್ದ ವಿ. ಎಮ್. ಅಂಗಡಿ ಮತ್ತು ಅಗಸಿಮನಿಯವರ ಸೇವಾ ನಿವೃತ್ತಿ ಸಮಾರಂಭ ದಿ. ೩೧ ರಂದು ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಘಟಕ ವ್ಯವಸ್ಥಾಪಕರಾದ ಎಲ್. ಎಸ್. ಲಾಠಿಯವರು ಮಾತನಾಡುತ್ತ, ಅಂಗಡಿಯವರ ಶಿಸ್ತು ಸಂಯಮ ಆದರ್ಶಗಳು ನಮ್ಮ ಸಂಸ್ಥೆಗೆ ಒಳ್ಳೆಯ ಕೀರ್ತಿಯನ್ನು ತಂದು ಕೊಟ್ಟಿವೆ ಎಂದು ಹೇಳಿ ಅಂಗಡಿಯವರ ಸುದೀರ್ಘ 34 ವರ್ಷಗಳ ಸಾರ್ಥಕ ಸೇವೆಯನ್ನು ಮನಸಾರೆ ಹೊಗಳಿದರು.
ಸಹಾಯಕ ಸಂಚಾರ ಅಧೀಕ್ಷಕರಾದ ಜಟಗೊಂಡ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಅಂಗಡಿಯವರು ಹಾಗೂ ಅಗಸಿಮನಿಯವರ ಅಮೋಘ ಸೇವೆಯನ್ನು ಶ್ಲಾಘಿಸಿದರು.
ನಿರ್ವಹಕರಾದ ವಿಭೂತಿಯವರು ಕಾರ್ಯಕ್ರಮ ನಿರೂಪಿಸಿದರು. ಕೌಜಲಗಿಯವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಮಿಕ ಮುಖಂಡರಾದ ಸಿ. ಎಸ್. ಬಿದ್ನಾಳ್, ಎಸ್. ಎನ್. ಬೆಣ್ಣಿ, ನಿಂಗಪ್ಪ ಚವಲಗಿ, ಬಿಳ್ಳೂರ್, ತಮ್ಮನಕಟ್ಟಿ ಮತ್ತು ಬೆಳಗಾವಿ ವಿಭಾಗದ ಎಲ್ಲ ಸಹೋದ್ಯೋಗಿಗಳು ಉಪಸ್ಥಿತರಿದ್ದರು.